ಶಿವಮೊಗ್ಗ | ಲಯನ್ ಸಫಾರಿಯ ಚಿರತೆಗೆ ನಂಜಪ್ಪ ಆಸ್ಪತ್ರೆಯಲ್ಲಿ ಎಂ ಆರ್ ಐ ಚಿಕಿತ್ಸೆ

ಶಿವಮೊಗ್ಗ

ಶಿವಮೊಗ್ಗ,ವಯೋ ಸಹಜ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ಲಯನ್ ಸಫಾರಿಯಲ್ಲಿದ್ದ ಚಿರತೆಯೊಂದನ್ನ ನಗರದ ನಂಜಪ್ಪ ಆಸ್ಪತ್ರೆಗೆ ಕರೆತಂದು ನಿನ್ನೆ ರಾತ್ರಿ ಎಂ ಆರ್ ಐ ಚಿಕಿತ್ಸೆಗೆ ಗಂಡು ಚಿರತೆಯನ್ನ ಕರೆತರಲಾಗಿತ್ತು.

15 ವರ್ಷದ ಭದ್ರ ಎಂಬ ಚಿರತೆಯನ್ನ ಕರೆತಂದು ಚಿಕಿತ್ಸೆ ನೀಡಲಾಗಿದೆ. ಚಿರತೆಗಳು ಬದುಕಿನ ಆಯಸ್ಸೇ 15-16 ವರ್ಷವಾಗಿದೆ. 15 ವರ್ಷದ ಭದ್ರ ಚಿರತೆಗೆ ವಯಸ್ಸಾದ ಹಿನ್ನಲೆಯಲ್ಲಿ ನಾಲ್ಕು ಕಾಲನ್ನ ಸ್ವಾಧೀನ ಕಳೆದುಕೊಂಡಿದೆಯಾ ಅಥವಾ ಬೇರೆ ಕಾರಣಕ್ಕೆ ಚಿರತೆ ಕಾಲು ಕಳೆದುಕೊಂಡಿದೆಯಾ ಎಂಬುದನ್ನ ಪತ್ತೆ ಮಾಡಲು ಎಂಆರ್ ಐ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಇನ್ನು ಈ ಕುರಿತು ಡಿಎಫ್ಒ ಅಮರಾಕ್ಷರ್ ಮಾತನಾಡಿ ಭದ್ರ ಚಿರತೆಗೆ ಎಂಆರ್ ಐ ಸ್ಕ್ಯಾನ್ ಮಾಡಿಸಲಾಗಿದೆ. ವರದಿ ಬರಬೇಕಿದೆ. ವಯಸ್ಸಾಗಿದೆ. ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು. ವಯಸ್ಸಾಗಿರುವ ಕಾರಣಕ್ಕೆ ಚಿರತೆ ಕಾಲು ಕಳೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

20 ದಿನಗಳಿಂದ ಈ ಚಿರತೆ ಕುಂಟುತಿತ್ತು. ನಿನ್ನೆಯಿಂದ ಚಿರತೆ ಏಳುತ್ತಿರಲಿಲ್ಲ. ಹಾಗಾಗಿ ಪಶುವೈದ್ಯರು ಸಹಯದಿಂದ ಎಂಆರ್ ಐಗೆ ಕರತರಲಾಗಿದೆ ಎಂದರು.

ಸಫಾರಿಯಲ್ಲಿ ಭದ್ರ ಚಿರತೆಯೂ ಸೇರಿ 11 ಚಿರತೆಗಳಿವೆ. 6 ಗಂಡು 5 ಹೆಣ್ಣು ಚಿರತೆಗಳಿವೆ. ಭದ್ರ ಶಿವಮೊಗ್ಗದ ಸಫಾರಿಯಲ್ಲೇ ಜನಿಸಿದ ಚಿರತೆಯಾಗಿದೆ.

Author