ಸಾಗರ ತಾಲೂಕು ಆನಂದಪುರ ಹೋಬಳಿಯ ಆನಂದಪುರ ,ನರಸೀಪುರ, ಕಣ್ಣೂರು, ಸಂಪಳ್ಳಿ, ಕೋಟೆ ಕೊಪ್ಪ, ಭಾಗದ ನಾಗರಿಕರಿಗೆ ಕೊರೊನ ಸಂದರ್ಭದ ನಂತರದ ದಿನಗಳಲ್ಲಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ತೀವ್ರ ತೊಂದರೆಯಾಗಿತ್ತು.
ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರು ಸಂಬಂಧಪಟ್ಟ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆ ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಪ್ರಯತ್ನ ಫಲವಾಗಿ ಇಂದಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಆರಂಭವಾಗಿದೆ.
ಆನಂದಪುರ ಕೋಟೆಕೊಪ್ಪ ತ್ಯಾಗರ್ತಿ ಮಾರ್ಗವಾಗಿ ಬರುವ ಎಲ್ಲಾ ಹಳ್ಳಿಗಳ ಮೂಲಕ ತ್ಯಾಗರ್ತಿ ತಲುಪಿ ಮತ್ತೆ ಅನಂದಪುರ ಮಾರ್ಗವಾಗಿ ಸಾಗರ ತಲುಪುವ ವ್ಯವಸ್ಥೆ ಮಾಡಲಾಗಿದೆ.
ತಮ್ಮೂರಿಗೆ ಬಸ್ ಬಂದ ಖುಷಿಯಲ್ಲಿ ಕೋಟೆಕೊಪ್ಪ ಸೇರಿದಂತೆ ಆ ಭಾಗದ ಎಲ್ಲಾ ಗ್ರಾಮಸ್ಥರು ಸಾಗರ ಶಾಸಕರು ಮತ್ತು ಕರ್ನಾಟಕ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.



