ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರೈತರಿಗೆ ತ್ವರಿತ ಗತಿಯ ಸೇವೆಗಾಗಿ ಜಿಲ್ಲೆಯಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರಂತರ ಸೇವೆಯನ್ನು ನೀಡುತ್ತ ಸಹಕಾರಿ ಕ್ಷೇತದ ಶಕ್ತಿ ತುಂಬಿದೆ ಎಂದು ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ಡಿ.ಸಿ.ಸಿ.ಬ್ಯಾಂಕ್ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಮುಂದಿನ ದಿನಗಳಲ್ಲಿ ತಾಲೂಕಿನ ಕೆಲವು ಹೋಬಳಿಗಳಲ್ಲಿಯು ಹೊಸ ಶಾಖೆ ತೆರೆಯುವ ಚಿಂತನೆಯಿದೆ.೨೦೨೭ಕ್ಕೆ ಡಿಸಿಸಿ ಬ್ಯಾಂಕ್ ೫೦ ಶಾಖೆಯನ್ನು ಜಿಲ್ಲೆಯಲ್ಲಿ ತೆರೆಯುವ ಗುರಿ ಹೊಂದಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿ ಮಾತನಾಡಿ ದೇಶದಲ್ಲಿಂದು ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಲು ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಕ್ಷೇತ್ರಗಳು ರೈತರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ ಬದ್ದವಾಗಿದೆ.ರೈತರು ಹಾಗೂ ಇತರ ಗ್ರಾಹಕರು ಬ್ಯಾಂಕ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಡಿಸಿಸಿ ನಿರ್ದೇಶಕ ಬಸವಾನಿ ವಿಜಯದೇವ್,ಡಿ.ಸಿ.ಸಿ.ಬ್ಯಾಂಕ್ ನ ಜಿಲ್ಲಾ ಹಾಗೂ ತಾಲೂಕಿನ ನಿರ್ದೇಶಕರು,ಪ.ಪಂ.ಅಧ್ಯಕ್ಷ ರತ್ನಾಕರ್ ಶೆಟ್ಟಿ,ಸಂವೃದ್ಧಿ ಸಹಕಾರಿ ಸಂಸ್ಥೆ ಅಧ್ಯಕ್ಷೆ ರೇವತಿ ಅನಂತಮೂರ್ತಿ ಮುಂತಾದವರಿದ್ದರು.



