ಚಿಕ್ಕಮಗಳೂರು | ಪೊಲೀಸರ ಎದುರೇ ಕತ್ತು ಕುಯ್ದುಕೊಂಡ ಯುವಕ ; ಆಸ್ಪತ್ರೆಯಲ್ಲಿ ಹೊಲಿಗೆ ಹಾಕುತ್ತಿದ್ದಂತೆ ಪರಾರಿ

ಚಿಕ್ಕಮಗಳೂರು

ಚಿಕ್ಕಮಗಳೂರು ಪೊಲೀಸರ ಎದುರೇ ಯುವಕನೊಬ್ಬ ಬ್ಲೆಡ್ ನಿಂದ ಕತ್ತು ಕುಯ್ದುಕೊಂಡ ಆಘಾತಕಾರಿ ಘಟನೆ ವರದಿಯಾಗಿದೆ.

ಅಪ್ಪ ಅಮ್ಮ ತಂಗಿ ಎಲ್ಲರನ್ನು ಕಳೆದುಕೊಂಡಿರುವ ಪುನೀತ್ (ಅಪ್ಪು ) ಎಂಬ ವ್ಯಕ್ತಿ ಪೊಲೀಸರ ಎದುರೇ ತಮಗೆ ನ್ಯಾಯ ಒದಗಿಸಿಕೊಡಿ ಎಂದು ಪೊಲೀಸರ ಬಳಿ ಬಂದು ಕತ್ತು ಕುಯ್ದುಕೊಂಡಿದ್ದಾನೆ.

ಅಪ್ಪನ ಅಕ್ಕ ಅಂದರೆ ಅತ್ತೆ ಬಳಿ ಸೈಟ್ ವಿಚಾರಕ್ಕೆ ಜಗಳವಾಗಿದೆ ಎಂದು ತಿಳಿದುಬಂದಿದೆ. ಅಪ್ಪ-ಅಮ್ಮ ಮಾಡಿದ 15/20 ಸೈಟಿನ ಎರಡು ಮನೆಗಾಗಿ ಅತ್ತೆಯೊಂದಿಗೆ ಯುವಕ ಜಗಳವಾಗಿದೆ.

ಇದೆ ವಿಚಾರ ಸಂಬಂಧ ಅತ್ತೆ ಬಳಿ ಹಣ ಕೇಳಿದ್ದಾನೆ ಎನ್ನಲಾಗಿದೆ. ಈ ವೇಳೆ ಅತ್ತೆ ಹಣ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಪೊಲೀಸರ ಬಳಿ ನ್ಯಾಯ ಕೇಳಲು ಬಂದ ಯುವಕ ಬ್ಲೆಡ್ ನಿಂದ ಕತ್ತು ಕುಯ್ದುಕೊಂಡಿದ್ದಾನೆ.

ಈ ವೇಳೆ ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ದಾಖಲೀಸಲಾಗಿದೆ.ಹಾಗೂ ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನರ್ಸ್ ಗಳು ಹೊಲಿಗೆ ಹಾಕುತ್ತಿದ್ದಂತೆ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಬಳಿ ಈ ಒಂದು ಘಟನೆ ನಡೆದಿದೆ

Author