ಶಿವಮೊಗ್ಗ | ಪುಟಾಣಿಗಳಿಂದ ಬ್ಲೂಮಿಂಗ್ ಕಿಡ್ಸ್ ಶಾಲೆಯಲ್ಲಿ ಮಕ್ಕಳ ಜಾತ್ರೆ ; ಗಣ್ಯರಿಂದ ಶುಭಾಶಯ

ಶಿವಮೊಗ್ಗ

ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಹತ್ತಿರ 100 ಫೀಟ್ ರಸ್ತೆಯಲ್ಲಿರುವ ಶ್ರೀ ಗಂಧ ಹಾಸ್ಟೆಲ್ ಪಕ್ಕದಲ್ಲಿರುವ ಬ್ಲೂಮಿಂಗ್ ಕಿಡ್ಸ್ ಶಾಲೆಯಲ್ಲಿ ಮಕ್ಕಳ ಜಾತ್ರೆ ಎಂಬ ವಿಶೇಷ ವಿಭಿನ್ನ ಕಾರ್ಯಕ್ರಮವನ್ನು ನಿನ್ನೆ ದಿವಸ ಶಾಲಾ ಆಡಳಿತ ಮಂಡಳಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ ಒಂದು ಶಾಲೆಯಲ್ಲಿ ಮಕ್ಕಳ ಜಾತ್ರೆಗೆ ಶಿವಮೊಗ್ಗ ಜಿಲ್ಲಾ ಆಡಿಷನಲ್ ಎಸ್ಪಿ ರಮೇಶ್ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್ ಸಿ ಯೋಗೇಶ್ ಮತ್ತೆ ಕೆ ಇ ಕಾಂತೇಶ್ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ವಿಶ್ವಾಸ ಹೀಗೆ ಅನೇಕ ಗಣ್ಯರು ಮಕ್ಕಳ ಜಾತ್ರೆ ವೀಕ್ಷಿಸಲು ಆಗಮಿಸಿದ್ದರು.

ಈ ಒಂದು ಮಕ್ಕಳ ಜಾತ್ರೆ ವಿಭಿನ್ನತೆಯಿಂದ ಕೂಡಿತ್ತು ಯಾಕಂದ್ರೆ ಪ್ರಿ ನರ್ಸರಿ ಮತ್ತು ಎಲ್ ಕೆ ಜಿ, ಯು ಕೆ ಜಿ ಮಕ್ಕಳು ಈ ಜಾತ್ರೆ ನಡೆಸಿದ್ದು.
ಪುಟಾಣಿ ಮಕ್ಕಳು ಪುಸ್ತಕ, ಆಟಿಕೆಗಳನ್ನು ಹಾಗೂ ತಿಂಡಿ ತಿನಿಸಿಗಳನ್ನು ಮಾರಾಟ ಮಾಡಲು ಜಾತ್ರೆಗೆ ಆಗಮಿಸಿದ್ದರು. ತಮ್ಮ ದಿನ ನಿತ್ಯದ ಆಟ ಪಾಠದೊಂದಿಗೆ ವ್ಯವಹಾರ ಮಾಡಲು ತಮ್ಮ ಪೋಷಕರೊಂದಿಗೆ ವಿಶೇಷವಾಗಿ ಸಜ್ಜಾಗಿ ಆಗಮಿಸಿದ್ದರು.

ಜಾತ್ರೆಯಲ್ಲಿ ಪುಟಾಣಿ ಮಕ್ಕಳ ಸಂಭ್ರಮಕ್ಕೆ ಪಾರವೇ ಇಲ್ಲದಾಗಿತ್ತು. ಪೋಷಕರುಗಳಿಗೆ ಮಕ್ಕಳೊಂದಿಗೆ ಈ ಸುಂದರ ಕ್ಷಣಗಳು ಸವಿಯುವತ್ತ ವ್ಯಾಪಾರ ಮಾಡುವ ಸೌಭಾಗ್ಯ, ಪ್ರತಿಯೊಂದು ಮಗುವು ವಿಭಿನ್ನವಾಗಿ ವ್ಯಾಪಾರ ಮಾಡುತ್ತಿದ್ದನ್ನು ಕಂಡು ಗಣ್ಯರು, ಸಾರ್ವಜನಿಕರು ಬೆಕ್ಕಸ ಬೆರಗಾಗಿದ್ದರು.

oplus_0

ಮೊದಲಿಗೆ ಆಂಜನೇಯ ಪ್ರತಿಮೆ ಸ್ಥಾಪಿಸಲಾಗಿತ್ತು. ಮುಖ್ಯಪ್ರಾಣ ಆಂಜನೇಯನ ದರ್ಶನ ಪಡೆದುಕೊಂಡು ಆಂಜನೇಯನಿಗೆ ಹೂವು ಅರ್ಪಿಸಿ, ತೀರ್ಥ ಪ್ರಸಾದ ಪಡೆದುಕೊಂಡು ನಂತರ ತಮ್ಮ ತಮ್ಮ ವ್ಯಾಪಾರ ವಹಿವಾಟುಗಳನ್ನು ಪುಟಾಣಿ ಮಕ್ಕಳು ಪ್ರಾರಂಭ ಮಾಡಿದರು, ಹಾಗೆಯೇ ಜಾತ್ರೆಗೆ ಬಂದಂತಹ ಗಣ್ಯರು ಸಾರ್ವಜನಿಕರು ಎಲ್ಲರೂ ಸಹ ಆಂಜನೇಯನ ದರ್ಶನ ಪಡೆದುಕೊಂಡು ನಂತರ ಮಕ್ಕಳ ವ್ಯಾಪಾರ ಕಡೆ ದೃಷ್ಟಿ ಹಾಯಿಸುತ್ತ ಪುಟಾಣಿಗಳ ವ್ಯಾಪಾರ ಶೈಲಿ ನೋಡಿ ಹೌಹಾರುತ್ತಿದ್ದರು, ಅಬ್ಬಬ್ಬಾ ಇಷ್ಟು ಚಿಕ್ಕ ಮಕ್ಕಳು ವ್ಯಾಪಾರ ಮಾಡುವಾಗ ಚೌಕಾಸಿ ಮಾಡುವುದನ್ನು ನೋಡಿ ಗಲಿಬಿಲಿಯಾದರು. ಇಷ್ಟು ಚಿಕ್ಕ ವಯಸ್ಸಿಗೆ ಈ ಪುಟಾಣಿ ಮಕ್ಕಳಲ್ಲಿ ಇಷ್ಟೊಂದು ಜ್ಞಾನ ಎಂದು ತಮ್ಮೊಳಗೆ ತಾವು ಅಂದುಕೊಳ್ಳುತ್ತಿದ್ದರು.

oplus_0

ಬ್ಲೂಮಿಂಗ್ ಕಿಡ್ಸ್ ಶಾಲೆಯ ಅದ್ಭುತ ವ್ಯವಸ್ಥೆಗೆ ಮಕ್ಕಳಿಗೆ ನೀಡುತ್ತಿರುವ ಅತ್ಯುತ್ತಮ ಶಿಕ್ಷಣ ಕುರಿತು ಮಾತನಾಡುತ್ತಿದ್ದರು. ನಮ್ಮ ಮಕ್ಕಳಿಗೂ ಇಂತಹ ಶಾಲೆಗೆ ಸೇರಿಸಬೇಕು ಎಂದುಕೊಳ್ಳುತ್ತಿದ್ದರು.

oplus_0

ಹಾಗೆಯೇ ಶಾಲೆಯ ಈ ಜಾತ್ರೆಗೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡರಾದ ಎಚ್. ಸಿ.ಯೋಗೇಶ್ ಮಾತನಾಡಿ ನಿಜವಾಗಲೂ ಇದೊಂದು ವಿಭಿನ್ನ ಕಾರ್ಯಕ್ರಮವಾಗಿದೆ. ನಾನು ಈ ರೀತಿಯ ಕಾರ್ಯಕ್ರಮವನ್ನು ಮೊಟ್ಟ ಮೊದಲ ಬಾರಿಗೆ ವೀಕ್ಷಿಸುತ್ತಿದ್ದೇನೆ, ನಾನು ಶಾಲೆ ವಾರ್ಷಿಕೋತ್ಸವದ ರೀತಿಯ ಕಾರ್ಯಕ್ರಮ ಎಂದು ಅಂದುಕೊಂಡೆ ಬಂದೆ ಇದೇನು ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ ಈಗಲೇ ಪ್ರಾರಂಭವಾಯಿತ ಅನಿಸಿತು, ಆದರೆ ಮಾರಿಕಾಂಬ ಜಾತ್ರೆಗೂ ಮುನ್ನ ಬ್ಲೂಮಿಂಗ್ ಕಿಡ್ಸ್ ಶಾಲೆಯಲ್ಲಿ ಮಕ್ಕಳ ಜಾತ್ರೆ ನಡೆದಿರುವುದು ಸಂತಸದ ಸಂಗತಿಯಾಗಿದೆ ಅಂದರು.

ಮುಂದುವರೆದು ಮಾತನಾಡಿದ ಅವರು ಮಕ್ಕಳು ಊಟ ತರಕಾರಿ ಇನ್ನಿತರೆ ಆಟಿಕೆಗಳನ್ನು ಹಾಳು ಮಾಡುವುದು ಮಾಡುತ್ತಾರೆ ಅವರಿಗೆ ಹಣದ ಮೌಲ್ಯ ತಿಳಿದಿರುವುದಿಲ್ಲ ಹಾಗಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸ್ವತಃ ಮಕ್ಕಳೇ ಬಂದು ಜಾತ್ರೆಯಲ್ಲಿ ವ್ಯವಹಾರ ಮಾಡುವುದು ಮಕ್ಕಳಲ್ಲಿ ಅರಿವು ಮೂಡಿಸುತ್ತೆ ಇಂತಹ ಅಚ್ಚುಕಟ್ಟಾದ ಜೊತೆಗೆ ಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದ ಶಾಲೆಯ ಆಡಳಿತ ಮಂಡಳಿಯ ಶ್ರೀಧರ್ ಶೆಟ್ಟರು ಹಾಗೂ ಶ್ರೀಕಲಾ ಅವರಿಗೆ ಶುಭವಾಗಲಿ ಎಂದು ಹಾರೈಸಿದರು ಮತ್ತಷ್ಟು ಒಳ್ಳೆಯ ಕೆಲಸ ಮೂಡಿಬರಲಿ ಎಂದು ತಿಳಿಸಿದರು.

oplus_0


ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಶಿಕ್ಷಕರಿಗೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಿಳಿಸಿದರು.ಎಚ್. ಸಿ. ಯೋಗೇಶ್ ಅವರಿಗೆ ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನ ಮಾಡಲಾಯಿತು.

oplus_0

ರಾಷ್ಟ್ರಭಕ್ತ ಬಳಗದ ಕೆ.ಇ. ಕಾಂತೇಶ್ ಮಾತನಾಡಿ ಈ ರೀತಿಯ ವಿಭಿನ್ನ ಕಾರ್ಯಕ್ರಮ ಮಕ್ಕಳಲ್ಲಿ ವ್ಯಾಪಾರಾದ ಅರಿವು ಮೂಡಿಸತ್ತೆ ಹಾಗೆ ಆಟ ಪಾಠದ ವ್ಯವಹಾರದ ಜ್ಞಾನ ಕೂಡ ಕಲಿಸುತ್ತೆ, ಈ ರೀತಿಯ ವಿಭಿನ್ನ ಆಲೋಚನೆಗಳೊಂದಿಗೆ ಸಂಸ್ಥೆ ನಡೆಸುತ್ತಿರುವ ಶ್ರೀಧರ್ ಶೆಟ್ಟಿ ಅವರಿಗೆ ಅಭಿನಂದನೆಗಳನ್ನ ತಿಳಿಸಿದರು, ಹಾಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕೆಲಸ ಶಾಲೆಯಿಂದ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾಂತೇಶ್ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ವಿಶ್ವಾಸ ಅವರಿಗೆ ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮದ ಕುರಿತು ಪೋಷಕರು ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಬ್ಲೂಮಿಂಗ್ ಕಿಡ್ಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಮಾಲೀಕರಿಗೆ ಇಂತಹ ಸುಸಂದರ್ಭ ಒದಗಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ನಮ್ಮ ಮಕ್ಕಳು ಇಂತಹ ಅರ್ಥಪೂರ್ಣ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗೆ ಅಭಾರಿಯಾಗಿದ್ದೇವೆ ಎಂದು ತಿಳಿಸದ್ದಾರೆ.


ಶಾಲೆಯ ಮುಖ್ಯಸ್ತರಾದ ಶ್ರೀ ಕಲಾ ಅವರು ಮಾತನಾಡಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲರ ಸಹಕಾರದಿಂದ ನಾವು ವಿಭಿನ್ನ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೆ ಆಟ ಪಾಠ ವ್ಯವಹಾರ ಅರಿವು ಎಲ್ಲವನ್ನು ಕಲಿಸಬೇಕು ಎಂಬ ಹಂಬಲದಿಂದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟ ಶಿಕ್ಷಣ ನೀಡುತ್ತಿರುವ ಬೆಳೆಯುವ ಪೈರು ಮೊಳಕೆಯಲ್ಲೇ ಎಂಬ ನಾನ್ನುಡಿಯಂತೆ ಬೆಳೆಯುವ ಪೈರು ಮೊಳಕೆಯಲ್ಲಿ ಇದ್ದಾಗಲೇ ಅದಕ್ಕೆ ಬೇಕಾದ ಪೋಷಣೆ ನೀಡುವ ಮೂಲಕ ಸತ್ಪ್ರಜೆ ಮಾಡುವ ನಿಟ್ಟಿನಲ್ಲಿ ಶಾಲೆ ನಡೆಸುತ್ತಿರುವ, ಬ್ಲೂಮಿಂಗ್ ಕಿಡ್ಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಮಾಲೀಕರು ಆದ ಶ್ರೀಧರ್ ಶೆಟ್ಟರು ಹಾಗೂ ಶ್ರೀಕಲಾ ಅವರಿಗೆ ನಿಮ್ಮ ಮುಂದಿನ ದಿನಗಳಲ್ಲಿ ನಿಮ್ಮ ಶಾಲೆ ಮತ್ತಷ್ಟು ಉತ್ತಂಗಕ್ಕೆ ಏರಲಿ, ನಿಮ್ಮಿಂದ ಮತ್ತಷ್ಟು ಅತ್ಯುತ್ತಮ ಸೇವೆ ಒದಗಿಸುವ ಶಕ್ತಿ ಆ ದೇವರು ನಿಮಗೆ ನೀಡಲಿ ಎಂಬುದು ನಮ್ಮ ಆಶಯವಾಗಿದೆ.

oplus_0

ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮ ಮುಖೇಣ ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ ಹೇಳಲು ಬಯಸುತ್ತೇವೆ.

ಎಲ್ಲಾ ಶಾಲೆಗಳಲ್ಲಿ ಸಹ ಈ ರೀತಿಯ ಕಾರ್ಯಕ್ರಮ ಮೂಡಿಬರಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಹ ಈ ರೀತಿಯ ವ್ಯವಸ್ಥೆ ಓದಗುವಂತೆ ಆಗಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

Author