ಶಿವಮೊಗ್ಗ,ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡು, ಮೇಗರವಳ್ಳಿಗೆ ಮೆರಗು ತಂದ, ಬಾಲಾಜಿ ಕ್ರಿಕೆಟ್ ಕಪ್ 2026 ಹಾಗೂ ಲಲಿತಮ್ಮ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಉತ್ಸವ.ತೀರ್ಥಹಳ್ಳಿ ತಾಲ್ಲೂಕು ಮೇಗರವಳ್ಳಿಯಲ್ಲಿ, ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ 15 ನೇ ವಾರ್ಷಿಕೋತ್ಸವ ಹಾಗೂ ದಿ/ ಲಲಿತಮ್ಮ ಅವರ 75 ನೇ ವರ್ಷದ ಹುಟ್ಟು ಹಬ್ಬದ ಸವಿನೆನಪಿಗಾಗಿ, ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದಲ್ಲಿ ಜನವರಿ 24 ರಿಂದ ಜನವರಿ 26 ವರೆಗೆ ನಡೆದ ಆಗುಂಬೆ ಹೋಬಳಿ ಮತ್ತು ಮತ್ತೂರು ಹೋಬಳಿ ಆಟಗಾರರನ್ನು ಒಳಗೊಂಡ, ಲೀಗ್ ಕಂ ನಾಕೌಟ್ ಮಾದರಿಯ ಕ್ರಿಕೆಟ್ ಟೂರ್ನಮೆಂಟ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಯಿತು.
ಕ್ರಿಕೆಟ್ ಹಬ್ಬಕ್ಕೆ ಸಾಂಸ್ಕೃತಿಕ ರಂಗು,ಸತತ ಎರಡನೇ ಬಾರಿಗೆ, ಕ್ರಿಕೆಟ್ ಹಬ್ಬದ ಜೊತೆಗೆ,ಕಲಾ ಕುಂಭ ಕುಳಾಯಿ ಮಂಗಳೂರು ಕಲಾವಿದರು ಅತ್ಯಂತ ಮನೋಜ್ಞವಾಗಿ, ಅಭಿನಯಿಸಿದ ಅದ್ಬುತ ಪೌರಾಣಿಕ ನಾಟಕ, ” ಪರಮಾತ್ಮ ಪಂಜುರ್ಲಿ ” ಎಂಬ ಕಲಾ ವೈಭವವನ್ನು ಅತ್ಯಂತ ಅವಿಸ್ಮರಣೀಯವಾಗಿ ಭವ್ಯ ರಂಗ ವೇದಿಕೆಯಲ್ಲಿ ಪ್ರಸ್ತುತ ಪಡಿಸಿ, ಜನ ಮನ್ನಣೆ ಪಡೆದರು.
ಈ ನಾಟಕದ ತಾಂತ್ರಿಕತೆ, ಅಭಿನಯ, ಕಲಾ ಪ್ರದರ್ಶನ, ಸಂಗೀತ ಸಂಯೋಜನೆ, ಕಲಾವಿದರ ಮನೋಜ್ಞ ನಟನೆ, ಅತ್ಯುತ್ತಮವಾಗಿ, ಕಣ್ಮನ ಸೆಳೆಯುವಂತೆ ಅಭಿನಯಿಸಿ ಪೇಕ್ಷಕರ ಹೃದಯ ಮಾನಸದಲ್ಲಿ ಸ್ಮರಣೀಯವಾಗಿ ಉಳಿಯುವಂತೆ ಮಾಡಿದರು. ಅದೇ ವೇದಿಕೆಯಲ್ಲಿ, ಆರೋಗ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಮಾಡಿದ ಶ್ರೀಮತಿ ವೀಣಾ ಎಂ ಪಿ ಆರೋಗ್ಯ ಸಹಾಯಕಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹೆಗ್ಗೋಡು, ಮೇಗರವಳ್ಳಿ ಅವರಿಗೆ ” ಲಲಿತಮ್ಮ ಸೇವಾ ಪ್ರಶಸ್ತಿ 2026 ” ನೀಡಿ ಗೌರವಿಸಲಾಯಿತು.
ನಂತರ, ಮಲೆನಾಡಿನ ಯುವಕರಿಗೆ ಸ್ಪೂರ್ತಿಯ ಕಿರಣ, ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆ, ಐ ಪಿ ಎಸ್ ಪಾಸು ಮಾಡಿ, ಪ್ರಸ್ತುತ ಮಂಗಳೂರಿನ ಪೋಲಿಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ, ಕಾನೂನು ಮತ್ತು ಸುವ್ಯವಸ್ಥೆಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ, ಮೂಲತಃ ಮೇಗರವಳ್ಳಿ ಗ್ರಾಮದವರಾದ ಮಿಥುನ್ ಹೆಚ್ ಎನ್ IPS ಅವರನ್ನು ಹಾಗೂ ಮಲೆನಾಡಿನ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ನಿರಂತರವಾಗಿ ದುಡಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಸ್ನೇಹಿತರು ಹಿತೈಷಿಗಳು ಆದ ಶ್ರೀ ಮಂಜು ಬಾಬು ಹೆಚ್ ಪಿ ಅವರಿಗೆ ” ಬೆಳ್ಳಿ ಗದೆ ” ನೀಡಿ ಗೌರವಿಸಿ ಸನ್ಮಾನ ಮಾಡಲಾಯಿತು.

ಕ್ರೀಡಾಕೂಟದ ಸರಣಿ ಸರ್ವೋತ್ತಮ ಪ್ರಶಸ್ತಿ, ರೆಪ್ರೀಜರೇಟರ್ ನೀಡಿದ್ದ ಪ್ರಶಾಂತ್ ದನಿನಕೊಡಿಗೆ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.. ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಮತ್ತು ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಸದಸ್ಯರು ಸಂಬಂಧಿಸಿದ ಎಲ್ಲರನ್ನೂ ಎಲ್ಲಾ ಮುಖ್ಯ ಅತಿಥಿಗಳು ಶ್ಲಾಘಿಸಿದರು. ಜೊತೆಗೆ ಇದೊಂದು ಅತ್ಯಂತ ಮಾದರಿ ಕಾರ್ಯ ದಿವಂಗತ, ಲಲಿತಮ್ಮ ಅವರ ಹೆಸರಿನಲ್ಲಿ ಅವರ ಮಗ ವಿಜೇತ ಶೆಟ್ಟಿ ಮಾಡುತ್ತಿರುವ ಕಾರ್ಯ, ಇಡೀ ಸಮಾಜಕ್ಕೆ ಮಾದರಿಯಾದುದು, ಮೇಗರವಳ್ಳಿಯ ನೆನಪುಗಳು ಸದಾ ಅಜರಾಮರ, ಯಾವುದೇ ಸನ್ಮಾನ ಆದರೂ ಹುಟ್ಟಿದ ಊರಿನ ಸನ್ಮಾನ ಮತ್ತು ಈ ನೆಲದ ಪ್ರೀತಿ ಸದಾ ಅವಿಸ್ಮರಣೀಯ ಎಂದು IPS ಅಧಿಕಾರಿ ಹೆಚ್ ಎನ್ ಮಿಥುನ್ ಅವರು ಅಭಿಪ್ರಾಯ ಪಟ್ಟರು.
ಲಲಿತಮ್ಮ ಪ್ರಶಸ್ತಿ ಪಡೆದ ವೀಣಾ ಎಂ ಪಿ ಮಾತಾನಾಡಿ, ಎಲೆ ಮರೆಯ ಕಾಯಿಯಂತೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನಂತಹ ನೌಕರರಿಗೆ ಅಮ್ಮ ಲಲಿತಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿರುವುದು ನನ್ನ ವೃತ್ತಿ ಜೀವನದ ಅವಿಸ್ಮರಣೀಯ ಕ್ಷಣ ಎಂದು ಅಭಿಪ್ರಾಯಪಟ್ಟು, ವಿಜೇತಣ್ಣ ಮತ್ತು ಅವರ ಇಡೀ ಕುಟುಂಬಕ್ಕೆ ನಾನು ಅಭಾರಿ ಎಂದರು, ನಂತರ ಮಾತಾನಾಡಿದ ಮಂಜು ಬಾಬು ಅವರು, ‘ ಬೆಳ್ಳಿ ಗದೆ’ ನೀಡಿ ಗೌರವ ನೀಡಿರುವುದು ನನ್ನ ವೃತ್ತಿ ಜೀವನದ ಅಮೋಘ ಕ್ಷಣ, ನನ್ನ ಸೇವೆಗೆ ಸಿಕ್ಕ ಬಹುದೊಡ್ಡ ಗೌರವ, ಈ ಪ್ರೀತಿ ಮತ್ತು ಸ್ನೇಹ ಸದಾ ಅಮರ, ವಿಜೇತಣ್ಣ ಅವರ ಸೇವಾ ಕೈಂಕರ್ಯ ಹೀಗೆ ಮುಂದುವರೆಯಲಿ ನಾವೆಲ್ಲರೂ ಸದಾ ಜೊತೆಗೆ ಇರುತ್ತೇವೆ ಎಂದು ನುಡಿದರು.

ವೇದಿಕೆಯಲ್ಲಿ ಹಾಜರಿದ್ದ ಸರ್ವರೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ನ ವಿಜೇತ್ ಅವರು ಮತ್ತು ಅವರ ಯುವಕರ ಸಂಘಟನೆಯ ಶಕ್ತಿ ಇಡೀ ತೀರ್ಥಹಳ್ಳಿಗೆ ಮಾದರಿಯಾದುದು ಜೊತೆಗೆ ನಿರಂತರವಾಗಿ ಯಶಸ್ವಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗೆ ಇಡೀ ಬಾಲಾಜಿ ಕ್ಲಬ್ ನ ಯುವಕರ ಒಗ್ಗಟ್ಟಿನ ಹೋರಾಟದ ಸೇವಾ ಕೈಂಕರ್ಯವನ್ನು ಶ್ಲಾಘಿಸಿದರು.
ಕ್ರೀಡಾ ಸಮಾರೋಪ ಸಮಾರಂಭದ ವೇದಿಕೆಯ, ಅಧ್ಯಕ್ಷತೆಯನ್ನು, ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ದಿಲೀಪ್ ಕರುಣಾಪುರ ವಹಿಸಿದ್ದು ವೇದಿಕೆಯಲ್ಲಿ, ಶ್ರೀ ಮೋಹನ್ ಶೆಟ್ರು ಅಧ್ಯಕ್ಷರು ಲಲಿತಮ್ಮ ಚಾರಿಟೇಬಲ್ ಟ್ರಸ್ಟ್, ಪೋಲಿಸ್ ಉಪ ಆಯುಕ್ತರಾದ ಶ್ರೀ ಮಿಥುನ್ ಹೆಚ್ ಎನ್, ಶ್ರೀ ಮಂಜು ಬಾಬು ಹೆಚ್ ಪಿ, ಶ್ರೀ ಬಾಳೇಹಳ್ಳಿ ಪ್ರಭಾಕರ್, ಶ್ರೀ ವೆಂಕಟೇಶ್ ಹೆಗಡೆ, ಶ್ರೀ ವಿಜೇತ್ ಶೆಟ್ಟಿ,ಶ್ರೀ ಆದರ್ಶ ಹುಂಚದಕಟ್ಟೆ ಶ್ರೀ ಶಶಾಂಕ್ ಹೆಗಡೆ ಗುಡ್ಡೇಕೇರಿ ಶ್ರೀ ರಾಘವೇಂದ್ರ ಭಟ್,ಗುಡ್ಡೇಕೊಪ್ಪ, ಶ್ರೀ ಸತೀಶ್ ಶೆಟ್ಟಿ, ಶ್ರೀ ಮಂಜುನಾಥ್ ಶೆಟ್ಟಿ ಬಾಲಾಜಿ ಗ್ರೂಪ್ಸ್, ದಾನಿಗಳಾದ ಶ್ರೀ ಪ್ರಶಾಂತ್ ದಂಡಿನಕೊಡಿಗೆ, ಶ್ರೀ ನಿತಿನ್ ಹೆಗಡೆ ಮೇಗರವಳ್ಳಿ ಶ್ರೀ ಭರತ್ ಭೂಷಣ್ ಭಾವಿಕೆರೆ, ಲಲಿತಮ್ಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೀಣಾ ಎಂ ಪಿ.ಆಗುಂಬೆ ಪೋಲಿಸ್ ಸಬ್ ಇನ್ಸ್ಪೆಕ್ಟರ್, ಶ್ರೀ ಶಿವನಗೌಡ ರವರು ಹಾಗೂ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಕಾಂತ್ ಪಣತ, ಮುಖ್ಯ ಶಿಕ್ಷಕಿ ಶ್ರೀಮತಿ ಸುಮ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಲತಾ, ಮೆಸ್ಕಾಂ ಇಲಾಖೆಯ ಮುಖ್ಯಸ್ಥರಾದ ಶ್ರೀ ಮಂಜುನಾಥ್, ಶ್ರೀ ವರ್ಧನ್ ಕೊಳಿಗೆ, ಶ್ರೀ ಮಹಮ್ಮದ್ ಶಫಿ ವರ್ತಕರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶ್ರೀಮತಿ ಶಿಲ್ಪಾ ಕೆ ಹೆಚ್ ಹಾಜರಿದ್ದರು.ಕಾರ್ಯಕ್ರಮದಲ್ಲಿ,ನವ್ಯ ಜೋಗಿ ಪ್ರಾರ್ಥಸಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ವೀರೇಶ್ ಟಿ ಗುಡ್ಡೇಕೇರಿ ಸ್ವಾಗತಿಸಿ, ವೆಂಕಟೇಶ್ ಹೆಗಡೆ ಪ್ರಾಸ್ತಾವಿಸಿ, ಶ್ರೀಮತಿ ಮಧು ಸುಧೀರ್ ಸನ್ಮಾನಿತರ ಬಗ್ಗೆ ವಾಚನ ಮಾಡಿ ಶ್ರೀ ನಾಗರಾಜ್ ರಾಣಾ, ಅರೇಹಳ್ಳಿ, ಅತ್ಯುತ್ತಮ ನಿರೂಪಣೆ ಮಾಡಿದರು.

ಶ್ರೀ ರಾಘವೇಂದ್ರ ಭಟ್ ವಂದಿಸಿದರು.ಬಾಲಾಜಿ ಕಪ್ 2026 ಹಾಗೂ ಸಾಂಸ್ಕೃತಿಕ ಉತ್ಸವಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಸರ್ವರಿಗೂ, ಗಣ್ಯರಿಗೂ, ದಾನಿಗಳಿಗೂ, ಕಲಾ ವೃಂದಕ್ಕೂ ಎಲ್ಲಾ ತಂಡದ ಮಾಲೀಕರು ಆಟಗಾರರಿಗೂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿಯ ಎಸ್ ಡಿ ಎಂ ಸಿ ಯ ಅಧ್ಯಕ್ಷರು ಸದಸ್ಯರು, ಮುಖ್ಯ ಶಿಕ್ಷಕರು ಶಿಕ್ಷಕರು ಪೋಷಕರು ಮಕ್ಕಳಿಗೂ, ಗ್ರಾಮ ಪಂಚಾಯತಿ ಮೇಗರವಳ್ಳಿಯ ಅಧ್ಯಕ್ಷರು ಸದಸ್ಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗೂ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಹಗಲಿರುಳು ಶ್ರಮಿಸಿದ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಸದಸ್ಯರಿಗೂ ಹಾಗೂ ಮೇಗರವಳ್ಳಿ ಗ್ರಾಮಸ್ಥರು ಹಾಗೂ ಎಲ್ಲಾ ಇಲಾಖೆಯ ಸಹಕಾರಕ್ಕೆದಿ/ ಲಲಿತಮ್ಮ ಕುಟುಂಬದ ಶ್ರೀ ಮೋಹನ್ ಶೆಟ್ರು ಶ್ರೀಮತಿ ಲಲಿತಾ, ಶ್ರೀ ಶ್ರೀನಾಥ್ ಶ್ರೀಮತಿ ಶೈಲಾ, ಶ್ರೀಮತಿ ಭಾರತಿ ಶ್ರೀ ಲೋಕೇಶ್ ಹಾಗೂ ಶ್ರೀಮತಿ ದೀಪಿಕಾ ವಿಜೇತ್, ಶ್ರೀ ವಿಜೇತ್ ಶೆಟ್ಟಿ ಮೇಗರವಳ್ಳಿ ಹಾಗೂ ಕು// ಮನಸ್ವಿ ವಿಜೇತ್ ಶೆಟ್ಟಿ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.



