ದಾವಣಗೆರೆ, ಜಿಲ್ಲೆಯ ಹರಿಹರ ತಾಲೂಕಿನ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಜಾತಿ ನಿಂದನೆ ಕೇಸ್ ವಿಚಾರ ಕುರಿತು ಇಂದು ದಾವಣಗೆರೆಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಶಾಸಕ ಬಿ.ಪಿ.ಹರೀಶ್ ನನ್ನ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ.ಕಾನೂನಿಗೆ ಗೌರವ ಕೊಡಬೇಕೆಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲವೆಂದರು.ನನ್ನ ವಿರುದ್ಧ ದೂರು ಸಲ್ಲಿಸಿದ ವ್ಯಕ್ತಿ ಸ್ಥಳದಲ್ಲೇ ಇರಲಿಲ್ಲ,ನಾನು ಅದನ್ನ ಸಾಬೀತು ಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಆ ವ್ಯಕ್ತಿ ಸೃಷ್ಟಿಯಾಗಿದ್ದಾನೆ ಎಂದು ಆರೋಪಿಸಿದರು.ಕಾಡಜ್ಜಿ ಬಳಿಯ ಕೃಷಿ ಇಲಾಖೆ ಸೇರಿದ ಜಮೀನಿನ ಮಣ್ಣು ಅಕ್ರಮವಾಗಿ ಸಾಗಾಟ ಮಾಡಲಾಗಿದೆ,ಅಕ್ರಮ ಮಣ್ಣು ಸಾಗಾಟ ಬಗ್ಗೆ ನನಗೆ ಫೋನ್ನಲ್ಲಿ ಮಾಹಿತಿ ಬಂತು ಆಗ ಗ್ರಾಮೀಣ ಠಾಣೆ ಪೊಲೀಸರಿಗೆ ಫೋನ್ ಮಾಡಿ ನಾಗರಕಟ್ಟೆಗೆ ಬರಲು ಹೇಳಿದ್ದೆ.ಕಾಡಜ್ಜಿ ಅಂದ್ರೆ ಯಾರಾದರೂ ಮಾಹಿತಿ ನೀಡ್ತಾರೆ ಅಂತಾ ಬೇರೆ ಸ್ಥಳ ಹೇಳಿದ್ದೆ,ನಾನು ಹೋದ ಸಂದರ್ಭದಲ್ಲಿ ಹಿಟಾಚಿಯೋ, ಜೆಸಿಬಿಯೋ ಹೊರಗೆ ತರೋ ಪ್ರಯತ್ನ ನಡೀತಿತ್ತುಆಗ ಸಚಿವರು ತಮ್ಮ ಹಿಂಬಾಲಕರನ್ನು ಅಲ್ಲಿ ಕಳಿಸಿ ಗಲಾಟೆ ಮಾಡಿಸಿದ್ರು,ಅಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದವರ ಮೇಲೆ ಕೇಸ್ ಹಾಕಿಲ್ಲ.ಮಣ್ಣು ಸಾಗಿಸುತ್ತಿದ್ದ ವಾಹನಗಳ ನಂಬರ್ ಇದೆ ಎಂದು ತಿಳಿಸಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಎಂಬಿಎ ಕಾಲೇಜು, ಬಾಪೂಜಿ ಇಂಜಿನಿಯರಿಂಗ್ ಕಾಲೇಜುಆನೆಕೊಂಡ ಬಳಿಯ ಜಾಗ ಸಮ ಮಾಡಲು ಮಣ್ಣು ಸಾಗಿಸಿದ್ದಾರೆ ಎಂದು ಆರೋಪಿಸಿದರು.
ನಾಳೆ ಬೆಳಗ್ಗೆ 10.30ಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆಗೆ ಮೆರವಣಿಗೆ ಮೂಲಕ ತೆರಳುತ್ತೇವೆ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕೋಕೆ ನಿಮ್ಮ ಬಳಿ ಏನ್ ದಾಖಲೆ ಇದೆ? ಎಂದು ಪ್ರಶ್ನಿಸಿದರು.ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಡೆಯವರು ಮಣ್ಣು ಹೊಡೆದಿದ್ದಾರೆಂದು ದಾಖಲೆ ಕೊಡ್ತೀವಿ ಎಂದರು.ಮಲ್ಲಿಕಾರ್ಜುನ ಅವರ ಎಂಬಿಎ ಕಾಲೇಜಿಗೆ ಮಣ್ಣು ಸಾಗಿಸಲಾಗಿದೆಬಾಪೂಜಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಣ್ಣು ಹಾಕಿದ್ದಾರೆ.ಶಾಮನೂರು ಶಿವಶಂಕರಪ್ಪರವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದ ಸ್ಥಳಕ್ಕೆ ಮಣ್ಣು ಒಯ್ದಿದ್ದಾರೆ.ಮಲ್ಲಿಕಾರ್ಜುನ ಅವರ ರೈಸ್ ಮಿಲ್ ಹಿಂಭಾಗದ ಜಾಗಕ್ಕೆ ಮಣ್ಣು ಸಾಗಿಸಿದ್ದಾರೆ.ಅಲ್ಲಿಯ ಜಮೀನು ಸಮ ಮಾಡಿ ಲೇಔಟ್ ತರಹ ಕಾಣಿಸಲಿ ಎಂದು ಮಣ್ಣು ಸಾಗಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ನಾವು ಕೊಡ್ತೀವಿ ಎಂದಿದ್ದಾರೆ.
ದಲಿತರ ಉದ್ಧಾರಕ್ಕಾಗಿ ಮಾಡಿದ ಕಾನೂನು ನಾವು ದುರುಪಯೋಗ ಮಾಡಿಕೊಳ್ಳಲ್ಲವೆಂದು ತಿಳಿಸಿದರು.ಮಲ್ಲಿಕಾರ್ಜುನ್ ನಿಮ್ಮ ತಂದೆಗೂ ನಮ್ಮ ತಂದೆಯ ಎದುರಿಸೋಕೆ ಆಗಿಲ್ಲ ಎಂದು ಗುಡುಗಿದರು.1978ರಲ್ಲಿ ತಮ್ಮ ಆತ್ಮೀಯ ಸ್ನೇಹಿತ ಬಸನಗೌಡ ಸೋಲಿಸಲು ಪ್ರಯತ್ನಿಸಿದ್ರುದೈವ ನಮ್ಮ ಕಡೆ ಇತ್ತು ನಮ್ಮ ತಂದೆ ಅವತ್ತು ಗೆಲುವು ಸಾಧಿಸಿದ್ರು ಎಂದರು.ನಿನ್ನ ಪುಣ್ಯ ಚೆನ್ನಾಗಿತ್ತು, ಪಾಪಿ ಚಿರಾಯು ಅಂತಾ ನೀನು ಬದುಕಿದಿಯಾ ಎಂದರು.ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆbನಮ್ಮ ತಂದೆಯ ಸೋಲಿಸಲು ನಿಮ್ಮ ತಂದೆ ಮಾಡಿದ ಪ್ರಯತ್ನ ನನ್ನ ಮನಸ್ಸಿಂದ ದೂರ ಹೋಗಲ್ಲ ಎಂದರು.ನಮ್ಮ ತಂದೆ ಬದುಕಿರೋವರೆಗೂ ನಿಮ್ಮ ತಂದೆಗೆ ಅವರನ್ನು ಸೋಲಿಸಲಾಗಲಿಲ್ಲ ಎಂದರು.ನಾನು ಬದುಕಿರೋವರೆಗೂ ನನ್ನ ಸೋಲಿಸಲು ನಿಮ್ಮ ಮನೆತನದವರಿಗೆ ಆಗಲ್ಲವೆಂದರು.
ನಾವು ಹೋರಾಟ ಮಾಡ್ತಿರೋದು ನ್ಯಾಯದ ಪರವಾಗಿ, ಬಡವರ ಪರವಾಗಿ ಅಕ್ಕಿ ಸಕ್ಕರೆ ಕಳ್ಳತನದಿಂದ ಸಾಗಿಸಿದ್ರೆ ಅದು ನಿಮ್ಮ ಮನೆತನ ಎಂದು ಆರೋಪಿಸಿದರು.ಶ್ರಮಿಕ ವರ್ಗ ಸಂಘಟನೆ ಮಾಡಿದ್ದು ನಮ್ಮ ತಂದೆ ಪಿ.ಬಸನಗೌಡರು1978ರ ಡಿಸೆಂಬರ್ 31ರಂದು ನಮ್ಮ ತಂದೆ ಮೃತಪಟ್ಟಾಗ ಇಡೀ ದಾವಣಗೆರೆ ಬಂದ್ ಆಗಿತ್ತು.ಇದು ನಮ್ಮ ಮನೆತನದ ಶಕ್ತಿ ಎಂದರು.
ಅದೇ ಶಾಮನೂರು ಶಿವಶಂಕರಪ್ಪ ಮೃತಪಟ್ಟಾಗ ಯಾವ ರೀತಿ ಇತ್ತು?1978ರಲ್ಲಿ ಇದ್ದವರನ್ನು ಕೇಳಿದರೆ ನಿಮಗೆ ಗೊತ್ತಾಗುತ್ತದೆ ನಿನಗೆ ಇನ್ನು ಎಷ್ಟು ಆಸ್ತಿ ಬೇಕು ಎಷ್ಟು ಕಳ್ಳತನ ಮಾಡ್ತೀಯಾ ಎಂದು ಪ್ರಶ್ನಿಸಿದರು.ಒಂದೊಂದೇ ಗಣಿ ಇಲಾಖೆಯ ಹಗರಣ ಹೊರ ಬರ್ತಿವೆಎಸಿಸಿ ಸಿಮೆಂಟ್ ಕಂಪನಿ ಜೊತೆಗಿನ ಅವ್ಯವಹಾರ ಹೊರ ಬಂದಿದೆ ಎಂದರು.
ನಮ್ಮ ಸರ್ಕಾರಿ ಪಿಎ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡಿದ್ರುನನ್ನ ಮಗ ಬಂದೇ ಇಲ್ಲ ನನ್ನ ಮಗನ ಮೇಲೆ ಕೇಸ್ ಹಾಕಿಸಿದ್ದಾರೆ.ಈಗಾಗಲೇ ನಮ್ಮ ಪಕ್ಷದ ರಾಜ್ಯ ನಾಯಕರು ಸೂಚನೆ ಕೊಟ್ಟಿದ್ದಾರೆ,ಈ ಹಿಂದೆ ಹಲವು ಅಕ್ರಮಗಳ ಬಗ್ಗೆ ಸಿಎಸ್ಗೆ ದೂರು ನೀಡಿದ್ವಿ ಎಲ್ಲವನ್ನೂ ತೆಗೆದುಕೊಂಡು ಬರಲು ಪಕ್ಷದ ನಾಯಕರು ಹೇಳಿದ್ದಾರೆ ಎಂದರು.
ಚೀಫ್ ಸೆಕ್ರೆಟರಿ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡ್ತೀವಿ ಎಂದು ಶಾಸಕ ಬಿ.ಪಿ.ಹರೀಶ್ ತಿಳಿಸಿದ್ದಾರೆ.



