ಶಿವಮೊಗ್ಗದಲ್ಲಿ ಅಖಿಲ ಭಾರತ ಮಟ್ಟದ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಸಂಸ್ಥೆ ಸ್ಥಾಪನೆಗೆ ಸಂಬಂಧಿಸಿದಂತೆ, ಪೂರ್ವದಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಕೇಂದ್ರ ಆಯುಷ್ ರಾಜ್ಯ ಸಚಿವರಾದ ಪ್ರತಾಪ್ ರಾವ್ ಜಿ ಜಾಧವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ದಿಕ್ಕಿನಲ್ಲಿ ಮುಂದಿನ ಹಂತಗಳ ಬಗ್ಗೆ ಸಕಾರಾತ್ಮಕ ಮಾತುಕತೆ ನಡೆಯಿತು. ಇತ್ತೀಚಿನ ಕೇಂದ್ರ ಬಜೆಟ್ ಭಾರತೀಯ ಸಂಪ್ರದಾಯಬದ್ಧ ಆಯುರ್ವೇದಕ್ಕೆ ಹೊಸ ಉತ್ತೇಜನ ನೀಡಿದ್ದು, ಸಾರ್ವಜನಿಕ ಆರೋಗ್ಯ ಸವಾಲುಗಳಿಗೆ ಪರಿಹಾರವಾಗಿ ಅದರ ಪಾತ್ರವನ್ನು ಬಲಪಡಿಸಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಯೋಗವನ್ನು ದಿನನಿತ್ಯದ ಜೀವನಶೈಲಿಯಾಗಿ ಸದಾ ಉತ್ತೇಜಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಈ ಮಹತ್ವದ ಪ್ರಸ್ತಾವನೆಗೆ ಅಗತ್ಯವಾದ ಬೆಂಬಲ ದೊರೆಯುವ ವಿಶ್ವಾಸವಿದೆ ಎಂದು ಸಂಸದರು ತಿಳಿಸಿದ್ದಾರೆ.



