ದಾವಣಗೆರೆ | ಪೊಲೀಸರ ಮೇಲೆ ಹಲ್ಲೆ ಪ್ರಕರಣ ; ನೇಕಾರ ಸಮುದಾಯದಿಂದ ಪ್ರತಿಭಟನೆ ; ಕಾಂಗ್ರೆಸ್ ನಿಂದ ಮುಸಲ್ಮಾನರು ಟಿಕೆಟ್ ಕೇಳಬಾರದೆಂದು ಷಡ್ಯಂತ್ರ : ಅಯೂಬ್ ಆಪ್ತರ ಹೇಳಿಕೆ

ದಾವಣಗೆರೆ

ದಾವಣಗೆರೆ, ಮಹಿಳಾ ಪಿ ಎಸ್ ಐ ಹಾಗೂ ಪೊಲೀಸ್ ಪೇದೆಗಳಿಬ್ಬರ ಮೇಲೆ ಹಲ್ಲೆ ಪ್ರಕರಣ ಸಂಬಂಧ ನೇಕಾರ ಸಮುದಾಯದಿಂದ ಪ್ರತಿಭಟನೆ ನಡೆದಿದೆ. ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟಗಳಿಂದ ಪ್ರತಿಭಟನೆ ನಡೆದಿದ್ದು ಬಡಾವಣೆ ಪೊಲೀಸ್ ಠಾಣೆಯಿಂದ ಎಸ್ಪಿ ಕಚೇರಿವರೆಗೂ ಪ್ರತಿಭಟನೆ ನಡೆಸುವ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳನ್ನ ಬಂಧಿಸುವಂತೆ ಸಂಘಟನೆ ಒತ್ತಾಯಿಸಿದೆ.

ಹಾಗೂ ಒಂದು ವೇಳೆ ಆರೋಪಿಗಳನ್ನ ಬಂಧಿಸಲ್ಲಿ ವಿಫಲವಾದರೆ ನ್ಯಾಯ ಒದಗಿಸಲು ವಿಫಲವಾದಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸುವುದಾಗಿ ಸಮುದಾಯ ಹೋರಾಟದ ಎಚ್ಚರಿಕೆ ನೀಡಿದೆ.

ಅಯೂಬ್ ಆಪ್ತರ ಸಮರ್ಥನೆ

ಯುವಕರ ಗುಂಪಿನ ಮಧ್ಯೆ ಗಲಾಟೆ ಆಗಿರುವುದನ್ನು ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ತರಲಾಗಿದೆ ಎಂಬ ಆರೋಪವನ್ನು ಅಯೂಬ್ ಪರ ಆಪ್ತರು ಸಮರ್ಥನೆ ಮಾಡಿದ್ದಾರೆ.

ಅಯೂಬ್ ಪೈಲ್ವಾನ್ ರಾಜಕೀಯವಾಗಿ ಬೆಳೆಯುತ್ತಿರುವದನ್ನ ಸಹಿಸದೆ ಕಾಣದ ಕೈಗಳು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪ ಮಾಡುತಿದ್ದರೆ.ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಈ ಷಡ್ಯಂತ್ರ ನಡೆದಿದೆ.

ಅಯೂಬ್ ಪೈಲ್ವಾನ್ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗಾಗಿ ಮುಸಲ್ಮಾನರು ಟಿಕೆಟ್ ಕೇಳಬಾರದು ಎಂದು ಕಾಣದ ಕೈಗಳಿಂದ ಷಡ್ಯಂತ್ರವಾಗಿದೆ ಎಂದು ಆರೋಪಿಸಿದ್ದಾರೆ.ಈ ಘಟನೆ ಸಂಬಂಧ ಮಕ್ಕಳ ಜಗಳ ಮಾತುಕತೆ ಮೂಲಕ ಬಗೆಹರಿಸಬಹುದಾಗಿತ್ತು.

ಸಿಪಿಐ ಗಾಯತ್ರಿ ಅವರು ಬಂದಾಗ ತಲ್ಲಾಟ ನುಕಾಟವಾಗಿದೆ ಹೊರೆತು ಹಲ್ಲೆಯಾಗಿಲ್ಲ ಎಂದಿದ್ದಾರೆ ಅಯೂಬ್ ನ ಆಪ್ತರು.

ಸಿಪಿಐ ಗಾಯತ್ರಿ ಅವರಿಗೆ ಅಷ್ಟು ಅವಸರವಾಗಿ ಬಂದು ಮನೆಗೆ ನುಗ್ಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ?

ಅಯೂಬ್ ಹಾಗೂ ಅವರ ಸಹೋದರ ಸಾದಿಕ್ ಇಬ್ಬರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಮುಸಲ್ಮಾನ್ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯವಾಗಿತ್ತು.

ಈ ಹೊತ್ತಲ್ಲಿ ಕಾಣದ ಕೈಗಳು ದೊಡ್ಡ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದುಕ್ಕೆಲ್ಲ ಅಯೂಬ್ ಪೈಲ್ವಾನ್ ಜಗ್ಗಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆ ಮುಂದೆ ನಡೆದ ಗಲಾಟೆಯಲ್ಲಿ ಪೊಲೀಸರ ಮೇಲೆ ಹಲ್ಲೆಯಲ್ಲಿ ಅಯೂಬ್ ಮಕ್ಕಳವರ ತಪ್ಪಿಲ್ಲ ಎಂದು ದಾವಣಗೆರೆ ಜಿಲ್ಲಾಸ್ಪತ್ರೆ ಬಳಿ ಅಯೂಬ್ ಪೈಲ್ವಾನ್ ಆಪ್ತರು ಸಮಾಜಯಿಷಿ ನೀಡಿದ್ದಾರೆ.

Author