ಶಿವಮೊಗ್ಗ,ನಗರದ ಕೆ.ಆರ್. ಪುರಂ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಕೆ.ಆರ್. ಪುರಂ ಜೆಪಿಎನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಂಥಾಲಯವನ್ನು ಪುನಃ ಸ್ಥಾಪಿಸಲಾಗಿದೆ. ಶಾಲಾ ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸಲು ಮತ್ತು ಜ್ಞಾನದ ವಿಸ್ತರಣೆಗಾಗಿ ಈ ಗ್ರಂಥಾಲಯವನ್ನು ಮರುಸಜ್ಜುಗೊಳಿಸಲಾಗುತ್ತಿದೆ.
ಇದಕ್ಕಾಗಿ ಸಾರ್ವಜನಿಕರು ಹಾಗೂ ಪುಸ್ತಕ ಪ್ರೇಮಿಗಳು ತಮ್ಮಲ್ಲಿರುವ ಅಥವಾ ಪರಿಚಯಸ್ಥರಲ್ಲಿರುವ ಶಾಲಾ ಮಕ್ಕಳಿಗೆ ಉಪಯುಕ್ತವಾಗುವಂತಹ ಹಳೆಯ ಪುಸ್ತಕಗಳನ್ನು ಶಾಲೆಗೆ ಉಡುಗೊರೆಯಾಗಿ ನೀಡಬೇಕೆಂದು ಶಾಲಾ ಆಡಳಿತ ಮಂಡಳಿ ಮನವಿ ಮಾಡಿದೆ.
ಮಕ್ಕಳ ಸಾಹಿತ್ಯ, ವಿಜ್ಞಾನ, ಕಥೆ, ಕವನ ಹಾಗೂ ಸಾಮಾನ್ಯ ಜ್ಞಾನದ ಪುಸ್ತಕಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಮನೆಯ ಮೂಲೆಯಲ್ಲಿ ಧೂಳು ಹಿಡಿಯುತ್ತಿರುವ ಪುಸ್ತಕಗಳು ಶಾಲೆಯ ಗ್ರಂಥಾಲಯ ಸೇರಿದರೆ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿವೆ.
ಈ ಜ್ಞಾನದಾನದ ಅಭಿಯಾನಕ್ಕೆ ಶಿವಮೊಗ್ಗದ ನಾಗರಿಕರು ಕೈಜೋಡಿಸಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಲಾಗಿದೆ. ಪುಸ್ತಕಗಳನ್ನು ನೀಡಲು ಇಚ್ಛಿಸುವವರು ನೇರವಾಗಿ ಜೆಪಿಎನ್ ಪ್ರೌಢಶಾಲೆಯನ್ನು ಸಂಪರ್ಕಿಸಬಹುದಾಗಿದೆ



