ದಾವಣಗೆರೆ | ಹಣದ ಆಸೆಗೆ ‘ಚಿನ್ನ’ದಂತ ಕೆಲಸ ಕಳೆದುಕೊಂಡ ಪ್ರೊಬೇಷನರಿ ಪಿಎಸ್ಐ ಮತ್ತೋರ್ವ ಅಮಾನತು

ದಾವಣಗೆರೆ

ದಾವಣಗೆರೆ,ಆಭರಣ ತಯಾರಕನ ಬಳಿ ದರೋಡೆ ಕೇಸ್‌ನಲ್ಲಿ ಇಬ್ಬರು PSI ಬಂಧನವಾಗಿದೆ.ಈ ಸಂಬಂಧ ಓರ್ವ ಪಿಎಸ್ಐ ಸೇವೆಯಿಂದ ವಜಾ, ಮತ್ತೋರ್ವನ್ನು ಅಮಾನತು ಮಾಡಲಾಗಿದೆ.

ಈ ಕುರಿತು ದಾವಣಗೆರೆ ಪೂರ್ವ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಆದೇಶ ಮಾಡಿದ್ದಾರೆ. ಎ-1 ಆರೋಪಿಯಾದ ಪಿಎಸ್ಐ ಮಾಳಪ್ಪ ಚಿಪ್ಪಲಕಟ್ಟಿಯವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಹಾವೇರಿ ಜಿಲ್ಲೆ ಹಂಸಭಾವಿ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್ಐ ಆಗಿದ್ದ ಮಾಳಪ್ಪ ಚಿಪ್ಪಲಕಟ್ಟಿಯವರು ವರ್ಗಾವಣೆಗೊಂಡು ಸ್ಥಳ ನಿರೀಕ್ಷೆಯಲ್ಲಿದ್ದರು.

ಇನ್ನು ಎ-2 ಆರೋಪಿ ಆಗಿರುವ ಪಿಎಸ್ಐ ಪ್ರವೀಣಕುಮಾರ್ ಅಮಾನತು ಮಾಡಿದ್ದೂ, ಇಲಾಖೆ ವಿಚಾರಣೆಗೆ ಆದೇಶ ನೀಡಿದ್ದಾರೆ.

ಇಬ್ಬರು ಪಿಎಸ್ಐಗಳು ಮೂವರ ಜೊತೆ ಸೇರಿ ಆಭರಣ ತಯಾರಕನ ದರೋಡೆ ಮಾಡಿದ್ದರುಕಾರವಾರ ಮೂಲದ ಆಭರಣ ತಯಾರಕ ವಿಶ್ವನಾಥ್ ಬಳಿ 78.15 ಗ್ರಾಂ ಬಂಗಾರದ ಗಟ್ಟಿ, ಚಿನ್ನಾಭರಣ ದರೋಡೆ ಮಾಡಿದ್ದೂ, ನವೆಂಬರ್ 24ರ ಮಧ್ಯರಾತ್ರಿ ಈ ಘಟನೆ ನಡೆದಿತ್ತು.

ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಿಂದ ವಿಶ್ವನಾಥ್ ರನ್ನ ಕರೆದೊಯ್ದು ದರೋಡೆ ಮಾಡಿದ್ದರು.

ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕೃತ್ಯಕ್ಕೆ ಬಳಸಿದ್ದ ಮೂರು ಕಾರು, ನಕಲಿ ಗನ್‌ಗಳನ್ನು ಜಪ್ತಿ ಮಾಡಿದ್ದ ಪೊಲೀಸರು.ಪ್ರಕರಣ ಸಂಬಂಧ ಇಬ್ಬರು ಪಿಎಸ್ಐ ಸೇರಿ 7 ಜನರ ಬಂಧನವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹ ಇಲಾಖೆ 30 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ಡಿಜಿ ಮತ್ತು ಐಜಿಪಿ ಸೂಚಿಸಿದ್ದರು.ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಿದ್ದ ಪಿಎಸ್ಐಗಳೇ ಈ ರೀತಿ ಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆ ಕ್ರಮ ಜರುಗಿಸಲಾಗಿದೆ.

Author