ತೀರ್ಥಹಳ್ಳಿ | ಹುಗಳವಳ್ಳಿ ಚಿನ್ನೇಗೌಡರು ಇನ್ನಿಲ್ಲ

ಶಿವಮೊಗ್ಗ

ತೀರ್ಥಹಳ್ಳಿ, ಹಿರಿಯ ಕೃಷಿಕ, ಹಾಗೂ ತಾಲೂಕಿನ ಒಕ್ಕಲಿಗ ಸಮಾಜದ ಹಿರಿಯ, ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡರ ಮಾವ ಹುಗಳವಳ್ಳಿ ಚಿನ್ನೇಗೌಡರು ವಯೋಸಹಜ ಕಾರಣಗಳಿಂದ ನಿನ್ನೆ ರಾತ್ರಿ 10 ಗಂಟೆಗೆ ನಿಧನರಾಗಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಹೊದಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು 01 09 1931ರಲ್ಲಿ ಜನಿಸಿದ ಚಿನ್ನೇಗೌಡರು ಸರಿಸುಮಾರು 95 ವರ್ಷಗಳ ಸಾರ್ಥಕ ಜೀವನ ನಡೆಸಿದ್ದಾರೆ.

ಅವರಿಗೆ ನಾಲ್ಕು ಮಕ್ಕಳು (ಎರಡು ಗಂಡು, ಎರಡು ಹೆಣ್ಣು ಮಕ್ಕಳು) ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಆಗಲಿದ್ದಾರೆ•

ಅಂತ್ಯಸಂಸ್ಕಾರವನ್ನು ಇಂದು ಸಂಜೆ 4 ಗಂಟೆಗೆ ಹುಗಲವಳ್ಳಿಯಲ್ಲಿ ಕುಟುಂಬ ವರ್ಗದವರ ನಿರ್ಧಾರಂತೆ ನೆರವೇರಿಸಲಾಗುವುದು.

Author