ಶಿವಮೊಗ್ಗ ಕೇಂದ್ರ ಕಾರಗೃಹದ ಒಳಗಡೆ ಗಾಂಜಾ ಮೊಬೈಲ್ ಸಿಗರೇಟ್, ಲೈಟರನ್ನು ಕಪ್ಪು ಬಣ್ಣದ ಗಮ್ ಟೇಪ್ ನಿಂದ ಪ್ಯಾಕ್ ಮಾಡಿ ದಿನಾಂಕ 01 ಫೆಬ್ರವರಿ 2026 ರ ಬೆಳಗಿನ ಜಾವಾ ಕೇಂದ್ರ ಕಾರಗೃಹದೊಳಗೆ ಅನಾಮಧೇಯ ವ್ಯಕ್ತಿಗಳು ಎಸೆದು ಹೋಗಿರುತ್ತಾರೆ.
ಈ ಘಟನೆ ಸಂಬಂಧ ಕೇಂದ್ರ ಕಾರಗೃಹ ಅಧಿಕ್ಷಕರಾದ ಪರಮೇಶ್ ಎಚ್ ಅವರು ತುಂಗಾ ನಗರ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಪ್ರಕರಣ ಸಂಬಂಧ ಎಸ್ಪಿ ನಿಖಿಲ್ ಅವರ ಆದೇಶದ ಮೇರೆಗೆ ಕಾರ್ಯಾಚರಣೆಗೆ ಇಳಿದ ತುಂಗಾ ನಗರ ಠಾಣೆ ಪೊಲೀಸರು ಕಾರಗೃಹದೊಳಗೆ ಗಾಂಜಾ,ಸಿಗರೇಟ್, ಮೊಬೈಲ್ ಮತ್ತು ಲೈಟರ್ ಎಸದಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಅದರಂತೆ ಈ ಕೆಳಕಂಡ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ, ಮೊಹಮ್ಮದ್ ಖಲಂದರ್ @ಕಲ್ಲು (23) ಅಬ್ದುಲ್ ಮುನಾಫ್ @ಮುನ್ನ (30) ವಿಜಯ್ (19),ಪರಶುರಾಮ್ (19) ಆರೋಪಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ, ಅದರಂತೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಅದೇಶಿಸಿರತ್ತೆ.



