ಶಿವಮೊಗ್ಗ | ರಸ್ತೆ ಮಧ್ಯೆ ಎಲ್ಲೆಂದರಲ್ಲಿ ಕಾರುಗಳು ನಿಲ್ಲಿಸುವ ಮಾಲೀಕರೇ / ಚಾಲಕರೇ, ಇದು ಸರಿಯೇ ?

ಶಿವಮೊಗ್ಗ

ಶಿವಮೊಗ್ಗ, ಕಾರುಗಳನ್ನು ಇಟ್ಟುಕೊಂಡಿರುವ ಪ್ರಜ್ಞಾವಂತ ನಾಗರೀಕರೆ ನಿಮ್ಮಲಿ ನಮ್ಮ ಸುದ್ದಿ ಮೂಲಕ ಒಂದು ಮನವಿ, ಕೆಲವು ಕಾರ್ ಮಾಲೀಕರು ಹಾಗೂ ಚಾಲಕರು ನಗರದ ರಸ್ತೆ ಮಧ್ಯೆ, ಫುಟ್ ಪಾತ್ ನಲ್ಲಿ ಎಲ್ಲೆಂದರಲ್ಲಿ ಕಾರು ನಿಲ್ಲಿಸಿ ವ್ಯಾಪಾರ, ವಹಿವಾಟು ಇನ್ನಿತರೇ ಕೆಲಸಕ್ಕೆ ಅಂತ ನೀವುಗಳೆನೋ ತೆರಳುತ್ತೀರ,

ಆದರೆ ಪಾರ್ಕಿಂಗ್ ಮಾಡಿರುವ ದ್ವಿಚಕ್ರ ವಾಹನ ಸವರಾರು ತಮ್ಮ ವಾಹನ ತೆಗೆಯಲು ಎಷ್ಟು ಪರದಾಟ ನಡೆಸುವಂತೆ ಆಗುತ್ತೆ ನಿಮಗೆ ಗೊತ್ತಾ?

ನಿಮ್ಮ ಕೆಲಸ ಎಷ್ಟು ಮುಖ್ಯವಿರತ್ತೋ ಹಾಗೆ ಮತ್ತೊಬ್ಬರಿಗೂ ಕೆಲಸ ಮತ್ತೊಂದು ಇರತ್ತೆ ಹಾಗೂ ತಾವು ಕಾರ್ ಓನರ್ ಆಗಿದ್ದೀರಾ ಅಂತ ಶ್ರೀಮಂತಿಕೆಯಿದೆ ಅಂತಾನೋ ಗೊತ್ತಿಲ್ಲ, ನೊ-ಪಾರ್ಕಿಂಗ್ ಬಿಟ್ಟು ರಸ್ತೆಯ ಮಧ್ಯೆ ಕಾರುಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟು ಆದರೂ ತಾವುಗಳು ತಲೆಕೆಡೆಸುಕೊಳ್ಳುವುದಿಲ್ಲ, ಇದು ಇಂದಿನ ವಿಚಾರವಲ್ಲ, ಪ್ರತಿದಿನ ನಗರದಲ್ಲಿ ಈ ರೀತಿಯ ಸಮಸ್ಯೆ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು ಅನುಭವಸುತ್ತಿದ್ದಾರೆ.

ಕಾರು ಮಾಲೀಕರಾದ ತಾವುಗಳು ಟ್ರಾಫಿಕ್ ಪೊಲೀಸ್ ಇಲಾಖೆ ಮೇಲೆ ಒತ್ತಡ ಅಥವಾ ಇನ್ಫ್ಲುಯೆನ್ಸ್ ಮತ್ತೊಂದು ತಂದು ತಮಗೆ ದಂಡ ವಿಧಿಸಲು ತಡೆಯಬಹುದು ಎಂಬ ಯಾವದಾದರೂ ದುರುದ್ದೇಶವಿಟ್ಟುಕೊಂಡು ತಾವುಗಳು ರಸ್ತೆ ಮಧ್ಯೆ ಕಾರು ನಿಲ್ಲಿಸುತ್ತಿರೇನೋ ತಿಳಿಯದು..!

ನಮ್ಮ ಈ ಸುದ್ದಿ ದಂಡ ವಿಧಿಸುವ ಪ್ರಕ್ರಿಯೆ ಏನಿದ್ದರೂ ನಂತರದ್ದು ಆದರೆ ವಾಸ್ತವ ವಿಷಯಕ್ಕೆ ಹೇಳುವುದಾದರೆ ತಮ್ಮ ಬಳಿ ಕಾರ್ ಇದೆ ಎಂಬ ಒಂದೇ ಕಾರಣಕ್ಕೆ ರಸ್ತೆ ಮಧ್ಯೆದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಬೇರೆ ಅವರಿಗೆ ತೊಂದರೆ ನೀಡಬೇಡಿ ಎಂಬದು ನಮ್ಮ ಸುದ್ದಿ ಮೂಲಕ ಮಾಹಿತಿಯಾಗಿದೆ.ತಾವುಗಳು ಎಷ್ಟೇ ದೊಡ್ಡವರು ಆಗಿದ್ದರು ನಿಮಗೆ ತೊಂದರೆ ಆದಲ್ಲಿ ಎಷ್ಟು ವಿಚಲಿತ ಆಗುತ್ತಿರೋ ಹಾಗೆಯೇ ಮತ್ತೊಬ್ಬರಿಗೆ ನಾವು ತೊಂದರೆ ಉಂಟು ಮಾಡಬಾರದು ಎಂಬುದನ್ನ ಮನದಲ್ಲಿಟ್ಟುಕೊಳ್ಳಿ.

ಈ ದಿನ ಸಂಜೆ ಹೊಳೆ ಸ್ಟಾಪ್ ಬಳಿ ಮಾರುತಿ ಕಾರ್ ಒಂದು ರಸ್ತೆ ಮಧ್ಯೆ ನಿಲ್ಲಿಸಿ ಹೋದ ಕಾರಣ ತುರ್ತಾಗಿ ಗಾಡಿ ತೆಗೆಯಲು ವಾಹನ ಸವಾರರೊಬ್ಬರು ಪರದಾಡಿದ ಸಂಗತಿ ನಮ್ಮ ಮಾಧ್ಯಮ ಗಮನಕ್ಕೆ ಬಂದಿದೆ.

ಹಾಗಾಗಿ ಈ ರೀತಿ ರಸ್ತೆಯಲ್ಲಿ ಕಾರ್ ನಿಲ್ಲಿಸಿ ಈ ರೀತಿ ತೊಂದರೆ ಉಂಟುಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯಾಗಿದೆ?

ತಾವು ಎಷ್ಟೇ ಪ್ರಭಾವಿ ಆಗಿದ್ದರು ಮತ್ತೊಬ್ಬರಿಗೆ ತೊಂದರೆ ಉಂಟು ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಿಮಗೆ ಈ ರೀತಿಯ ತೊಂದರೆ ಉಂಟಾದಲ್ಲಿ ತಾವುಗಳು ಟ್ರಾಫಿಕ್ ಪೊಲೀಸ್ ಇಲಾಖೆಯ ಮೊರೆ ಹೋಗುವುದಿಲ್ಲವೇ?

ಹಾಗಾಗಿ ಈ ಮೂಲಕ ರಸ್ತೆ ಮಧ್ಯೆ ಕಾರ್ ನಿಲ್ಲಿಸಿದ್ದನ್ನ ತಿಳಿಸುತ್ತಿದ್ದೇವೆ ಇದೆ ರೀತಿ ನಗರದಲ್ಲಿ ಹಲವು ಕಾರ್ ಚಾಲಕರು ಅಥವಾ ಮಾಲೀಕರು ಎಲ್ಲೆಂದರಲ್ಲಿ ರಸ್ತೆ ಮಧ್ಯೆ ಕಾರ್ ಗಳನ್ನು ನಿಲ್ಲಿಸುತ್ತಿದ್ದಾರೆ.

ಇದನ್ನು ಟ್ರಾಫಿಕ್ ಪೊಲೀಸ್ ಸಹ ಕಾನೂನು ಮೂಲಕ ಪಾಠ ಮಾಡಬೇಕು, ಈ ರೀತಿ ನಡೆದುಕೊಳ್ಳುವ ಕಾರು ಚಾಲಕರು ಹಾಗೂ ಮಾಲೀಕರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕು, ಯಾವದೇ ಒತ್ತಡ ಬಂದರು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.

ಯಾರಿಂದ ಒತ್ತಡ ಬರುತ್ತೆ ಅನ್ನುವ ಮಾಹಿತಿಯನ್ನ ಟ್ರಾಫಿಕ್ ಪೊಲೀಸ್ ಇಲಾಖೆಯು ಮಾಧ್ಯಮ ಹಾಗೂ ಎಸ್ಪಿ ಅವರ ಗಮನಕ್ಕೆ ಮಾಹಿತಿ ತರಬೇಕು.

ಕಾರು ಚಾಲಕರು ಅಥವಾ ಮಾಲೀಕರು ಸಹ ತಮ್ಮಿಂದ ಬೇರೆ ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಮುಖೇಣ ಪಾರ್ಕಿಂಗ್ ಇರುವ ಜಾಗಗಳಲ್ಲಿ ಕಾರ್ ಪಾರ್ಕಿಂಗ್ ಮಾಡುವುದರಿಂದ ಇತರೆ ವಾಹನ ಸವಾರರಿಗೆ ಆಗುವ ತೊಂದರೆ ತಪ್ಪುವಂತೆ ನಡೆದುಕೊಳ್ಳಬೇಕು.

ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಹಿಂಬದಿ ವಾಹನಗಳಿಗೆ ಆಗುತ್ತಿರುವ ಸಮಸ್ಯೆಯನ್ನ ಟ್ರಾಫಿಕ್ ಪೊಲೀಸ್ ಇಲಾಖೆ ಬಗೆಹರಿಸಬೇಕಿದೆ.

ನಗರದಲ್ಲಿ ಎಲ್ಲೆಂದರಲ್ಲಿ ಕಾರು ನಿಲ್ಲಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂಬ ಸಂದೇಶವನ್ನು ಟ್ರಾಫಿಕ್ ಪೊಲೀಸ್ ಇಲಾಖೆಯು ರವಾನಿಸಬೇಕಿದೆ.

Author