ಶಿವಮೊಗ್ಗ,ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಾರ್ಗ ಮಧ್ಯ ಸಂಸದ ಬಿವೈ ರಾಘವೇಂದ್ರರವರ ಕಾರಿಗೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.
ಕುಂಚೇನ ಹಳ್ಳಿ ಸಮೀಪ ಸಂಸದರ ಕಾರು ತೆರಳುತ್ತಿತ್ತು. ಈ ವೇಳೆ ಹಿಂದಿನಿಂದ ಬಂದ ಬುಲೇರೋ ಕಾರು ಸಂಸದರ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಹಿಂಬದಿಯ ಭಾಗಕ್ಕೆ ಕೆಲ ಹಾನಿಗಳಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗ ದೊಡ್ಡ ಅಪಾಯದಿಂದ ಸಂಸದರು ಪಾರಾಗಿದ್ದಾರೆ.

ಸಂಸದ ಬಿ ವೈ ರಾಘವೇಂದ್ರ ಅವರು ಎಸ್ಕಾರ್ಟ್ ವಾಹನದಲ್ಲೇ ಶಿವಮೊಗ್ಗಕ್ಕೆ ಬಂದು ವಿಮಾನದಲ್ಲಿ ಮುಂದಿನ ಪ್ರಯಾಣಕ್ಕೆ ತೆರಳಿದ್ದಾರೆ



