ಶಿವಮೊಗ್ಗ | ಇಂಚರ ಶಾಲೆಗೆ ಬಿಇಒ ರಮೇಶ್ ನಾಯ್ಕ್ ಭೇಟಿ ಪರಿಶೀಲನೆ

ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿರುವ ಇಂಚರ ಶಾಲೆಯ ಅವ್ಯವಸ್ಥೆ ಕುರಿತಾಗಿ ನಮ್ಮ ಇ-ಕನ್ನಡ.in ಸುದ್ದಿ ಮಾಡಿತ್ತು.ಸುದ್ದಿಯ ಬೆನ್ನಲ್ಲೇ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮಕ್ಕೆ ಮಾತನಾಡಿ ನಮ್ಮ ಇಸಿಒ ಅಧಿಕಾರಿಗಳು ಶಾಲೆಯ ದಾಖಲೆಗಳನ್ನು ಪರಿಶೀಲನೆ ಮಾಡುವ ಮೂಲಕ ಸಂಪೂರ್ಣ ವರದಿಯನ್ನು ನೀಡಲು ತಿಳಿಸಿದ್ದೇನೆ ಹಾಗೂ ವಿದ್ಯಾರ್ಥಿಗಳಿಗೆ ಯಾವದೇ ರೀತಿಯ ಸಮಸ್ಯೆಗಳು ಆಗದಂತೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನು ಮಾಡುತ್ತೇನೆ ಎಂದರು.

ಸದರಿ ಮಾಹಿತಿಯನ್ನು ಡಿಡಿಪಿಐ ಅವರಿಗೆ ರವಾನಿಸುತ್ತೇನೆ ಹಾಗೂ ಮುಂದಿನ ಕ್ರಮಗಳನ್ನು ಮೇಲಿನ ಅಧಿಕಾರಿಗಳ ಸೂಚನೆಯಂತೆ ಕರ್ತವ್ಯ ನಿರ್ವಹಿಸುತ್ತೇನೆ ಹಾಗೂ ನಿಮ್ಮ ಸುದ್ದಿ ನೈಜತೆಯಿಂದ ಇದೆ ಎಂದು ತಿಳಿಸಿದ್ದಾರೆ. ಕಾನೂನು ರೀತಿಯಲ್ಲಿ ಏನೆಲ್ಲಾ ಇದೆ ಅದರ ಅಡಿಯಲ್ಲಿ ಕ್ರಮ ಆಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ಸುದ್ದಿ ಸಂಬಂಧ ಪೋಷಕರು ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಮಕ್ಕಳಿಗೆ ಆಟ ಪಾಠ ಎಲ್ಲವು ಬೆಳವಣಿಗೆ ಸಮಯದಲ್ಲಿ ಅತ್ಯಾವಶ್ಯಕ ಎಂದು ತಿಳಿಸಿದ್ದಾರೆ.

ಇನ್ನು ನಮ್ಮ ಸುದ್ದಿ ಬಿತ್ತರವಾದ್ದರಿಂದ ಶಾಲಾ ಆಡಳಿತ ಮಂಡಳಿ ಅವರು ಪೋಷಕರು ಎಂಬಂತೆ ನಮ್ಮ ಮಾಧ್ಯಮ ಪ್ರತಿನಿಧಿಗೆ ಕರೆ ಮಾಡಿ ಸುದ್ದಿಯನ್ನ ಶಾಲೆಯ ಪರವಾಗಿ ಬರೆಯಿರಿ, ಪ್ರಕಟಿಸಿರುವ ಸುದ್ದಿಯನ್ನು ಅಳಿಸಿ ಎಂಬಇತ್ಯಾದಿ ತಾಕಿತು ಮಾಡಿರುತ್ತಾರೆ. ಇದಕ್ಕೆ ಸುದ್ದಿ ಯಥಾವತ್ತಾಗಿ ಮಾಡುವುದು ನಮ್ಮ ಮಾಧ್ಯಮ ಕರ್ತವ್ಯ ಎಂದು ತಿಳಿಸಿದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿಯೇ ಮಾತಾಡಿಕೊಳ್ಳುತ್ತೇವೆ ನಮಗೆ ಗೊತ್ತಿದೆ ಎಂಬ ದರ್ಪದ ಮಾತುಗಳನ್ನ ಆಡಿರುತ್ತಾರೆ.

ಹಾಗೂ ಶಾಲೆಯ ಪೋಷಕರ ಹೆಸರಲ್ಲಿ ಈ ರೀತಿಯ ಕರೆ ಮಾಡಿರುವುದು ನಿಜಕ್ಕೂ ಶಾಲಾ ಆಡಳಿತ ಮಂಡಳಿಯ ಲೋಪ ದೋಷಗಳನ್ನ ಎತ್ತಿ ತೋರಿಸುತ್ತೆ.

ಶಿಕ್ಷಣ ಸಚಿವರು ಕೆಪಿಎಸ್ ಶಾಲೆ ಒಂದೇ ಸೂರಿನಡಿ ಆಟ ಪಾಠ ಸಂಗೀತ ವ್ಯಾಯಾಮ ದೈಹಿಕ ಮಾನಸಿಕ ಚಟುವಟಿಕೆ ಎಲ್ಲವು ವಿದ್ಯಾರ್ಥಿಗಳಿಗೆ ಸಿಗುವಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕೆಪಿಎಸ್ ಶಾಲೆ ತೆರೆಯಲು ಮುಂದಾಗುತ್ತಿದ್ದಾರೆ, ಆದರೆ ವಿಪರ್ಯಾಸವೆಂಬಂತೆ ಶಿಕ್ಷಣ ಸಚಿವರ ತವರೂರಲ್ಲೆ ಇಂತಃ ಕನಿಷ್ಠ ವ್ಯವಸ್ಥೆಯ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವುದು ದುರಂತವೇ ಸರಿ!

ಇನ್ನಾದರೂ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಇಂತಃ ಅವ್ಯವಸ್ಥೆಯಿಂದ ಕೂಡಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ಜವಾಬ್ದಾರಿ ಅಧಿಕಾರಿಗಳ ಹೆಗಲಮೇಲಿದೆ.

ಪ್ರಸ್ತುತ ಕಾನೂನಿನ ಪ್ರಕಾರ ಕನಿಷ್ಠ 1 ಎಕರೆ ಜಾಗವಿದ್ದರೆ ಮಾತ್ರ ಶಾಲೆ ತೆರೆಯಲು ಅವಕಾಶವಿದೆ, ಮತ್ತು ಹಲವಾರು ಕಾನೂನುಗಳಿವೆ, ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲವಗಬೇಕೆಂದರೆ ಆಟ ಪಾಠ ಎಲ್ಲದು ಬೆಳವಣಿಗೆ ಹಂತದಲ್ಲಿ ಮುಖ್ಯವಾಗಿ ಅವಶ್ಯಕತೆ ಇರತ್ತೆ.

ಹಾಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಠಿಣವಾಗಿ ಕ್ರಮ ತೆಗೆದುಕೊಳ್ಳುವ ಮೂಲಕ ಶಿಕ್ಷಣ ಸಚಿವರಿಗೆ ಮುಜುಗರ ಆಗದಂತೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿರುವುದು ಅತ್ಯಾವಶ್ಯವಾಗಿದೆ!

Author