ಶಿವಮೊಗ್ಗ | ಖಾಸಗಿ ಸಂಶೋಧನ ಸಂಸ್ಥೆಗಳಿಂದ ಎಲೆ ಚುಕ್ಕಿ ರೋಗಕ್ಕೆ ಔಷಧಿ ಸಂಶೋಧನೆಗೆ ಅಡಿಕೆ ಮಹಾಮಂಡಲದಿಂದ ನಿರ್ಧಾರ

ಶಿವಮೊಗ್ಗ

ಶಿವಮೊಗ್ಗ ಮ್ಯಾಮಕೋಸ್ ಸಭಾಂಗಣದಲ್ಲಿ ಇಂದು ಶಾಸಕರು ಅಡಿಕೆ ಮಹಾಮಂಡಲ ಅಧ್ಯಕ್ಷರಾದ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಮಂಡಲ ಸಭೆಯಲ್ಲಿ ರೈತರನ್ನು ತೀವ್ರವಾಗಿ ಬಾಧಿಸುತ್ತಿರುವ ಎಲೆಚುಕ್ಕಿ ರೋಗಕ್ಕೆ ಔಷದಿಯನ್ನು ವಿವಿಧ ಖಾಸಗಿ ಸಂಶೋಧನ ಸಂಸ್ಥೆಗಳಿಂದ ನಡೆಸಿ ಪರಿಹಾರ ಕಂಡುಕೊಳ್ಳಲು ನಿರ್ಧಾರಿಸಲಾಯಿತು.

ಸುಮಾರು 33 ವಿವಿಧ ಅಡಿಕೆ ಬೆಳೆಗಾರರ ಸಂಘ ಸಂಸ್ಥೆಗಳ ಪ್ರಮುಖರು ಭಾಗಿಯಾಗಿದ್ದ ಈ ಸಭೆಯಲ್ಲಿ ಶೀಘ್ರದಲ್ಲಿ ಎಲೆಚುಕ್ಕಿ ರೋಗದ ಆತoಖದಿಂದ ರೈತರನ್ನು ಹೊರ ತರಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸಬಹುದೋ,

ಅವೆಲ್ಲಾ ಮಾರ್ಗಗಳಲ್ಲಿ ಸಾಗಿ ರೈತರ ತೋಟಗಳ ಎಲೆಚುಕ್ಕಿ ರೋಗದ ಸಮಸ್ಯೆ ಬಗೆಹರಿಸುವ ನಿರ್ಣಯ ಮತ್ತು ನಿರ್ಧಾರ ತೆಗೆದುಕೊಳ್ಳಲಾಯಿತು.

Author