ಶಿವಮೊಗ್ಗ | ರಾಷ್ಟ್ರೀಯ ಯೋಗ ; ತೀರ್ಥಹಳ್ಳಿಯ ಸಂಹಿತಾ ಉಡುಪಗೆ ಬೆಳ್ಳಿ, ಕಂಚಿನ ಪದಕ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೆಷನ್ (ಓಙಈS) ಇಂಡಿಯಾ ವತಿಯಿಂದ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೀರ್ಥಹಳ್ಳಿಯ ಕು. ಸಂಹಿತಾ ಉಡುಪ ದಾಖಲೆ ಬರೆದಿದ್ದಾರೆ.

ಅಸ್ಸಾಂ ನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ರಾಜ್ಯಕ್ಕೆ ಹಾಗೂ ತೀರ್ಥಹಳ್ಳಿಯ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಸಂಹಿತಾ ಉಡುಪ ಕುರುವಳ್ಳಿಯ ನಟೇಶ್ ಮತ್ತು ಶ್ರೀಪ್ರದಾ ದಂಪತಿಗಳ ಪುತ್ರಿಯಾಗಿದ್ದು ಪ್ರಸ್ತುತ ಈಕೆ ಇಲ್ಲಿನ ವಾಗ್ದೇವಿ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ.

Author