ಶಿವಮೊಗ್ಗ | “ಸಂವಿಧಾನವೇ ನಮಗೆ ಬೆಳಕು” : ಡಾ. ಮೇಟಿ ಮಲ್ಲಿಕಾರ್ಜುನ್

ಶಿವಮೊಗ್ಗ

ಶಿವಮೊಗ್ಗ,ಸಂವಿಧಾನವೇ ನಮಗೆ ಬೆಳಕು” ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ. ಮೇಟಿ ಮಲ್ಲಿಕಾರ್ಜುನ ರವರು ಇಂದು ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿರುವ ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ 77 ನೇ ಸಂವಿಧಾನ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂರಚನೆ ಮತ್ತು ಸ್ಥಾಪನೆಯೇ ನಮ್ಮ ಉತ್ಕೃಷ್ಟ ಸಂವಿಧಾನದ ಜೀವಾಳವೆಂದರಲ್ಲದೆ, ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ವ್ಯಾಪ್ತಿ,ಸ್ವರೂಪ ಅಧಿಕಾರವನ್ನು ನಿರ್ದಿಷ್ಟವಾಗಿ ನಿಗದಿ ಮಾಡಲಾಗಿದೆ. ಪರಸ್ಪರ ಸಂಘರ್ಷಕ್ಕೆ ಅವಕಾಶ ಇಲ್ಲದಂತೆ ಸೌಹಾರ್ದ ಸುಲಲಿತ ಕಾರ್ಯನಿರ್ವಹಣೆಯ ಮಿತಿ ವ್ಯಾಪ್ತಿಗಳನ್ನು ಸಿದ್ಧಪಡಿಸಲಾಗಿದೆ. ಸಾಂವಿಧಾನಿಕ ಸಂಸ್ಥೆ ಹುದ್ದೆಗಳನ್ನು ರದ್ದು ಮಾಡಲು ಸಾಧ್ಯವಾಗದಂತೆ ತಡೆಯಲಾಗಿದೆ. ಅದೇ ನಮ್ಮ ಸಂವಿಧಾನದ ಮೂಲತತ್ವಗಳ ವೈಶಿಷ್ಟ್ಯ ಮತ್ತು ಸಾಮರ್ಥ್ಯ ಎಂದು ಡಾ. ಮೇಟಿ ಮಲ್ಲಿಕಾರ್ಜುನ ರವರು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಪ್ರೊ. ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಎಂ ಏಳುಕೋಟಿ, ನಿವೃತ್ತ ಪ್ರಾಧ್ಯಾಪಕರಾದ ಚಂದ್ರಪ್ಪ ಜೋಗಿ, ಡಿಎಸ್ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಬಸಪ್ಪ ಭದ್ರಾವತಿ,

ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣ ಬೊಮ್ಮನಕಟ್ಟೆ,ಶಿವಮೊಗ್ಗ ಉಪ ವಿಭಾಗದ ಅಟ್ರಾಸಿಟಿ ಕಮಿಟಿ ಸದಸ್ಯರಾದ ಯಡವಾಲ ಹನುಮಂತಪ್ಪ ತಾಲೂಕು ಸಂಚಾಲಕರಾದ ಚಿಕ್ಕಮರಡಿ ರಮೇಶ್, ನಗರ ಸಂಚಾಲಕರಾದ ಹರಿಗೆ ರವಿ, ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಸಂಚಾಲಕರಾದ ಮನ್ಸೂರ್ ಲಕ್ಕವಳ್ಳಿ, ಗಾಜನೂರು ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

Author