ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಕೇಂದ್ರ ಅರಣ್ಯ ಮಂತ್ರಾಲಯ ಒಪ್ಪಿಗೆ ನೀಡಿಲ್ಲ : ಕೇಂದ್ರ ಅರಣ್ಯ-ಪರಿಸರ ಸಚಿವ ಯಾದವ್ ಸ್ಪಷ್ಟನೆ

ಉತ್ತರ ಕನ್ನಡ

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯ ಜೀವಿ ಇಲಾಖೆ ಒಪ್ಪಿಗೆ ನೀಡಿಲ್ಲ” ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಸ್ಪಷ್ಟಪಡಿಸಿದ್ದಾರೆ.ಜೊತೆಗೆ ಬೇಡ್ತಿ-ಅಘನಾಶಿನಿ ನದೀ ತಿರುವು ಯೋಜನೆಗಳ ಬಗ್ಗೆ ಯಾವುದೇ ಅರಣ್ಯ ಪ್ರಸ್ತಾವನೆ ಬಂದಿಲ್ಲ” ಎಂದು ತಿಳಿಸಿದರು.

ವೃಕ್ಷಲಕ್ಷ ಆಂದೋಲನ, ಬೇಡ್ತಿ ಸಮೀತಿ, ಪಶ್ಚಿಮ ಘಟ್ಟ್ ಉಳಿಸಿ ಆಂದೋಲನದ ನಿಯೋಗ ಇತ್ತೀಚೆಗೆ ದೆಹಲಿಯಲ್ಲಿ ಅರಣ್ಯ-ಪರಿಸರ ಸಚಿವ ಭೂಪೇಂದ್ರ ಯಾದವ್ ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿತ್ತು.

ನಿಯೋಗ ಶರಾವತಿ ಪಂಪ್ ಸ್ಟೋರೇಜ್ ಯೋಜನೆ, ಬೇಡ್ತಿ-ಅಘನಾಶಿನಿ ನದೀ ತಿರುವು ಯೋಜನೆಗಳಿಗೆ ಅರಣ್ಯ-ಪರಿಸರ ಅನುಮತಿ ನೀಡಬಾರದು ಎಂದು ಆಗ್ರಹಿಸಿತು.

ಈ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವರು “ಫೆಡರಲ್ ವ್ಯವಸ್ಥೆಯಲ್ಲಿ ಕೇಂಧ್ರ-ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ. ಪಶ್ಚಿಮ ಘಟ್ಟದ ನದೀ ಕಣಿವೆಗಳ ಉಳಿವಿಗೆ ಸರ್ಕಾರ ಮತ್ತು ಜನ ಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಬಾರದು.

ಭಾರೀ ಭೂಕುಸಿತ, ಜಲ ಸಂಕಷ್ಟದ ಇಂದಿನ ಸಂದರ್ಭದಲ್ಲಿ. ಸಹ್ಯಾದ್ರಿ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಶರಾವತಿ, ಕಾವೇರಿ, ಬೇಡ್ತಿ-ಅಘನಾಶಿನಿ, ಕಾಳಿ ಕಣಿವೆಗಳ ಅರಣ್ಯ, ಜೀವವೈವಿಧ್ಯ ಅತಿ ಅಮೂಲ್ಯ. ಎಂದು ಅಭಿಪ್ರಾಯ ಪಟ್ಟರು.

ಪಶ್ಚಿಮ ಘಟ್ಟ ಉಳಿಸಿ ನಿಯೋಗದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕಾ ಸಚಿವ ಮಂಕಾಳು ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಶಾಂತಾರಾಂ ಸಿದ್ಧಿ ವೃಕ್ಷಲಕ್ಷ ಆಂದೊಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವನ್ಯಜೀವಿ ತಜ್ಞ ಡಾ| ಬಾಲಚಂದ್ರ ಸಾಯಿಮನೆ, ಬೇಡ್ತಿ ಸಮೀತಿ ಸಂಚಾಲಕ ನಾರಾಯಣ ಗಡೀಕೈ ಮುಂತಾದವರಿದ್ದರು.

ಶಿವಮೊಗ್ಗ್ಗಮತ್ತು ಉ.ಕ ಜಿಲ್ಲೆಗಳಿಗೆ ಕೇಂದ್ರ ಅರಣ್ಯ ಸಚಿವರು ಭೇಟಿ ನೀಡಲು ಮನವಿ ಮಾಡಿದರು. ಉನ್ನತ ಅರಣ್ಯ ಅಧಿಕಾರಿಗಳ ಪರಿಶೀಲನಾ ತಂಡವನ್ನು ಪಶ್ಚಿಮಘಟ್ಟಕ್ಕೆ ಕಳಿಸಿ ಎಂದು ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಅಶೀಸರ ಕೋರಿಕೆ ಸಲ್ಲಿಸಿದರು.

ಸಚಿವ ಭೂಪೇಂದ್ರ ಯಾದವ್ ಅವರು ಈ ಮನವಿಗೆ ಒಪ್ಪಿಗೆ ಸೂಚಿಸಿದರು.ಆರಂಭದಲ್ಲಿ ಅರಣ್ಯ ಪರಿಸರ ಇಲಾಖೆ ಕಾರ್ಯದರ್ಶಿ ತನ್ಮಯ ಕುಮಾರ್ ಅವರ ಜೊತೆ ವೃಕ್ಷ ನಿಯೋಗ ಶರಾವತಿ ಕಣಿವೆ ಬಗ್ಗೆ ಚರ್ಚಿಸಿತು. ಅಧ್ಯಯನ ವರದಿಗಳನ್ನು ನೀಡಿ ಪವರ್ ಪಾಯಿಂಟ್ ಮಂಡನೆ ಮಾಡಲಾಯಿತು.

Author