ಶಿವಮೊಗ್ಗ, ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಆಯೋಜಿಸಲಾದ ಗ್ರಾಸ್-ರೂಟ್ ಇನ್ನೋವೇಶನ್ 2025 ಕಾರ್ಯಕ್ರಮದಲ್ಲಿ ಆಯ್ಕೆಯಾದ 30 ವಿಜೇತರ ಪೈಕಿ ನಗರದ ಡಾ|| ಕೆ. ಎಸ್. ಶುಭ್ರತಾ ಅವರು ಒಬ್ಬರಾಗಿದ್ದಾರೆ.
ಆರೋಗ್ಯ ಸೇವಾ ವಿಭಾಗದಲ್ಲಿ ಅವರ ನವೀನ ಕಾರ್ಯಕ್ಕೆ ಮಾನ್ಯತೆ ನೀಡಿ, ನಾಲ್ಕು ಲಕ್ಷ ರೂಪಾಯಿಗಳ ಗ್ರಾಂಟ್ ಅನ್ನು ಡಾ|| ಶುಭ್ರತಾ ಅವರಿಗೆ ಮಂಜೂರು ಮಾಡಲಾಗಿದೆ.
ಮಾನಸಿಕ ರೋಗಿಗಳ ಚಿಕಿತ್ಸೆಯಲ್ಲಿ ನೃತ್ಯ-ಚಲನ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ಹಾಗೂ ಅದಕ್ಕಾಗಿ ವಿಶೇಷ ಟೂಲ್ಕಿಟ್ ಅನ್ನು ಅಭಿವೃದ್ಧಿಪಡಿಸಲು ಈ ಅನುದಾನವನ್ನು ಪಡೆಯುತ್ತಿದ್ದಾರೆ.



