ಮರಗಳ ಹತ್ಯೆಗೆ ಮೊದಲು ನನಗೆ ದಯಾಮರಣ ನೀಡಿ : ವಿಶುಕುಮಾರ್ ; ರೈತರ ಮೇಲೆ ಮಾನವೀಯತೆ ತೋರಬಹುದಿತ್ತಲ್ಲವೇ ಡಿಎಫ್ಒ ರವೀಂದ್ರ?

ಶಿವಮೊಗ್ಗ

ಉಪಅರಣ್ಯ ಸಂರಕ್ಷಣಾಧಿಕಾರಿಯಾದ ರವೀಂದ್ರರವರು ದಿನಾಂಕ: 13-01-2026ರಂದು ಬಿ1 ಎಸ್ಎಎಸ್ ಶ್ರೀಗಂಧ ಮಾಪಾ ಸಿಆರ್ 2025-26 ರಂದು ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಹಳಿಯೂರು ಗ್ರಾಮದ ಸರ್ವೆ ನಂ. 28/15ರಲ್ಲಿ 837 ಶ್ರೀಗಂಧದ ಗಿಡಗಳಿವೆ ಎಂದಿದ್ದಾರೆ.

ಆದರೆ ಇದೇ ಅಧಿಕಾರಿ ಹಿಂದೆ ಅಂದರೆ 2019 ರಲ್ಲಿ ದಿನಾಂಕ: 30-10-2019ರಂದು ಎಸಿಎಫ್ ಆಗಿದ್ದಾಗ ಅಂದಿನ ಡಿಸಿಎಫ್ ಭದ್ರಾವತಿಯವರಿಗೆ ಶ್ರೀಗಂಧದ ಗಿಡಗಳ ಅಳತೆ ಪಟ್ಟಿಯಲ್ಲಿ 1059 ಶ್ರೀಗಂಧದ ಗಿಡಗಳಿವೆ ಎಂದು ನಮೂದಿಸಿರುತ್ತಾರೆ.

ವ್ಯತ್ಯಾಸ 222 ಗಿಡಗಳು ಏನಾಯಿತು ಎಂಬುದರ ಬಗ್ಗೆ ಸರ್ಕಾರಕ್ಕಾಗಲಿ, ನಮಗಾಗಲಿ ಮಾಹಿತಿ ನೀಡದೆ ಅವುಗಳಿಗೆ ಯಾರು ಪರಿಹಾರ ನೀಡುತ್ತಾರೆಂಬ ವರದಿ ಮಾಡದೆ ಕರ್ತವ್ಯ ಲೋಪ ಎಸಗಿರುತ್ತಾರೆ ಎಂಬ ದೂರನ್ನು ವಿಶುಕುಮಾರ್ ಅರಣ್ಯ ಸಂರಕ್ಷಣಾ ಅಧಿಕಾರಿ ಹನುಮಂತಪ್ಪ ಅವರಿಗೆ ದೂರು ನೀಡಿದ್ದಾರೆ.

ಇದೇ ಜಾಗ 22 ಖಾತೆದಾರರ ಶ್ರೀಗಂಧದ ಮರಗಳಿಗೆ 1,51,49,00,520/- ಕೋಟಿ ರೂಗಳು ರೈತರಿಗೆ ಕೊಡಬೇಕಾಗುತ್ತದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ನಾಗಸಂದ್ರ, ಬೆಂಗಳೂರುರವರು ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ : 25-01-20210 : NHAI/RO-BNG/24023/03/2020-21/4276 ರ (ಪ್ರತಿ ಲಗತ್ತಿಸಿದೆ) ಪತ್ರ ಬರೆದಿದ್ದು, ಅದರಂತೆ ಮಾನ್ಯ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠದಲ್ಲಿ ಡಬ್ಲ್ಯೂಪಿ 8691(ಎಲ್‌ಎಆರ್‌ಇಎಸ್)ಗೆ ಸಂಬಂಧಿಸಿದಂತೆ ಆದೇಶಿಸಿದ್ದು ಹಾಗೂ ಇದರ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದು, ಡಬ್ಲೂಪಿ 5781/2020-21 (ಜಿಎಂ ಆರ್‌ಇಎಸ್ ಪಿಐಎಲ್)ರ ಅಲ್ಲಿಯೂ ಕೂಡ ಆದೇಶದಂತೆ ಪರಿಹಾರವನ್ನು ನೀಡಿದ್ದರೆ ಗಿಡ ಮರಗಳಿಗೆ ತೆರವುಗೊಳಿಸಲು ಆದೇಶ ಮಾಡಿದ್ದರೆ ಅಂದಿನ ಅಧಿಕಾರಿಗಳಿಂದ ನಮ್ಮ ರಾಜ್ಯ ಸರ್ಕಾರಕ್ಕೆ 151 ಕೋಟಿಗೆ 10% ರಂತೆ ಸುಮಾರು 15 ಕೋಟಿಗೂ ಹೆಚ್ಚು ಹಣ ಪರಿಹಾರ ಗಿಡಗಳನ್ನು ನೆಡಲು ಬರುತ್ತಿತ್ತು. ಅದನ್ನು ತಪ್ಪಿಸಿ ಇಂದಿನ ಈ ಭ್ರಷ್ಟಾಧಿಕಾರಿ ಕಡಿತಲೆ ಆದೇಶದಲ್ಲಿ ಸರ್ಕಾರಕ್ಕೆ ಬರಬೇಕಾದಂತಹ ಹಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಟ್ಟಿಸಿಕೊಳ್ಳಲು ಆದೇಶ ಮಾಡದೆ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ನಮ್ಮ ರಾಜ್ಯ ಸರ್ಕಾರಕ್ಕೆ ಬರುವುದನ್ನು ತಪ್ಪಿಸಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಶ್ರೀಗಂಧಕ್ಕೆ ಕೇವಲ ಗಿಡ ಒಂದಕ್ಕೆ ರೂ.420/- ರಂತೆ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ ಇದರಂತೆ ಮಾನ್ಯ ನ್ಯಾಯಾಲಯವು ಹೊಸ ಆದೇಶದಂತೆ ಪರಿಹಾರ ನೀಡಲು ಆದೇಶಿಸಿದ್ದರು ಕೂಡ ಆ ಆದೇಶದ ವಿರುದ್ಧ ಅರಣ್ಯ ಇಲಾಖೆಯೂ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಅರಣ್ಯ ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 27.02.2025ರಂದು ಮಧ್ಯಾಹ್ನ 1–00 ಗಂಟೆಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಬೆಂಗಳೂರು ಇಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ: 16604/2022 21284/2022, 21844/2022, 5000/20230 ದಿನಾಂಕ: 29.01.20250 ನೀಡಿರುವ ಅಂತಿಮ ತೀರ್ಪಿಗೆ ಸಂಬಂಧಿಸಿದಂತೆ ನಡೆದ ವಿವಾದ ಪರಿಹಾರ ಮಂಡಳಿ ಸಭೆಯಂತೆ ಕೂಡ ಮೇಲ್ಮನವಿ ಡಬ್ಲ್ಯೂಪಿ 1486/2025 ಸಲ್ಲಿಸಿದ್ದು ಹಾಗೂ ನಾನು ಕೂಡ ಡಬ್ಲ್ಯೂಪಿ 680/2025 ಮಾನ್ಯ ಉಚ್ಚ ನ್ಯಾಯಾಲಯದ ದ್ವಿ-ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಹಂತದಲ್ಲಿ ಕಡಿತಲೆ ಆದೇಶ ನೀಡಿರುವುದು ಕರ್ತವ್ಯ ಲೋಪವಾಗಿರುತ್ತದೆ. ಆದ್ದರಿಂದ ಇತನನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕಾಗಿ ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿರುತ್ತಾರೆ.

ವೈಜ್ಞಾನಿಕವಾಗಿ ತೋಟಗಾರಿಕಾ ಬೆಳೆಗಳಿಗೆ ನಿರ್ಧರಿಸಿರುವ ಬೆಳೆಯಂತೆ ಶ್ರೀಗಂಧಕ್ಕೂ ಕೂಡ ಬೆಳೆ ನಿರ್ಧಾರ ಮಾಡಿ ಇಲ್ಲದಿದ್ದರೆ ನನ್ನ ಜಾಗವನ್ನು ಉಚಿತವಾಗಿ ಕೊಡಲು ಮಾನ್ಯ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ದಿನಾಂಕ: 19-07-2025ರಂದು ಪತ್ರ ಬರೆದಂತೆ ತಾವು ಒಪ್ಪುವುದಾದರೆ ನನ್ನ ಅಭ್ಯಂತರವಿರುವುದಿಲ್ಲವೆಂದು ತಿಳಿಸದ್ದಾರೆ.

ಮುಂದುವರೆದು ಇಂದು ಶ್ರೀಗಂಧ ಮರಗಳನ್ನು ಕಡಿತಲೆ ಮಾಡುವುದಕ್ಕಿಂತ ಮೊದಲು ನನಗೆ ದಯಾಮರಣ ದಯಪಾಲಿಸಿ” ಎಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಭೂಸ್ವಾಧೀನ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿದ ವಿಶುಕುಮಾರ್ ಅವರು, ನನಗೆ ಫೆ.2ಕ್ಕೆ ಶ್ರೀಗಂಧ ಮರಗಳನ್ನು ಕಡಿತಲೆ ಮಾಡಲಾಗುವುದು ಎಂದು ಜ.27ಕ್ಕೆ ನೋಟಿಸ್ ನೀಡುತ್ತಾರೆ. ಆದರೆ ಈ ವಿಷಯ ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳು ಮರ ಕಡಿತಲೆ ಮುಂದಾಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು?

ಸುಮಾರು 30 ವರ್ಷಗಳಿಂದ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶ್ರೀಗಂಧ ಬೆಳೆ ಬೆಳೆಸಿಕೊಂಡು ಬಂದಿರುವುದಾಗಿ ತಿಳಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಜಾಹೀರಾತು ನೀಡಿ ಶ್ರೀಗಂಧ ಬೆಳೆಸಲು ರೈತರನ್ನು ಪ್ರೋತ್ಸಾಹಿಸಿತ್ತು. ಸರ್ಕಾರದ ಪ್ರೇರಣೆಯ ಮೇರೆಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಶ್ರೀಗಂಧ ಮರಗಳನ್ನು ಬೆಳೆಸಿದ್ದೇವೆ. ಆದರೆ ಈಗ ಅದಕ್ಕೆ ತಕ್ಕಂತೆ ಬೆಲೆ ನೀಡಿದೆ ಕಡಿತಲೆ ಮಾಡುವುದಕ್ಕೆ ಮುಂದಾಗಿರುವುದು ಅನ್ಯಾಯ ಎಂದು ಆರೋಪಿಸಿದರು.

ಅಧಿಕಾರಿಗಳ ಲಂಚಗುಳಿತನ ಹಾಗೂ ದೌರ್ಜನ್ಯದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ ಎಂದರು. “ಆದರೆ ಈಗ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ಹೇಳಿದಂತೆ ಶ್ರೀಗಂಧ ಮರಗಳಿಗೆ ವೈಜ್ಞಾನಿಕವಾಗಿ ಯೋಗ್ಯ ಬೆಲೆ ನಿಗದಿ ಮಾಡಿ ಪರಿಹಾರ ನೀಡಿ. ಇಲ್ಲವಾದಲ್ಲಿ ನನ್ನ ಮರಗಳನ್ನು ಉಚಿತವಾಗಿ ತೆಗೆದುಕೊಳ್ಳಿ. ಆದರೆ ಅದಕ್ಕಿಂತ ಮೊದಲು ನನಗೆ ದಯಾಮರಣ ನೀಡಿ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೆಲವು ಅಧಿಕಾರಿಗಳು ಶ್ರೀಗಂಧಕ್ಕೆ ಹಾಗೂ ಭೂತಾಯಿಗೆ ಅಪಮೌಲ್ಯ ಮಾಡುತ್ತಿರುವುದನ್ನು ನಾನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದರು. ಶ್ರೀಗಂಧವು ರಾಷ್ಟ್ರದ ಅಮೂಲ್ಯ ಸಂಪತ್ತು. ಅದನ್ನು ಬೆಳೆಸಿದ ರೈತನಿಗೆ ಗೌರವ ನೀಡದೆ ದೌರ್ಜನ್ಯ ನಡೆಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು.

ಅರಣ್ಯ ಅಧಿಕಾರಿಗಳಾದ ರವೀಂದ್ರ ಅವರು ರೈತರು ನಮ್ಮ ದೇಶದ ಬೆನ್ನೆಲಬು ನಾವು ಅವರಿಂದ ಅನ್ನ ತಿನ್ನುತ್ತಿದ್ದೇವೆ ಹಾಗಾಗಿ ಮಾನವೀಯತೆ ದೃಷ್ಟಿಯಿಂದಾದರೂ ಸಹ ವರದಿ ಸಲ್ಲಿಸುವ ಮುನ್ನ ಯೋಚಿಸಬಹುದಿತ್ತಲ್ಲವೇ? ರೈತರು ದಯಾಮರಣ ಕೇಳುವ ಹಂತಕ್ಕೆ ಬಂದಿರುವುದು ನಮ್ಮ ರಾಜ್ಯದ ದುರದೃಷ್ಟ ಸಂಗತಿಯಾಗಿದೆ. ಕರ್ನಾಟಕದ ಹೆಮ್ಮೆಯ ಶ್ರೀಗಂಧಕ್ಕೆ 420₹ ದರ ನಿಗದಿ ಮಾಡುವ ಮೂಲಕ ನಿಂಬೆ ಹಣ್ಣಿಗೆ ಇರುವ 3500₹ ಕ್ಕು ಅತೀ ಕಡಿಮೆ ಬೆಲೆ ನಿಗದಿ ಮಾಡಿರುವುದು ಶ್ರೀಗಂಧಕ್ಕೆ ಅಗೌರವ ತಂದರಿವ ದುಸ್ಥಿತಿ ಎಂದರೆ ತಪ್ಪಾಗಲಾರದು! ರೈತರೊಬ್ಬರು ನನಗೆ ದಯಾಮರಣ ನೀಡಿ ಅಂತ ಅಂಗಲಾಚಿತ್ತಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ..!

Author