ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯರು ಆಗಿರುವ ಅರ್ಚನ ನಿರಂಜನ್ ಅವರು ನಿನ್ನೆ ದಿವಸ ಶಿವಮೊಗ್ಗ ಜಿಲ್ಲಾ ಉಪನಿರ್ದೇಶಕರಾದ ಮಂಜುನಾಥ್ ಅವರಿಗೆ ನಗರದಲ್ಲಿರುವ ಖಾಸಗಿ ಇಂಚರ ಶಾಲೆಯ ಅವ್ಯವಸ್ಥೆ ಕುರಿತು ದೂರು ನೀಡುವ ಮೂಲಕ ಶಿಕ್ಷಣ ಸಚಿವರಿಗೆ ಕೆಟ್ಟು ಹೆಸರು ತರದಂತೆ ತತ್ಕ್ಷ ಣ ಶಿಕ್ಷಣ ಇಲಾಖೆಯಿಂದ ಇಂತಃ ಅವ್ಯವಸ್ಥೆಯಿಂದ ಕೂಡಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಿ ಮತ್ತು ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಸೂಕ್ತ ವ್ಯವಸ್ಥೆ ಹಾಗೂ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ನೀಡುವಂತೆ ಆಗಲಿ ಎಂದು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ಶಿವಮೊಗ್ಗ ನಗರದ ಗೋಪಾಳದ ಆಲ್ ಹರೀಮ್ ಲೇಔಟ್ ನಲ್ಲಿರುವ ಸೈಟ್ ನಂಬರ್ 137 ರಲ್ಲಿ ಒಂದು ಮನೆ ಇದ್ದು ಅದನ್ನು ಶಾಲೆಯನ್ನಾಗಿ ಪರಿವರ್ತಿಸಲಾಗಿದೆ. ಉನ್ನತಿ ಎಜುಕೇಶನ್ ಟ್ರಸ್ಟ್ 2009-10 ರಲ್ಲಿ ರೆಜಿಸ್ಟರ್ ಆಗಿದ್ದು ಇಂಚರ ಎಂಬ ಆಂಗ್ಲ ಮಾಧ್ಯಮ ಶಾಲೆಯನ್ನು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದ್ದು, ಎರಡು ಮಹಡಿ ಕಟ್ಟಡ ಇದಾಗಿದ್ದು, ಮನೆಬಾಗಲಿಗೆ ಗ್ರಿಲ್ ಹಾಕಿ ಗೇಟ್ ಎಂಬಂತೆ ಮಾಡಿದ್ದೂ ಇಡೀ ಶಾಲೆಯಲ್ಲಿ ಎಲ್ಲಿಯೂ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲ, ಒಮ್ಮೆ ನಿಮ್ಮ ಅನುಮತಿಯನ್ನ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು ಎಂತಹ ಕಟ್ಟಡಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದೆ ಎಂಬುದನ್ನು ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಎದುರಾಗಿದೆ.
ದುಡ್ಡಿನ ಆಸೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನೇ ಹಾಳು ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ದೈಹಿಕ ಚಟುವಟಿಕೆಗೆ ಅವಕಾಶವಿಲ್ಲ ಲ್ಯಾಬಿಲ್ಲ, ಲೈಬ್ರರಿ ವ್ಯವಸ್ಥೆಯಿಲ್ಲ ಯಾವದೇ ಒಂದು ಶಾಲೆಗೆ ಬೇಕಾದ ವ್ಯವಸ್ಥೆಗಳೇ ಇಲ್ಲದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ದೈಹಿಕ ಚಟುವಟಿಕೆಗೆ ಆಟದ ಮೈದಾನವಿಲ್ಲ.ಪೋಷಕರಿಂದ ಲಕ್ಷ ಲಕ್ಷ ಹಣ ಪೀಕುವ ಇಂತಃ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅಗತ್ಯವಾದ ಸವಲತ್ತುಗಳನ್ನು ನೀಡುತ್ತಿಲ್ಲ.ಶಾಲೆಗಳೇನು ವಾಣಿಜ್ಯ ಚಟುವಟಿಕೆ ನಡೆಸುವ ಕೇಂದ್ರಗಳಲ್ಲ ಕಾಂಪ್ಲೆಕ್ಸ್ ಗಳಲ್ಲಿ ಮನೆಗಳಲ್ಲಿ ಗುಬ್ಬಚ್ಚಿ ಗುಡಿನಂತ ಸ್ಥಳಗಳಲ್ಲಿ ಶಾಲೆಗಳನ್ನು ತೆರೆಯುತ್ತಾರೆ ಎಂದರೆ ಇದರ ಹಿಂದಿರುವ ಅಸಲಿಯೇತ್ತಾದರೂ ಏನು ಎಂಬ ಪ್ರಶ್ನೆ ಮೂಡಿದೆ?

ಇಂಚರ ಶಾಲೆಯಲ್ಲಿನ ಪರಿಸ್ಥಿತಿ ನೋಡಿದರೆ ಮುಖ್ಯ ರಸ್ತೆಗೆ ಕಾಂಪೌಂಡ್ ಸೇರಿ ಮನೆ ನಿರ್ಮಾಣ ಆಗಿದ್ದು ಮನೆಗೆ ಗೇಟ್ ಹಾಕಿ ಎಂಟ್ರಿನ್ಸ್-ಕಾರ್ ಪಾರ್ಕಿಂಕ್ ಜಾಗಕ್ಕೆ ಗ್ರಿಲ್ ಹಾಕುವ ಮುಖೇಣ ಶಾಲೆ ನಿರ್ಮಾಣವಾಗಿದೆ.ಶಾಲೆಯ ಮುಖ್ಯಪಾಧ್ಯಾಯಿನಿ ಯಾರಾದ್ರೂ ಶಾಲೆಯಲ್ಲಿನ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಹಾಗೂ ಪೋಷಕರು ಮತ್ತು ಮಕ್ಕಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದಿಲ್ಲ ಹಾಗೂ ಈ ಶಾಲೆಯಲ್ಲಿನ ಶಿಕ್ಷಕರಿಗೆ ಸರಿಯಾಗಿ ಪಾಠ ಮಾಡಲು ಬರಲ್ಲ ಎಂಬ ಮೇಲಿನೆಲ್ಲ ದೂರುಗಳು ಕೇಳಿಬರುತ್ತಿದೆ. ಇನ್ನು ಶಾಲೆಯ ಶೌಚಾಲಯ ವ್ಯವಸ್ಥೆ ಗಬ್ಬೆದ್ದು ನಾರುತ್ತಿದ್ದೂ ಇದರಿಂದ ವಿದ್ಯಾರ್ಥಿಗಳಿಗೆ ರೋಗ ರೂಜಿನ ಕಾಡುತ್ತಿದೆ.
ಸರ್ಕಾರಿ ಶಾಲೆಯಲ್ಲಿ ಇರುವಂತೆ ಶಾಲಾ ಮೇಲ್ವಿಚಾರಣ ಸಮಿತಿ ಇಲ್ಲದಿರುವುದು ಇವರ ಆಟಟೋಪಗಳಿಗೆ ಕಡಿವಾಣ ಇಲ್ಲದಾಗಿದೆ. ಪ್ರಕೃತಿದತ್ತವಾದ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳ ಕಲಿಕಾ ಜೀವನ ಹಾಗೂ ದೈಹಿಕ ಚಟುವಟಿಕೆ ಅನುಗುಣವಾಗಿ ವ್ಯವಸ್ಥೆ ಇದ್ದಲ್ಲಿ ಶಾಲೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಅತ್ಯುತ್ತಮವಾಗಿರಲಿದೆ.
ಇಷ್ಟೆಲ್ಲಾ ಅವ್ಯವಸ್ಥೆ ಹೊಂದಿರುವ ಮನೆಯ ಶಾಲೆಯನ್ನುಕನಿಷ್ಠ ಸೌಲಭ್ಯ ಇರುವ ಮನೆಗಳಲ್ಲಿ ನಡೆಸುವ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿರುವುದೇ ಮುಂದೊಂದು ದಿನ ದುರಂತಕ್ಕೆ ಕಾರಣವಾದಿತು. ಹಾಗೂ ಸರ್ಕಾರಿ ಶಾಲೆಗಳ ಬಂದ್ ಆಗಲು ಇಂತಹ ಪರಿಸ್ಥಿತಿಗಳೇ ಕಾರಣವಾಗಿದೆ.ಇಂತಹ ಕನಿಷ್ಠ ಸೌಲಭ್ಯವಿರುವ ಖಾಸಗಿ ಶಾಲೆಗಳಲ್ಲಿ ಒಂದು ವಿದ್ಯುತ್ ಅವಘಡ ನಡೆದಲ್ಲಿ ಬಂದು ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡುವುದು ಸಹ ಕಷ್ಟಕರವಾಗಿದೆ.
ನಗರ ಮತ್ತು ಜಿಲ್ಲೆಯಲ್ಲಿ ಇರುವ ಇಂತಃ ಶಾಲೆಗಳನ್ನು ಬಂದ್ ಮಾಡಿಸಬೇಕು ಇಲ್ಲವೇ ಬೇರೆಡೆಸ್ವಾಳಂತರಿಸಬೇಕು ಎಂಬುದನ್ನು ನಾವು ಈ ಮೂಲಕ ಶಿವಮೊಗ್ಗ ಜಿಲ್ಲಾ ಉಪನಿರ್ದೇಶಕರಿಗೆ ಅರ್ಚನ ನಿರಂಜನ್ ಅವರು ದೂರು ನೀಡಿ ಕ್ರಮ ಜರುಗಿಸುವಂತೆ ಕೊರಿದ್ದಾರೆ.



