ಶಿವಮೊಗ್ಗ, ರಾಷ್ಟ್ರೀಯ ಶಿಕ್ಷಣ ಸಮಿತಿಯ ಹಿರಿಯ ಆಜೀವ ಸದಸ್ಯರಾದ ಡಿ.ಎಚ್.ಗೋವಿಂದರಾಜು (97) ಶನಿವಾರ ಜೈಲು ರಸ್ತೆಯ ಸ್ವಗೃಹದಲ್ಲಿ ನಿಧನರಾದರು. ಪತ್ನಿ, ಮೂವರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶನಿವಾರ ಸಂಜೆ ಸಿಮ್ಸ್ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಗೋವಿಂದರಾಜು ಅವರ ನಿಧನಕ್ಕೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರ ವೃಂದ ಸಂತಾಪವನ್ನು ಸೂಚಿಸಿದೆ.



