ಶಿವಮೊಗ್ಗ | 2.32 ಲಕ್ಷಕ್ಕೆ ಶಿಕಾರಿಪುರದ ವ್ಯಕ್ತಿಗೆ ಹರಾಜಾದ ಬೀಜದ ಹೋರಿ

ಶಿವಮೊಗ್ಗ

ಶಿವಮೊಗ್ಗ,ಬೀರೂರಿನಲ್ಲಿರುವ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ ಹೋರಿಕರ ಹರಾಜಲ್ಲಿ ಅಮೃತ ಮಹಲ್ ತಳಿಯ ಬೀಜದ ಹೋರಿಯೊಂದು ₹2.32 ಲಕ್ಷಕ್ಕೆ ಮಾರಾಟವಾಗಿದೆ. ಈ ಹರಾಜಲ್ಲಿ ಒಟ್ಟಾರೆ 1.02 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ.

ಹರಾಜು ಆರಂಭವಾಗುತ್ತಲೇ ಅಮೃತ್​ ಮಹಲ್​ ಹೋರಿಗೆ ಒಬ್ಬರು ₹1.50 ಲಕ್ಷ ಬೆಲೆ ಕೂಗಿದರು. ನಂತರ ರೇಟು ಡಿಮ್ಯಾಂಡ್ ಏರುತ್ತಲೇ ಹೊಯ್ತು ಅಂತಿಮವಾಗಿ ಶಿವಮೊಗ್ಗದ ರವಿಕುಮಾರ್ ಅವರು ₹2.32 ಲಕ್ಷಕ್ಕೆ ಈ ಹೋರಿ ಖರೀದಿಸಿದರು.

ಜೋಡಿ ಕರು ಹರಾಜಿನಲ್ಲಿ ‘ಗಂಗೆ’ ಮತ್ತು ‘ಗಾಳಿಕೆರೆ’ ಎಂಬ ಹೆಸರಿನ ಹೋರಿಕರಗಳನ್ನು ₹2,07,500 ರುಪಾಯಿಗೆ ಶಿಕಾರಿಪುರ ತಾಲ್ಲೂಕು ಹೊಸೂರಿನ ವೀರೇಂದ್ರ ಪಾಟೀಲ್ ವ್ಯವಹಾರ ಕುದುರಿಸಿದರು. ‘ಬಣ್ಣದ ಸರ’ ಮತ್ತು ‘ಗಾಳಿಕೆರೆ’ ಹೆಸರಿನ ಜೋಡಿ ಕರುಗಳಿಗೆ ₹2,13,500 ರೂಪಾಯಿ ಕೊಟ್ಟು ಶಿಕಾರಿಪುರದ ಈಸೂರಿನ ಬಸವರಾಜು ವ್ಯಾಪಾರ ಮಾಡಿದರು.

ಒಟ್ಟಾರೆ. 170 ಹೋರಿ ಕರು ಹಾಗೂ 8 ಬೀಜದ ಹೋರಿಗಳನ್ನ ಹರಾಜಿಗೆ ಇಡಲಾಗಿತ್ತು. ಒಂದು ಕೋಟಿಗೂ ಅಧಿಕ ವ್ಯವಹಾರ ನಡೆದಿದೆ.

Author