ಶಿವಮೊಗ್ಗ | ಪಿಎಸ್‌ಐಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದ ಅಣ್ಣ-ತಮ್ಮಂದರಿಗೆ ಶಿಕ್ಷೆ ದಂಡ, ಪರಿಹಾರ ತೆರಲು ಆದೇಶ

ಶಿವಮೊಗ್ಗ

ಶಿವಮೊಗ್ಗ, ಗಾಂಜಾವನ್ನು ಅಮಾನತ್ತು ಪಡಿಸಿಕೊಳ್ಳಲು ಆರೋಪಿತರ ಮನೆಗೆ ಹೋದ ಪೊಲೀಸರು ಮಧುಕುಮಾರ್ ಎನ್ನುವನನ್ನು ತನಿಖೆಯ ಸಂಬಂಧ ಕರೆದುಕೊಂಡು ಹೋಗುತ್ತಿರುವಾಗ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಲ್ಲದೆ, ಆರೋಪಿ ತಪ್ಪಿಸಿಕೊಂಡು ಹೋಗಲು ಸಹಕರಿಸಿದ ಆತನ ತಮ್ಮ ಮನುಕುಮಾರ್ ಗೆ ಆರೋಪಿಗೆ ನ್ಯಾಯಾಲಯ 2 ವರ್ಷ ಕಾರಾವಾಸ ಮತ್ತು ಪ್ರತಿಯೊಬ್ಬರಿಗೂ ೧೭,೫೦೦ ರೂ ದಂಡವನ್ನು ವಿಧಿಸಿದೆ.

2022ರಲ್ಲಿ ಈ ಘಟನೆ ಕುಂಸಿ ಠಾಣೆ ವ್ಯಾಪ್ತಿಯ ಆಯನೂರು ಸಮೀಪದ ಮಂಡಘಟ್ಟದಲ್ಲಿ ನಡೆದಿತ್ತು. ಪಿರ್ಯಾದುದಾರರಾದ ಪಿಎಸ್ ಐ ನವೀನ್ ಮಠಪತಿ ಮತ್ತು ಠಾಣೆಯ ಸಿಬ್ಬಂದಿಯವರು ಗುನ್ನೆ ನಂ: ೧೬೩/೨೦೨೦ರಲ್ಲಿ ಗಾಂಜಾ ಕೇಸ್ ಹಿನ್ನೆಲೆಯಲ್ಲಿ ಮಧುಕುಮಾರ್‌ನನ್ನು ಬಂಧಿಸಿದ್ದರು.

ನಂತರ ಆತನನ್ನು ಹೆಚ್ಚಿನ ವಿಚಾರಣೆಗೆ ಕರೆದೊಯ್ಯುವ ವೇಳೆ ಮತ್ತೊಬ್ಬ ಸಹೋದರ ಮನುಕುಮಾರ್ ಪಿಎಸ್‌ಐಗೆ ಹಲ್ಲೆ ನಡೆಸಿದ್ದನು. ಬಳಿಕ ಮಧು ಸಹ ತಪ್ಪಿಸಿಕೊಂಡು ದೊಣ್ಣೆಯಿಂದ ಪೊಲೀಸರಿಗೆ ಹಲ್ಲೆ ನಡೆಸಿದ್ದನು ಮತ್ತು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿ ಓಡಿಹೋಗಿದ್ದನು.

ಪೊಲೀಸರು ಕರ್ತವ್ಯಕ್ಕೆ ಅಡ್ಡಪಡಿಸಿ ಹಲ್ಲೆ ಮಾಡಿದವರ ವಿರುದ್ಧ ಪಿಎಸ್‌ಐ ರವರು ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆ ಗುನ್ನೆ ನಂ ೧೬೪/೨೦೨೦ ಕಲಂ ೩೨೪, ೫೦೪, ೩೦೭, ೩೫೩, ೩೩೨, ೧೮೬, ೩೨೩, ೫೦೬ ಸಹಿತ ೩೪ ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಆಗಿನ ತನಿಖಾಧಿಕಾರಿ ಗ್ರಾಮಾಂತರ ಸಿಪಿಐ ಆಗಿದ್ದ ಸಂಜೀವ್‌ಕುಮಾರ್ (ಹಾಲಿ ಡಿವೈಎಸ್ಪಿ ಶಿವಮೊಗ್ಗ ಉಪವಿಭಾಗ) ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು. ೩ ನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಯಶವಂತ ಕುಮಾರ್ ಫೆ. ೬ ರಂದು ಮೊಲದ ಆರೋಪಿ ಮಂಡಘಟ್ಟದ ಮನುಕುಮಾರ್ ಅಲಿಯಾಸ್ ಮನು (23) ಮತ್ತು ಎರಡನೆಯ ಅರೋಪಿ ಮಧುಕುಮಾರ್ ಅಲಿಯಾಸ್ ಮಧು (24) ಇವರಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.

ಜೊತೆಗೆ ಪಿರ್ಯಾದುದಾರ ಎಸ್ ಐ ನವೀನ್ ಮಠಪತಿ ಅವರಿಗೆ 2೦ ಸಾ. ರೂ. ಪರಿಹಾರವನ್ನು, ಸಾಕ್ಷಿದಾರರಾದ ಬಸವಂತಪ್ಪರವರಿಗೆ ೧೦ ಸಾವಿರ ರೂ. ವನ್ನು ಪರಿಹಾರವಾಗಿ ನೀಡಲು ಆದೇಶಿಸಿದೆ.

Author