ಶಿವಮೊಗ್ಗ ನಗರ ಮತ್ತು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಸಮಿತಿ ಸುವ್ಯವಸ್ಥೆ ಧಕ್ಕೆ ತರುವ ದೂರುದ್ದೇಶದಿಂದ,
ಮಾನ್ಯ ಪ್ರಧಾನ ಮಂತ್ರಿಗಳ ಭಾವಚಿತ್ರವನ್ನು ಬಳಸಿಕೊಂಡು ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬಳಸಿಕೊಂಡು ಸಂಚು ರೂಪಿಸಿ ಸುಳ್ಳು ಸುದ್ದಿಯನ್ನು ಪೋಸ್ಟರ್ ಹಾಕಿ ರಾಜಕೀಯ ದಂಗೆಗೆ ಪ್ರಚೋದಿಸುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಅಗ್ರಹ ಪ್ರತಿ ಯನ್ನು ಕೊಡಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರಶ್ಮಿ ಶ್ರೀನಿವಾಸ್ ,ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಾ ಭೂಪಲಂ, ಜಿಲ್ಲಾ ಕಾರ್ಯದರ್ಶಿ ಶಾಂತ ಸುರೇಂದ್ರ , ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಶ್ರೀನಿವಾಸ, ಮಹಿಳಾ ಮೋರ್ಚಾ ಕಾರ್ಯದರ್ಶಿ ಚೈತ್ರ ಪೈ,ಮಹಿಳಾಉಪಾಧ್ಯಕ್ಷ ಸುರೇಖಾ ಪಾಲಾಕ್ಷಿ ಶಿವಮೊಗ್ಗ ನಗರ ಸಮಿತಿ ಸದಸ್ಯರು ನಂದಿನಿ, ಪಾರ್ವತಮ್ಮ ವಿನುತಾ ಜಿಲ್ಲಾ ಸದಸ್ಯ ಸವಿತಾ ನಗರ ಸಮಿತಿ ಸದಸ್ಯ ಸುವರ್ಣ,ಮಂಜುಳಮ್ಮ ಉಮಾ ಸರಳ ಉಪಸ್ಥಿತರಿದ್ದರು..



