ಶಿವಮೊಗ್ಗ,ದಿನಾಂಕ 31.01.2026ರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ VB G RAM G ಯೋಜನೆ ಬಗ್ಗೆ ಜಾಗೃತಿ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಈ ಒಂದು ಸಮ್ಮೇಳನದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿಯವರು ಶಿವಮೊಗ್ಗದ ಲೋಕಸಭಾ ಸದಸ್ಯರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್. ಕೆ. ಜಗದೀಶ್ ಅವರು ಶಿವಮೊಗ್ಗದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪನವರು ವಿಧಾನಪರಿಷತ್ ನ ಸದಸ್ಯರಾದ ಡಿ. ಎಸ್. ಅರುಣ್ ಅವರು ಹಾಗೂ ಡಾಕ್ಟರ್ ಧನಂಜಯ್ ಸರ್ಜಿ ಅವರು ಉಪಸ್ಥಿತರಿರುತ್ತಾರೆ.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ ನಗರ ಅಧ್ಯಕ್ಷರು ಹಾಗೂ ಎಲ್ಲಾ ಸ್ತರದ ಬಿಜೆಪಿ ಪ್ರಮುಖರು ಈ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.



