ಶಿವಮೊಗ್ಗ | ಎಡಿಸಿ ವೀರೇಶ್ ಬಾಬು ಮಾಧ್ಯಮ ಪ್ರತಿನಿಧಿಯನ್ನ ಗ್ರೂಪ್ ಯಿಂದ ರಿಮೋವ್ ಮಾಡಿದ ಮಾತ್ರಕ್ಕೆ, ಪ್ರಾಮಾಣಿಕ ಅಧಿಕಾರಿ ಎಂಬುದು ಸಾಬೀತು ಆಗತ್ತಾ?

ಶಿವಮೊಗ್ಗ

ಶಿವಮೊಗ್ಗ, ಮೆಡಿಕಲ್ ಶಾಪ್ ಹಾಗೂ ಮೆಡಿಕಲ್ ಏಜನ್ಸಿ ಗಳಿಗೆ ಜಿಲ್ಲೆಯಾದ್ಯಾಂತ ಎಡಿಸಿ 1 ಮತ್ತು 2 ಎಂಬ ಅಧಿಕಾರಿಗಳನ್ನು ಸರ್ಕಾರ ನೇಮಿಸುತ್ತದೆ ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಅಧಿಕಾರಿಗಳು ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ ನಿಮಗೆಲ್ಲ ಗೊತ್ತಿದ್ದೀಯ?ಈ ಅಧಿಕಾರಿಗಳು ಮೆಡಿಕಲ್ ಶಾಪ್ ಗೆ ಲೈಸನ್ಸ್ ನೀಡುವಾಗ 10 ×12 ಸುತ್ತಳತೆಯ ಜಾಗ ಹಾಗೆ ಕಾಂಕ್ರೀಟ್ ಬಿಲ್ಡಿಂಗ್ ಬೇಕು ಹಾಗೆಯೇ ಮೆಡಿಕಲ್ ಶಾಪ್ ಪ್ರಾರಂಭ ಮಾಡುವಾಗ ಇಂತಿಷ್ಟು ಅಂತ ದಾಖಲೆ ನೀಡಬೇಕು ನಾವು ಇಷ್ಟೇ ಮೆಡಿಸಿನ್ ಮಾರುತ್ತೇವೆ ಎಂದು ತಿಳಿಸಬೇಕು ಹಾಗೆಯೇ ಅಧಿಕಾರಿಗಳು ಪರಿಶೀಲನೇ ಬಂದಾಗ ಶೇಡ್ಯೂಲ್ H1 ಡ್ರಗ್ಸ್ ಮಾರಾಟ ಮಾಡುವಂತಿಲ್ಲ, ನಿದ್ದೆ ಮಾತ್ರೆ ಮಾರುವಂತಿಲ್ಲ, ಪ್ರೆಸ್ಕ್ರಿಪಶನ್ ಇಲ್ಲದಂತ ಮೆಡಿಸಿನ್ ಮರುವಂತಿಲ್ಲ ಹಾಗೆಯೇ ಮೆಡಿಕಲ್ ಏಜನ್ಸಿಗಳಿಗೆ ಕೂಡ ನಿಯಮ ನಿಬಂಧನೆಗಳಿವೆ ಆದರೆ ಎಲ್ಲವು ಪಾಲನೆ ಆಗುತ್ತಿದೆಯಾ? ಖಂಡಿತವಾಗಿಯೂ ಇಲ್ಲ!

ನಾವು ಯಾಕೆ ಈಗ ಈ ವಿಚಾರ ತಿಳಿಸುತ್ತಿದೀವೆ ಎಂದರೆ ಶಿವಮೊಗ್ಗದ ಎಡಿಸಿ ಆಗಿರುವಂತ ವಿರೇಶ್ ಬಾಬು ಅವರು ಇಂದು ವಾಟ್ಸಪ್ ಗ್ರೂಪ್ ಗಳಲ್ಲಿ ಒಂದು ಮಾಹಿತಿ ಹಾಕಿದ್ದಾರೆ ನನ್ನ ಫೋಟೋ ಮೊರ್ಪ್ ಮಾಡಿದ್ದಾರೆ ದುಡ್ಡು ಕೇಳುತ್ತಿದ್ದಾರೆ ಯಾರು ಹಾಕಬೇಡಿ ಇದೊಂದು ಫೇಕ್ ಸಂದೇಶ ಅಂತ ಹಾಗಾದ್ರೆ ಇದ್ದರೇಲ್ಲೇನು ಆಶ್ಚರ್ಯ ಅಂತೀರಾ? ನಿಜವಾಗ್ಲೂ ಆಶ್ಚರ್ಯವಿದೆ ಹಾಗಾಗಿ ನಾವು ನಿಮ್ಮ ಮುಂದೆ ಮಾಹಿತಿ ತೆರದಿಡುತ್ತಿದ್ದವೇ ವಾಸ್ತವದಲ್ಲಿ ಯಾವದೇ ಮೆಡಿಕಲ್ ಶಾಪ್ ಹಾಗೂ ಮೆಡಿಕಲ್ ಏಜನ್ಸಿ ಬಳಿ ಸಾರ್ವಜನಿಕರು ಅಧಿಕಾರಿಗಳು ಯಾರೇ ಆದರೂ ಸರಿ ವಿಚಾರಿಸಿ ನಿಮಗೆ ನಾವು ಹೇಳುತ್ತಿರುವ ಸತ್ಯ ತಿಳಿಯಲಿದೆ. ವಿರೇಶ್ ಬಾಬು ಹಾಗೂ ಮತ್ತೊಬ್ಬ ಅಧಿಕಾರಿ ಯಾರೇ ಆಗಿದ್ದರು ಸಹ ಅವಧಿ ಮೀರಿದ ಮೆಡಿಸಿನ್ ಆಗಿರಬಹುದು, ಹೊಸ ಮೆಡಿಕಲ್ ಶಾಪ್ ಗೆ ಹೊಸ ಲೈಸನ್ಸ್ ಯಾವದೇ ಆದರೂ ಸಹ ಪರ್ಮಿಷನ್ ನೀಡಲು ತಮ್ಮ ಅಧಿಕಾರದ ಪ್ರಭಾವ ಬಳಸಿ ಆದ್ಯತೆ ನೀಡುತ್ತಿದ್ದಾರೆ.

ಪ್ರತಿ 6 ತಿಂಗಳಿಗೊಮ್ಮೆ ಮೆಡಿಕಲ್ ಶಾಪ್ ಮತ್ತು ಲೈಸನ್ಸ್ ಸಂಬಂಧ ಭೇಟಿ ನೀಡುವ ಅಧಿಕಾರಿಗಳು ನಿಜವಾಗ್ಲೂ ಪರಿಶೀಲನೆ ಮಾಡುತ್ತಾರೆ ಎಂದು ಭಾವಿಸುತ್ತಿರ? ಎಲ್ಲದು ಸುಳ್ಳು ಮೆಡಿಕಲ್ ಶಾಪ್ ಹಾಗೂ ಮೆಡಿಕಲ್ ಏಜನ್ಸಿ ಅವರಿಗೆ ಜೀವ ಹಿಂಡುವ ಮೂಲಕ ದುಡ್ಡು ಪೀಕುತ್ತಾರೆ ಎಲ್ಲದು ಸರಿಯಾಗಿದೆ ಎಂದು ಬರೆದುಕೊಂಡು ಹೋಗಲು ಇದು ನಾವು ಹೇಳುತ್ತಿರುವುದು ಅಲ್ಲ ಸ್ವಾಮಿ ನೀವೇ ಖುದ್ದಾಗಿ ಪರಿಶೀಲನೆ ಮಾಡಿ ಜೀವ ಹಾನಿ ಬಗ್ಗೆ ಕಾಳಜಿ ಇಲ್ಲ ದುಡ್ಡು ದುಡ್ಡು ದುಡ್ಡು ಅಷ್ಟೇ ಹೇಗಾದ್ರು ಇರಲಿ ಒಟ್ಟಿನಲ್ಲಿ ನಮಗೆ ದುಡ್ಡು ಬಂದರೆ ಸಾಕು ಇದನ್ನು ಮೆಡಿಕಲ್ ಶಾಪ್ ಹಾಗೂ ಮೆಡಿಕಲ್ ಏಜನ್ಸಿ ಬಳಿ ನೀವೇ ತಿಳಿದುಕೊಳ್ಳಿ.

ಇನ್ನು ಹೊಸ ಮೆಡಿಕಲ್ ಶಾಪ್ ಲೈಸನ್ಸ್ ಸಂಬಂಧ ಕೆಲವು ತಿಂಗಳ ಹಿಂದೆ ಯಾರೋ ಒಬ್ಬ ಅಮಾಯಕ ಬೆದರಿಕೆ ಪತ್ರವನ್ನು ಸಹ ಬರೆದು ವಿರೇಶ್ ಬಾಬು ಅವರ ಟೇಬಲ್ ಮೇಲ್ ಇಟ್ಟು ಹೋಗಿದ್ದಾರೆ, ಈ ಸಂಬಂಧ ವಿರೇಶ್ ಬಾಬು ಹೋಯ್ಯೋ ನನ್ನ ಜೀವನೇ ಹೋಯಿತು ಎನ್ನುವ ಲೆಕ್ಕಕ್ಕೆ ಪೊಲೀಸ್ ಕಂಪ್ಲೇಂಟ್ ಸಹ ದಾಖಲಿಸಿದ್ದರು ಆದರೆ ಅದಾದ ನಂತರ ಇಲ್ಲಿಯವರೆಗೆ ಸಹ ಅದರ ಬಗ್ಗೆ ಸುದ್ದಿನೇ ಇಲ್ಲ ತಾವೊಬ್ಬ ಪ್ರಾಮಾಣಿಕ ಅಧಿಕಾರಿ ಎಂದಮೇಲೆ ಹೋರಾಟ ಮಾಡಬೇಕಿತ್ತು ಅಲ್ಲವೇ?

ಅದೇನೋ ಆಯಿತು ಸರಿ ಈಗ ಯಾರೋ ನನ್ನ ಫೋಟೋ ವಿಡಿಯೋ ಮೊರ್ಫ್ ಮಾಡಿದ್ದಾರೆ ಅಂತ ಗ್ರೂಪ್ ಗಳಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ! ತಾವೊಬ್ಬ ಅಧಿಕಾರಿಯಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರೋ ಏನೋ ಮಾಡಿದರೆ ನಿಮಗೆ ಭಯವೆನುಕೆ ವಿರೇಶ್ ಬಾಬು ಅವರೇ?

ನೀವು ಮಾತು ಆಡಿದರೆ ಸಾಕು ಮುತ್ತಿನಂತ ಮಾತು ಉದಿರಿಸುವ ನೀವು ಈಗ ಯಾಕೆ ಇಷ್ಟೆಲ್ಲಾ ಟಾರ್ಗೆಟ್ ಆಗುತ್ತಿದೆ, ತಾವೊಬ್ಬ ಮೆಡಿಕಲ್ ಡಿಪಾರ್ಟ್ಮೆಂಟ್ ನಲ್ಲಿ ಎಡಿಸಿ ಅಂತ ಜಿಲ್ಲೆಯಲ್ಲಿ ಹುದ್ದೆ ಅಲಂಕರಿಸಿರುವಾಗ ಹಿಗ್ಯಾಕೆ ಭಯ ಬೀಳುತ್ತಿದ್ದಾರೆ? ಕಾನೂನು ರೀತಿಯ ಹೋರಾಟ ಮಾಡಬಹುದು ಅಲ್ಲವೇ?

ಕೆಲವು ತಿಂಗಳ ಹಿಂದೆ ಇದೆ ಎಡಿಸಿ ವಿರೇಶ್ ಬಾಬು ವರ್ಗಾವಣೆ ಆಗಿತ್ತು ಆದರೂ ಸಹ ಮತ್ತು ಪ್ರಭಾವಿಗಳ ಕೃಪಾಕಟಾಕ್ಷದಿಂದ ಮತ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಬಂದು ಲೂಟಿ ಹೊಡೆಯುತ್ತಿದ್ದಾರೆ ಹಾಗಾಗಿ ಬೇಸತ್ತವರು ಕತ್ತಿ ಮಸೀಯುತ್ತಿದ್ದಾರೆ ಹಾಗೆಯೇ ಈ ವಿರೇಶ್ ಬಾಬು ಯಾವದೇ ಕಾರಣಕ್ಕೂ ಬ್ಯಾಂಕ್ ಅಥವಾ ಫೋನ್ ಪೇ ಮತ್ತಿತರೇ ಡಿಜಿಟಲ್ ಪೇಮೆಂಟ್ ಸ್ವೀಕಾರ ಮಾಡಲ್ಲ ಜೊತೆಗೆ ಕ್ಯಾಶ್ ಮೂಲಕ Envalope ಮುಖಾಂತರವೇ ಹಣದ ವ್ಯವಹಾರ ಮಾಡುತ್ತಾರೆ ಎಂಬುದು ನಮ್ಮ ಮಾಧ್ಯಮಕ್ಕೆ ಸಿಕ್ಕಿರುವ ಮಾಹಿತಿಯಾಗಿದೆ.

ಈ ಸಂಬಂಧ ವಿರೇಶ್ ಬಾಬು ಅವರೇ ನಮ್ಮ ಮಾಧ್ಯಮಕ್ಕೆ ಸಂಪರ್ಕ ಮಾಡುವ ಮೂಲಕ ನೂರೆಂಟು ಸಮರ್ಥನೆ ನೀಡಿದ್ದಾರೆ ನಾವು ಕರೆ ಮಾಡದೆಯೇ ಅಧಿಕಾರಿ ಕರೆ ಮಾಡುವ ಮೂಲಕ ನಮ್ಮ ಜೊತೆಗೆ ವಾಗ್ಯುದ್ಧ ಮಾಡಿರುವುದು ನಿಜಕ್ಕೂ ಅನುಮಾನ ಮೂಡಿದೆ.

ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಏನೆಲ್ಲಾ ಒಳ್ಳೆಯ ಕೆಲಸ ಮಾಡುವ ಮೂಲಕ ಅನುಕೂಲ ಮಾಡಿಕೊಡಬೇಕಾಗಿತ್ತು ಅದರ ತದ್ವಿರುದ್ದವಾಗಿ ಅಧಿಕಾರದ ದರ್ಪ ಹಾಗೂ ತಮಗೆ ರಾಜಕೀಯ ಬೆಂಬಲವಿದೆ, ನಾನು ಏನಾದ್ರು ಮಾಡುತ್ತೇನೆ ಜಯಸುತ್ತೇನೆ ಎಂಬ ನಿಮ್ಮ ಸಂದೇಶ ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತೆ ಆಗಿದೆ.

ನೀವು ನಮ್ಮನ್ನ ಗ್ರೂಪ್ ಯಿಂದ ರಿಮೋವ್ ಮಾಡಿದ ತಕ್ಷಣ ನೀವೊಬ್ಬ ಪ್ರಾಮಾಣಿಕ ಅಧಿಕಾರಿ ಅಗುವುದಿಲ್ಲ ನಿಮ್ಮ ಕರ್ತವ್ಯದಿಂದ ಆಗುತ್ತೀರಾ! ನಿಮ್ಮ ಅಧಿಕಾರ ದರ್ಪ ನಡೆಯುವುದಿಲ್ಲ ಅಸಹಾಯಕರ ನೋವು ಶಾಪ ನಿಮ್ಮನ್ನ ತಟ್ಟದೇ ಬಿಡುವುದಿಲ್ಲ, ನೀವು ಗ್ರೂಪ್ ಯಿಂದ ರಿಮೋವ್ ಮಾಡಿದ ಮಾತ್ರಕ್ಕೆ ಮಾಧ್ಯಮವಾಗಿ ನಮಗೆ ಪ್ರಚಾರ ಮಾಡಲು ಅವಕಾಶವಿಲ್ಲವೇ? ನೀವು ಯಾವದೋ ಒಂದು ಗ್ರೂಪ್ಯಿಂದ ರಿಮೋವ್ ಮಾಡಿದ ಮಾತ್ರಕ್ಕೆ ನಿಮ್ಮ ಅಧಿಕಾರ ಸೀಮಿತವಾಯಿತ ವಿಪರ್ಯಾಸವೆ ಸರಿ! ತಾವೊಬ್ಬ ಅಧಿಕಾರಿಯಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸತ್ಯವೇ ಆಗಿದ್ದಲ್ಲಿ ಗ್ರೂಪ್ ಯಿಂದ ಯಾಕೆ ರಿಮೋವ್ ಮಾಡಿದಿರಿ?

ಜಿಲ್ಲೆಯಲ್ಲಿ ಸಾಕಷ್ಟು ಮೆಡಿಕಲ್ ಶಾಪ್ ವ್ಯಾಪಾರಿಗಳು ಮೆಡಿಕಲ್ ಏಜನ್ಸಿ ಅವರು ನಿಮ್ಮಂತ ಅಧಿಕಾರಿಗಳ ವಿರುದ್ದ ಶಾಪ ಹಾಕುತ್ತಿದ್ದಾರೆ ಹೊಟ್ಟೆ ಬಟ್ಟೆ ಕಟ್ಟಿ ವ್ಯಾಪಾರ ಮಾಡುತ್ತಿರುವಾಗ ನಿಮ್ಮಂತವರ ಸುಲಿಗೆಗೆ ಅಸಹಾಯಕರಾಗಿದ್ದಾರೆ ಮರೆಯಬೇಡಿ.

ಮುಂದಿನ ದಿನಗಳಲ್ಲಿ ಈ ಎಡಿಸಿ(Assistant Drug Controller) ವಿರೇಶ್ ಬಾಬು ಕುರಿತಾದ ಮತ್ತಷ್ಟು ವಿಷಯಗಳನ್ನು ನಾವು ನಿಮ್ಮ ಮುಂದೆ ತೆರಡಿದಲಿದ್ದೇವೆ ನಿರೀಕ್ಷಿಸಿ!

Author