ಶಿವಮೊಗ್ಗ,ಎ.ಸಿ (ಹವಾನಿಯಂತ್ರಿತ) ಕಚೇರಿಯಲ್ಲಿ ಕೆಲಸ ಮಾಡುವ ಡಿಡಿಪಿಐ,ಬಿಇಒ ಯವರೇ, ಸ್ವಲ್ಪ ಗಾಢ ನಿದ್ರೇಯಿಂದ ಎಚ್ಚೆತ್ತುಕೊಳ್ಳಿ.
ಶಿವಮೊಗ್ಗ ನಗರದಲ್ಲಿ ವಿದ್ಯಾರ್ಥಿಗಳಿಗೆ ಮಾರಾಕ ಆಗುವ ಎಂತೆಂತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದೀರಾ ಒಮ್ಮೆ ಗಮನಿಸಿ. ಒಮ್ಮೆ ನಿಮ್ಮ ಅನುಮತಿಯನ್ನ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು ಎಂತಹ ಕಟ್ಟಡಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದೆ ಎಂಬುದನ್ನು ಒಮ್ಮೆ ನೋಡಿ.
ಶಿವಮೊಗ್ಗ ನಗರದ ಗೋಪಾಳದ ಆಲ್ ಹರೀಮ್ ಲೇಔಟ್ ನಲ್ಲಿರುವ ಸೈಟ್ ನಂಬರ್ 137 ರಲ್ಲಿ ಒಂದು ಮನೆ ಇದ್ದು ಅದನ್ನು ಶಾಲೆಯನ್ನಾಗಿ ಪರಿವರ್ತಿಸಲಾಗಿದೆ.
ಉನ್ನತಿ ಎಜುಕೇಶನ್ ಟ್ರಸ್ಟ್ 2009-10 ರಲ್ಲಿ ರಿಜಿಸ್ಟರ್ ಆಗಿದ್ದು ಇಂಚರ ಎಂಬ ಆಂಗ್ಲ ಮಾಧ್ಯಮ ಶಾಲೆಯನ್ನು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದ್ದು. ಎರಡು ಮಹಡಿ ಕಟ್ಟಡ ಇದಾಗಿದ್ದು, ಮನೆಬಾಗಲಿಗೆ ಗ್ರಿಲ್ ಹಾಕಿ ಗೇಟ್ ಎಂಬಂತೆ ಮಾಡಿದ್ದೂ ಇಡೀ ಶಾಲೆಯಲ್ಲಿ ಎಲ್ಲಿಯೂ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲ, ಇದು ಶಿಕ್ಷಣ ಇಲಾಖೆಯ ಸಚಿವರ ತವರಿನ ವಿದ್ಯಾರ್ಥಿಗಳಿಗೆ ಇದೆಂತ ದುಸ್ಥಿತಿ ಎಂಬ ಪ್ರಶ್ನೆ ಮೂಡಿದೆ..!

ಹಣದ ಆಸೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನೇ ಹಾಳು ಮಾಡುತ್ತಿವೆ. ನಾವು ಇದೇ ಇಂಚರ ಶಾಲೆಯ ಅವ್ಯವಸ್ಥೆ ಬಗ್ಗೆ ಮುಂದುವರೆದು ತಿಳಿಸುವುದಾದರೆ ವಿದ್ಯಾರ್ಥಿಗಳಿಗೆ ದೈಹಿಕ ಚಟುವಟಿಕೆಗೆ ಅವಕಾಶವಿಲ್ಲ ಲ್ಯಾಬ್ ಇಲ್ಲ, ಲೈಬ್ರರಿ ವ್ಯವಸ್ಥೆಯಿಲ್ಲ ಯಾವದೇ ಒಂದು ಶಾಲೆಗೆ ಬೇಕಾದ ವ್ಯವಸ್ಥೆಗಳೇ ಇಲ್ಲದಾಗಿದೆ.ಎಲ್ಲದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ದೈಹಿಕ ಚಟುವಟಿಕೆಗೆ ಆಟದ ಮೈದಾನವಿಲ್ಲ.

ಪೋಷಕರಿಂದ ಲಕ್ಷ ಲಕ್ಷ ಹಣ ಪೀಕುವ ಇಂತಃ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅಗತ್ಯವಾದ ಸವಲತ್ತು ನೀಡದ ಹಿನ್ನಲೆ ಯಾವ ಪುರುಷಾರ್ಥಕ್ಕೆ ಶಾಲೆಗಳನ್ನು ತೆರೆಯಬೇಕು ಎಂಬ ಪ್ರಶ್ನೆಯಾಗಿದೆ? ಶಾಲೆಗಳೇನು ವಾಣಿಜ್ಯ ಚಟುವಟಿಕೆ ನಡೆಸುವ ಕೇಂದ್ರಗಳಲ್ಲ ಕಾಂಪ್ಲೆಕ್ಸ್ ಗಳಲ್ಲಿ ಮನೆಗಳಲ್ಲಿ ಗುಬ್ಬಚ್ಚಿ ಗುಡಿನಂತ ಸ್ಥಳಗಳಲ್ಲಿ ಶಾಲೆಗಳನ್ನು ತೆರೆಯುತ್ತಾರೆ ಎಂದರೆ ಇದರ ಹಿಂದಿರುವ ಅಸಲಿಯೆತ್ತಾದರೂ ಏನು ಎಂಬ ಆಲೋಚನೆ ಮೂಡಿದೆ?
ಇಂಚರ ಶಾಲೆಯಲ್ಲಿನ ಪರಿಸ್ಥಿತಿ ನೋಡಿದರೆ ಮುಖ್ಯ ರಸ್ತೆಗೆ ಕಾಂಪೌಂಡ್ ಸೇರಿ ಮನೆ ನಿರ್ಮಾಣ ಆಗಿದ್ದು ಮನೆಗೆ ಗೇಟ್ ಹಾಕಿ ಎಂಟ್ರನ್ಸ್ ಕಾರ್ ಪಾರ್ಕಿಂಗೆ ಜಾಗಕ್ಕೆ ಗ್ರಿಲ್ ಹಾಕುವ ಮುಖೇಣ ಶಾಲೆ ನಿರ್ಮಾಣ ಮಾಡಿದ್ದಾರೆ.
ಶಾಲೆಯ ಮುಖ್ಯಪಾಧ್ಯಾಯಿನಿ ಯಾರಾದ್ರೂ ಶಾಲೆಯಲ್ಲಿನ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ, ಸರಿಯಾಗಿ ಸ್ಪಂದಿಸುವುದಿಲ್ಲ ಹಾಗೂ ಪೋಷಕರು ಮತ್ತು ಮಕ್ಕಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದಿಲ್ಲ ಹಾಗೂ ಈ ಶಾಲೆಯಲ್ಲಿನ ಶಿಕ್ಷಕರಿಗೆ ಸರಿಯಾಗಿ ಪಾಠ ಮಾಡಲು ಬರಲ್ಲ ಎಂಬ ಮೇಲಿನೆಲ್ಲ ದೂರುಗಳು ಕೇಳಿಬರುತ್ತಿದೆ.
ಮೊದಲಿಗೆ ಇವರುಗಳ ಮೌಲ್ಯಮಾಪನವನ್ನು ಅಧಿಕಾರಿಗಳು ಮಾಡಬೇಕಿದೆ. ಶಾಲೆಯ ಆಡಳಿತ ಮಂಡಳಿ ಅಪ್ಡೇಟ್ ಇಲ್ಲದ ಹೊಸ ಯಾವದೇ ನಾವಿನ್ಯತೆಯಿಲ್ಲದಂತ ಮುಖ್ಯ ಶಿಕ್ಷಕರು ಇದ್ದಲ್ಲಿ ಶಾಲೆಯಲ್ಲಿ ಇತರೆ ಶಿಕ್ಷಕರ ಪಾಡೇನು ಎಂಬಂತಾಗಿದೆ?

ಮಕ್ಕಿಕಾ,ಮಕ್ಕಿ ಪಠ್ಯ ಓದಿಸಿ ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಬೇರೆ ಶಾಲೆಗೆ ಪ್ರವೇಶಾತಿ ಪಡೆದಂತ ಸಮಯದಲ್ಲಿ ವಿದ್ಯಾರ್ಥಿಗಳ ಜ್ಞಾನದ ಗುಣಮಟ್ಟ ಕನಿಷ್ಠವಾಗಿದ್ದು ಬೆಳಕಿಗೆ ಬರುತ್ತಿದೆ.
ಇನ್ನು ಶಾಲೆಯ ಶೌಚಾಲಯ ವ್ಯವಸ್ಥೆ ಗಬ್ಬೆದ್ದು ನಾರುತ್ತಿದ್ದೂ ಇದರಿಂದ ವಿದ್ಯಾರ್ಥಿಗಳಿಗೆ ರೋಗ ರೂಜಿನ ಕಾಡುತ್ತಿದೆ.
ಸರ್ಕಾರಿ ಶಾಲೆಯಲ್ಲಿ ಇರುವಂತೆ ಶಾಲಾ ಮೇಲ್ವಿಚಾರಣ ಸಮಿತಿ ಇಲ್ಲದಿರುವುದು ಇವರ ಆಟಟೋಪಗಳಿಗೆ ಕಡಿವಾಣ ಇಲ್ಲದಾಗಿದೆ.
ಪ್ರಕೃತಿದತ್ತವಾದ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳ ಕಲಿಕಾ ಜೀವನ ಹಾಗೂ ದೈಹಿಕ ಚಟುವಟಿಕೆ ಅನುಗುಣವಾಗಿ ವ್ಯವಸ್ಥೆ ಇದ್ದಲ್ಲಿ ಶಾಲೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಅತ್ಯುತ್ತಮವಾಗಿರಲಿದೆ.

ಇಷ್ಟೆಲ್ಲಾ ಅವ್ಯವಸ್ಥೆಯಿಂದ ಕೂಡಿರುವ ಮನೆಯನ್ನು ಶಾಲೆಯಾಗಿ ಮಾಡಿರುವ ಇಂಚರ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ ಸೌಲಭ್ಯ ಇರುವ ಮನೆಗಳಲ್ಲಿ ನಡೆಸುವ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿರುವುದೇ ಮುಂದೊಂದು ದಿನ ವಿದ್ಯಾರ್ಥಿಗಳ ಜೀವನಕ್ಕೆ ದುರಂತಕ್ಕೆ ಕಾರಣವಾದಿತು.
ಸರ್ಕಾರಿ ಶಾಲೆಗಳ ಮುಚ್ಚಲು ಇಂತಹ ಪರಿಸ್ಥಿತಿಗಳೇ ಕಾರಣವಾಗಿದೆ ಎಂಬ ಮಾತುಗಳು ಜನಸಾಮಾನ್ಯರಲ್ಲಿ ಕೇಳಿಬರುತ್ತಿದೆ.
ಇಂತಹ ಕನಿಷ್ಠ ಸೌಲಭ್ಯವಿರುವ ಖಾಸಗಿ ಶಾಲೆಗಳಲ್ಲಿ ಒಂದು ವಿದ್ಯುತ್ ಆವಘಡ ನಡೆದಲ್ಲಿ ಬಂದು ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡುವುದು ಸಹ ಕಷ್ಟಕರವಾಗಿದೆ.
ಇಂತಃ ಶಾಲೆಗಳ ಬಂದ್ ಮಾಡಿಸಬೇಕು ಇಲ್ಲವೇ ಬೇರೆಡೆ ಸ್ಥಳಾಂತರ ಮಾಡಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ..!



