ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ,ಈ ಪ್ರತಿಭಟನೆ ಕುರಿತು ಈ ಕೆಳಕಂಡ ಮಾಹಿತಿಯಾಗಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2025 ರಲ್ಲಿ ಜಾರಿಗೆ ಬಂದಿದ್ದು ಇದನ್ನು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಯು.ಪಿ.ಎ ಅಧ್ಯಕ್ಷರಾದ ಶ್ರೀಮತಿ ಸೋನಿಯ ಗಾಂಧಿ ರವರ ಕನಸಿನ ಕೂಸು ಆದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (2005) ಯಡಿಯಲ್ಲಿ ಗ್ರಾಮೀಯ ಕುಟುಂಬಗಳಲ್ಲಿ ಜೀವನೋಪಾಯಕ್ಕೆ ಭದ್ರತೆ ಒದಗಿಸಲು ಗ್ರಾಮೀಣ ಪ್ರದೇಶದ ಕುಟುಂಬದ ಕೌಶಲ್ಯ ರಹಿತ ವಯಸ್ಕ ಸದಸ್ಯರಿಗೆ ಕನಿಷ್ಠ 100 ದಿನಗಳ ಉದ್ಯೋಗ ಒದಗಿಸುವ ಯೋಜನೆಯಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಭಾರತ ಸರ್ಕಾರ ಶೇಕಡ 90 ರಾಜ್ಯ ಸರ್ಕಾರ ಶೇಕಡ 10 ಅನುದಾನದೊಂದಿಗೆ ಕೇಂದ್ರ ಯೋಜನೆಯನ್ನಾಗಿ 2005 ರಿಂದ ಅನುಷ್ಠಾನಗೊಳಿಸಿರುತ್ತದೆ. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು ಈ ಯೋಜನೆಯಡಿ ಹಮ್ಮಿಕೊಂಡಿದೆ.

ಸಸಿಗಳನ್ನು ಬೆಳೆಸುವುದು ರಸ್ತೆಗಳ ಬಳಿ ನೆಡುತೋಪುಗಳ ನಿರ್ಮಾಣ, ಬ್ಲಾಕ್ ನೆಡುತೋಪುಗಳು, ಮಣ್ಣು ಮತ್ತು ನೀರಾವರಿ ಕಾಮಗಾರಿಗಳು ಕೈಗೊಳ್ಳುವುದು. ಗ್ರಾಮೀಣ ಅಭಿವೃದ್ಧಿ ಮೂಲ ಸೌಕರ್ಯ ಮತ್ತು ಜೀವನೋಪಾಯವನ್ನು ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸಿರುತ್ತದೆ.ಈ ಕಾಯ್ದೆಯು ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುತ್ತದೆ. ಉದ್ಯೋಗವು ಸಾಂವಿಧಾನಿಕ ಹಕ್ಕಾಗಿದ್ದು, ನಿರಂತರವಾಗಿ ಲಭ್ಯವಾಗಿರುತ್ತದೆ.

ಕ್ರಿಯಾಯೋಜನೆ ರೂಪಿಸುವ ಅಧಿಕಾರ ಗ್ರಾಮಸಭೆ ಮತ್ತು ಗ್ರಾಮ ಪಂಚಾಯತಿ ಬಳಿ ಇದೆ. ಸ್ಥಳೀಯ ಬೇಡಿಕೆ ಹಾಗೂ ಆದ್ಯತೆಗೆ ತಕ್ಕಂತೆ ಯೋಜನೆ ರೂಪಿಸಿ ನಂತರ ಮೇಲಿನ ಮಟ್ಟದಲ್ಲಿ ಕ್ರೋಡೀಕರಿಸಲಾಗುತ್ತದೆ.ವರ್ಷದ 365 ದಿನ ಯಾವ ಸಮಯದಲ್ಲಾದರೂ ಕೆಲಸ ಕೇಳಬಹುದು. ಯಾರ ಮುಲಾಜಿಗೂ ಬೀಳದಂತೆ ಬಡಜನರು ವರ್ಷಪೂರ್ತಿ ಬೇಡಿಕೆಯ ಆಧಾರದ ಮೇಲೆ ಉದ್ಯೋಗ ಬೇಡಿಕೆ ಇಟ್ಟು ಅದನ್ನು ಪಡೆಯುವ ‘ಖಾತ್ರಿ’ ವ್ಯವಸ್ಥೆ.ಕಾಯ್ದೆಯ ಅನುಷ್ಠಾನದಲ್ಲಿ ಗುತ್ತಿಗೆದಾರರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಕನ್ವರ್ಜೆನ್ಸ್ ಕಾಮಗಾರಿಗಳಲ್ಲೂ ಗುತ್ತಿಗೆದಾರರಿಗೆ ಅವಕಾಶ ಇರಲಿಲ್ಲ.ತಾಂತ್ರಿಕ ಮೇಲ್ವಿಚಾರಣೆ, ಸ್ಥಳೀಯ ಕಣ್ಣಾವಲು ಜನಸಮುದಾಯದ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಹಾಗೂ ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಜನಸಮುದಾಯದ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಮನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ಅನುದಾನ ಹಂಚಿಕೆಯ ಬಗ್ಗೆ ಯಾವುದೇ ನಿಯಮಗಳಿಲ್ಲ.
ಕಾಮಗಾರಿಗಳು ಹಾಗೂ ಕೆಲಸದ ದಿನಗಳ ಬೇಡಿಕೆಯಷ್ಟೇ ಅನುದಾನದ ಮಾನದಂಡ.ಅನುಮತಿಸಲಾಗಿರುವ ಪಟ್ಟಿಯೊಳಗಿನ ಯಾವುದೇ ಕೆಲಸಗಳನ್ನೂ ಗ್ರಾಮ ಪಂಚಾಯತಿಗಳು ತಮ್ಮ ಊರಿನ ಅವಶ್ಯಕತೆಗಳಿಗೆ ತಕ್ಕಂತೆ ತೀರ್ಮಾನಿಸಿ ಕೆಲಸ ಮಾಡಬಹುದು.ಹಣದುಬ್ಬರಕ್ಕೆ ಅನುಗುಣವಾಗಿ ವೇತನ ದರವನ್ನು ಪ್ರತಿ ವರ್ಷ ಪರಿಷ್ಕರಿಸುವ ಹಾಗೂ ಹೆಚ್ಚಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇತ್ತು.

ನರೇಗಾದಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದ ಉದ್ಯೋಗ ಖಾತರಿ ಮಂಡಳಿಗಳಲ್ಲಿ ಮಹಿಳೆಯರು, ಪರಿಶಿಷ್ಟ ವರ್ಗ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಕಡ್ಡಾಯವಾಗಿ ಪ್ರಾತಿನಿಧ್ಯತೆ ನೀಡಲಾಗುತ್ತಿತ್ತು.ಕೂಲಿ ವೆಚ್ಚದ 100% ಮತ್ತು ಸಾಮಗ್ರಿ ವೆಚ್ಚದ 75% ಹಣವನ್ನು ಕೇಂದ್ರ ಸರ್ಕಾರವೇ ಭರಿಸುವ ಮೂಲಕ ರಾಜ್ಯಗಳ ಆರ್ಥಿಕ ಹಿತವನ್ನು ಕಾಪಾಡಲಾಗಿತ್ತು.
ಬಿ.ಪಿ.ಎಲ್ ಕುಟುಂಬದವರು ತಮ್ಮ ಸ್ವಂತ ಜಮೀನಿನಲ್ಲಿ ನೀರು ಕಾಲುವೆ, ಬಾಳೆನೆಡುವುದು, ಕೃಷಿ ಹೊಂಡ, ಇತರೆ ಕೃಷಿ ಚಟುವಟಿಕೆಗಳು.
ಬಿಜೆಪಿಯ ಕೇಂದ್ರ ಸರ್ಕಾರವು “ವಿಬಿ ಗ್ರಾಮ್ ಜಿ” ಎಂದು ನಾಮಕರಣ ಮಾಡುವುದರ ಮೂಲಕ ಮಹಾತ್ಮ ಗಾಂಧಿರವರ ಹೆಸರನ್ನು ಕೈ ಬಿಡಲಾಗಿದ್ದು.
ಇಡೀ ಯೋನೆಯನ್ನು ಈ ಕೆಳಕಂಡಂತೆ ಈ ‘ಯೋಜನೆ’ ಕೇಂದ್ರ ಸರ್ಕಾರದ ಅಣತಿಯಂತೆ, ಅದರ ಮನಸ್ಸಿಗೆ ತೋಚಿ ಆರಿಸಿದ ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ.ಕ್ರಿಯಾಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ವಯವೇ ಗ್ರಾಮ ಪಂಚಾಯತಿಗಳು ರೂಪಿಸಬೇಕು.
ಇದು ಅಧಿಕಾರ ವಿಕೇಂದ್ರೀಕರಣ ಹಾಗೂ ಒಕ್ಕೂಟ ವ್ಯವಸ್ಥೆ ಮೇಲಿನ ಸರ್ಜಿಕಲ್ ಸ್ಟೈಕ್.ಪೂರ್ವನಿರ್ಧಾರಿತ 60 ದಿನ ಇಡೀ ಯೋಜನೆಗೆ ನಿರ್ಬಂಧ ಇರುತ್ತದೆ. ಈ ಸಂಧರ್ಭದಲ್ಲಿ ಕಾರ್ಮಿಕರು ಕೆಲಸದ ಬೇಡಿಕೆ ಸಲ್ಲಿಸಲು ಅವಕಾಶ ಇಲ್ಲ. ಇದು ಉದ್ಯೋಗ ‘ಕತ್ತರಿ’ ವ್ಯವಸ್ಥೆಈ ಯೋಜನೆಯಲ್ಲಿ ಗುತ್ತಿಗೆದಾರರು ಪರೋಕ್ಷವಾಗಿ ಒಳಬರುವ ಅವಕಾಶ ಇದೆ.
ಕನ್ವರ್ಜೆನ್ಸ್ ಕಾಮಗಾರಿಗಳಲ್ಲೂ ಗುತ್ತಿಗೆದಾರರು ಹಿಂಬಾಗಿಲಿನಿಂದ ಪ್ರವೇಶಿಸುವ ಸಾಧ್ಯತೆ ಸೃಷ್ಟಿಸಲಾಗಿದೆ.ಜಟಿಲವಾದ ತಾಂತ್ರಿಕ ವ್ಯವಸ್ಥೆಗಳ ಹೇರಿಕೆಯ ಮೂಲಕ ಯೋಜನೆಯಡಿ ಉದ್ಯೋಗದ ಅವಕಾಶ ವಂಚಿಸುವ ಯತ್ನ ಮಾಡಲಾಗಿದೆ.
ಪಂಚಾಯತಿಗಳಿಗೆ ಕೇಂದ್ರ ಸರ್ಕಾರ ‘ನಿಯಮಾತ್ಮಕ ಹಂಚಿಕೆ’ಯನ್ವಯ ಅನುದಾನ ಹಂಚಿಕೆ ಮಾಡಲಿದೆ. ಹೆಚ್ಚುವರಿ ಖರ್ಚು ಬಂದರೆ ಕೇಂದ್ರ ಹಣ ನೀಡುವುದಿಲ್ಲ. ಜನರ ಕೆಲಸ/ ಕಾಮಗಾರಿಯ ಬೇಡಿಕೆಗೆ ಇಲ್ಲಿ ಬೆಲೆ ಇಲ್ಲ.ಗ್ರಾಮ ಪಂಚಾಯತಿಗಳ ಯಾವುದೇ ಕೆಲಸದ ಯೋಜನೆ ಕೇಂದ್ರ ಸರ್ಕಾರ ನಿಗದಿಪಡಿಸಿದ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನ ಕಾರ್ಯಮಿತಿ ಒಳಗೆ ಇರಬೇಕು.
ಗ್ರಾಮ ಸಭೆ ಹಾಗೂ ಪಂಚಾಯತಿಗಳಿಗೆ ಅವಶ್ಯಕವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ಮೊಟಕು.ವೇತನ ದರಗಳನ್ನು ಕನಿಷ್ಠ ವೇತನ ಅಥವಾ ಬೆಲೆ ಏರಿಕೆಗೆ ಅವಕಾಶವಿಲ್ಲದಂತೆ ಕೇಂದ್ರ ಸರ್ಕಾರವೇ ನಿಗದಿಪಡಿಸುತ್ತದೆ.ನೂತನ ಮಂಡಳಿ ಮತ್ತು ಸ್ಟೀರಿಂಗ್ ಸಮಿತಿಗಳಿಗೆ ಅಸ್ಪಷ್ಟ ಅಧಿಕಾರ ನೀಡಲಾಗಿದೆ ಹಾಗೂ ಎಸ್/ಎಸ್.ಟಿ/ಒ.ಬಿ.ಸಿ ಸಮುದಾಯಗಳ ಕಡ್ಡಾಯ ಪ್ರಾತಿನಿಧ್ಯತೆ ಅಧಿಕಾರ ರದ್ದುಗೊಳಿಸಲಾಗಿದೆ.ಕೇಂದ್ರ ಸರ್ಕಾರ ನಿಗದಿಪಡಿಸುವ ಅನುದಾನದಲ್ಲಿ 40% ಹಣವನ್ನು ರಾಜ್ಯವೇ ಭರಿಸಬೇಕು.

ಯೋಜನೆ ಜಾರಿಯಲ್ಲಿ ಅಧಿಕಾರಗಳೇ ಇಲ್ಲದಿದ್ದರೂ ರಾಜ್ಯಗಳ ಹಾಗೂ ಪಂಚಾಯತಿ ಮೇಲೆ ಆರ್ಥಿಕ ಹೊರೆ ಹೇರಿಕೆ.ವಿಬಿ ಗ್ರಾಮ್ ಜಿ ಗ್ರಾಮ ಪಂಚಾಯತಿಗಳಲ್ಲಿ ಈ ಕಾಯ್ದೆಯಿಂದ ದುಷ್ಪರಿಣಾಮಗಳು ಉಂಟಾಗಿದ್ದು ತಕ್ಷಣ ಈ ಯೋಜನೆಯನ್ನು ರದ್ದು ಮಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪುನರ್ ಸ್ಥಾಪಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಹಾಗೂ ಈ ಪ್ರತಿಭಟನೆ ಮೂಲಕ ಶಿವಮೊಗ್ಗ ಜಿಲ್ಲಾಧಿಕಾರಿಗಳ ರಾಷ್ಟ್ರಪತಿಗಳಿಗೆ ಮನವಿ ಮೂಲಕ ತಿಳಿಸಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ನಗರಸಭೆ ಸದಸ್ಯರುಗಳು, ಕಾಂಗ್ರೆಸ್ ಮಹಿಳಾ ಮುಖಂಡರು ಹಾಗೂ ಅನೇಕ ಮುಖಂಡರು ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.



