ಶಿವಮೊಗ್ಗ | ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೇತೃತ್ವದಲ್ಲಿ, ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಡಲ ಶಹ ವಿಶೇಷ ಸಭೆ

ಶಿವಮೊಗ್ಗ

ಶಿವಮೊಗ್ಗ,ಭಾರತೀಯ ಜನತಾ ಪಾರ್ಟಿ ಶಿವಮೊಗ್ಗ ಜಿಲ್ಲೆ ವತಿಯಿಂದ ಇಂದು ದಿನಾಂಕ 06.02.2026 ರ ಶುಕ್ರವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶಿವಮೊಗ್ಗ ನಗರ ಮಂಡಲ ಶಹ ವಿಶೇಷ ಸಭೆ ನಡೆಯಿತು.

ಸಭೆಯನ್ನು ವಿಧಾನಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನಡೆಸಿಕೊಟ್ಟರು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್ ಕೆ ಜಗದೀಶ್ ಅವರು ವಹಿಸಿದರು.

ಮಂಡಲ ಶಹ ವಿಶೇಷ ಸಭೆ

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ, ವಿಧಾನಪರಿಷತ್ ಶಾಸಕರಾದ ಡಿ ಎಸ್ ಅರುಣ್,ಶಿವಮೊಗ್ಗ ನಗರ ವಿಧಾನಪರಿಷತ್ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ವಿಧಾನಪರಿಷತ್ ಶಾಸಕರಾದ ಡಾ. ಧನಂಜಯ್ ಸರ್ಜಿ,ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್ ದತ್ತಾತ್ರಿ, ಜಿಲ್ಲಾ ಮಾಜಿ ಅಧ್ಯಕ್ಷರಾದ ಟಿ ಡಿ ಮೇಘರಾಜ್, ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ,

ಉ.ಕ ಮಾಜಿ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಎಂ ಬಿ ಹರಿಕೃಷ್ಣ,ಮಾಲತೇಶ್ ಸಿ ಹೆಚ್. ಶಿವಮೊಗ್ಗ ನಗರ ಅಧ್ಯಕ್ಷ ರಾದ ಮೋಹನ್ ರೆಡ್ಡಿ, ಹಾಗೂ ಅಪೇಕ್ಷಿತರು ಉಪಸ್ಥಿತರಿದ್ದರು.

Author