ಶಿವಮೊಗ್ಗ | ಅಲ್ಲಮಪ್ರಭು‌ ಮೈದಾನದಲ್ಲಿ‌ ಫಲ-ಪುಷ್ಪ ಪ್ರದರ್ಶನ ಮೇಳ, ಸ್ವಸಹಾಯ ಗುಂಪಿನ ಉತ್ಪನ್ನಗಳ ಪ್ರದರ್ಶನ, ಕೈಮಗ್ಗ ವಸ್ತು ಮತ್ತು ಸಿರಿಧಾನ್ಯ ಮೇಳ

ಶಿವಮೊಗ್ಗ

ಶಿವಮೊಗ್ಗ,ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಜಿಲ್ಲಾ ಪಂಚಾಯತ್, ಶಿವಮೊಗ ಇವರ ಸಂಯುಕ್ತ ಆಶ್ರಯದಲ್ಲಿ ಮಲೆನಾಡು ಕರಕುಶಲ ಉತ್ಸವಸಿರಿಧಾನ್ಯ ಮೇಳ ಪುಷ್ಪ ಸಿರಿ – 63 ನೇ ಫಲ-ಪುಷ್ಪ ಪ್ರದರ್ಶನ ಹಾಗೂ ಪ್ರತೀ ವರ್ಷದಂತೆ ಬಾರಿಯ ಫಲ-ಪುಷ್ಪ ಪ್ರದರ್ಶನವನ್ನು ಜ. 24ರಿಂದ 27ರವರೆಗೆ ಅಲ್ಲಮಪ್ರಭು‌ ಮೈದಾನದಲ್ಲಿ‌ ಹಮ್ಮಿಕೊಳ್ಳಲಾಗಿದೆ.

ಹೂವಿನ ಕಲಾಕೃತಿಗಳ ರಚನೆ (ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣದ ಹೂಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯಂ ಹಾಗೂ ಕಾಮಿನಿ ಎಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಲಾಗುವುದು 1. ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕ ಪ್ರತಿಮೆ – 16 ಅಡಿ ಎತ್ತರದ ಕೋಟೆ ಹಾಗೂ ಶಿವಪ್ಪ ನಾಯಕ ಪ್ರತಿಮೆಗೆ ವಿವಿಧ ಜಾತಿಯ ಹೂವಿನ ಅಲಂಕಾರ, 2. ಬಳ್ಳಿಗಾವಿ ಕೇದಾರೇಶ್ವರದೇವಸ್ಥಾನ – 15 ಅಡಿ ಎತ್ತರದ ದೇವಸ್ಥಾನಕ್ಕೆ ಹೂವಿನ ಅಲಂಕಾರ,3. ಜೋಗ ಜಲಪಾತ – ಹೂ ಹಾಗೂ ಫೋಲಿಯೇಜ್ ನಿಂದ ಅಲಂಕೃತಗೊಂಡ 60 ಅಡಿ ಅಗಲ X22 ಅಡಿ ಎತ್ತರದ ಜೋಗ ಜಲಪಾತ, ಬೊನ್ಸಾಯ್ ಗಿಡಗಳು ಈ ವರ್ಷದ ವಿಶೇಷ ಆಕರ್ಷಣೆ ಗಳಾಗಿವೆ.

ವೈಶಿಷ್ಟ್ಯತೆಗಳು

ಶಿವಮೊಗ್ಗದ ಈ ಮೇಳದ ಮಳಿಗೆಗಳಲ್ಲಿ ರಾಜ್ಯ /ಹೊರ ರಾಜ್ಯ ವಿವಿಧ ಜಿಲ್ಲೆಯ ಗ್ರಾಮೀಣ ಪ್ರದೇಶದ ಸ್ಮ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣಿನ ಅಲಂಕಾರಿಕ ಉತ್ಪನ್ನಗಳು, ಮಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ ಮತ್ತು ಬತ್ತದ ತೋರಣ, ಈಚಲು ಚಾಪೆ, ಮಣ್ಣಿನ ಅಭರಣಗಳು, ಮರದ ಕೆತ್ತನೆಗಳು, ಸೌದಿ ಉತ್ಪನ್ನಗಳು, ಕೊಪ್ಪಳದ ಕಿನ್ನಾಳ ಉತ್ಪನ್ನಗಳು, ಕೊಪ್ಪಳದ ಬನಾನ ಪೈಬರ್ ಉತ್ಪನ್ನಗಳು, ಚಿಕ್ಕಬಳ್ಳಾಪುರ ಲೇದ‌ ಉತ್ಪನ್ನಗಳು, ನವಲಗುಂದ ದುರಿ, ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು ಹಾಗೂ ಬೀದರ್ ಜಿಲ್ಲೆಯ ಬಿದರಿ ಉತ್ಪನ್ನಗಳು ಹಾಗೂ ಅಕ್ಕ ಕೆಫೆಯ ಸದಸ್ಯರಿಂದ ಇತರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ.

ಸಿರಿಧಾನ್ಯ ಮೇಳ

ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಉದ್ದೇಶಗಳೊಂದಿಗೆ ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗಿದೆ.

Author