777ಚಾರ್ಲಿ ನೆನಪಿಸಿದ ಬ್ರೌನಿ!

ರಾಜ್ಯ

ಶಿವಮೊಗ್ಗ, 777 ಚಾರ್ಲಿ ನೆನಪಿಸಿದ ಬ್ರೌನಿ ಹೌದು ಬ್ರೌನಿ ಬಗ್ಗೆಯೆ ಈಗ ನಾವು ನಿಮಗೆ ತಿಳಿಸುತ್ತಿರುವುದರಲ್ಲಿ ಸಾಕಷ್ಟು ವಿಶೇಷತೆಗಳು ಇದೆ.ಬ್ರೌನಿ ಎಂಬ ಪ್ರೀತಿಯ ಹೆಣ್ಣು ನಾಯಿಯನ್ನು ಒಂದು ಮನೆಯಲ್ಲಿ ಸಾಕಿ ಪೋಶಿಸುತ್ತಿದ್ದಾರೆ. ಬ್ರೌನಿ ಕೂಡ ಅಷ್ಟೇ ಅಚ್ಚುಕಟ್ಟಾಗಿ ಸ್ಪಂದಿಸುತ್ತಾಳೆ ತುಂಬಾ ಸೂಕ್ಷ್ಮ ಹಾಗೂ ಬುದ್ದಿವಂತೆ ಸಹ ಹೌದು,ಬ್ರೌನಿ ಯನ್ನ ಚಿಕ್ಕಮಗಳೂರಿನಿಂದ ತಂದು ಮನೆಯವರು ಸಾಕಿದ್ದಾರೆ.

ಬ್ರೌನಿಗೆ ಈಗ 5 ವರ್ಷ. ಬ್ರೌನಿ ತುಂಬಾ ಸೂಕ್ಷ್ಮ ಹಾಗೂ ಬುದ್ದಿವಂತೆ ಸಹತನಗೆ ಹಸಿವಾದಾಗ ಪ್ಲೇಟ್ ನ ಕಟ ಕಟ ಅಂತ ಶಬ್ದ ಮಾಡುವ ಮೂಲಕ ನನಗೆ ಹಸಿವಾಗಿದೆ ಎಂದು ಸುಚಿಸುತ್ತಾಳೆ. ಹಾಗೂ ಆಚೆ ಹೋಗುವಾಗ ಸಹ ಬೆಲ್ಟ್ ತೆಗೆದುಕೊಂಡು ಬಂದು ನನಗೆ ಆಚೆ ಕರೆದುಕೊಂಡು ಹೋಗು ಎನ್ನುತ್ತಾಳೆ ವಾಕಿಂಗ್ ಮತ್ತಿತರೇ ಹೋಗಿ ಬರೋಣ ಅಂತಾಳೆ ತುಂಬಾ ಮುದ್ದಾಗಿ ಎಲ್ಲರೊಂದಿಗೆ ಬೆರೆಯುತ್ತಾಳೆ ಹಾಗೂ ಬ್ರೌನಿಯು ಮನೆಯವರ ಬಾಂಧವ್ಯದೊಳಗೆ ಬೇಸದುಹೋಗಿದ್ದಾಳೆ.

ಇನ್ನು ಇವರು ಕುಟುಂಬಕ್ಕು, ಬ್ರೌನಿ ಗೂ ಅವಿನಾಭವ ಸಂಬಂಧ ಅದು ಹೇಗೆ ಅಂತೀರಾ ಈ ಮನೆಯಲ್ಲಿ ಇದ್ದ ಅಜ್ಜಿ ಹನುಮಕ್ಕ ಎಂಬುವರಿಗೆ 9 ಮಕ್ಕಳಂತೆ ಅದರಂತೆ ಬ್ರೌನಿ ಗೂ 9 ಮಕ್ಕಳಂತೆ ಇನ್ನು ಇದರಲ್ಲಿ ವಿಶೇಷ ಏನು ಅಂತೀರಾ ಅದನ್ನು ತಿಳಿಸುತ್ತೇವೆ ನೋಡಿ ಈ ಮನೆಯ ಅಜ್ಜಿಗೂ 9 ಮಕ್ಕಳಲ್ಲಿ 6 ಗಂಡು ಮಕ್ಕಳು 3 ಹೆಣ್ಣುಮಕ್ಕಳು ಹಾಗೇಯೆ ಬ್ರೌನಿ ಗೂ ಸಹ 6 ಗಂಡು ಮರಿ ಹಾಗೂ 3 ಹೆಣ್ಣು ಮರಿ, ಈಗ ಪ್ರಸ್ತುತ ಬ್ರೌನಿ ಮರಿಗಳೆಲ್ಲ ಜಿಲ್ಲೆಯಾದ್ಯಾಂತ ಪ್ರಾಣಿ ಪ್ರಿಯರು ತೆಗೆದುಕೊಂಡು ಹೋಗಿ ಸಾಕುತ್ತಿದ್ದಾರೆ. ಹಾಗೆಯೇ ಅಜ್ಜಿಯ ಮನೆಯ ಮಕ್ಕಳು ಕೂಡ ಬೇರೆ ಬೇರೆ ಕಡೆ ವಾಸಿಸುತ್ತಿದ್ದಾರೆ.

ಒಟ್ಟಾರೆ ಶ್ವಾನ ಪ್ರಿಯರಿಗೆ ಇದು ಒಂದು ಸಂತಸದ ವಿಷಯವೇ ಸರಿ! ಹಾಗೂ ಬ್ರೌನಿ ಹೆಸರು ಮಾತ್ರ ಇಂಗ್ಲಿಷ್ ಆದರೆ ಬ್ರೌನಿ ಅಪ್ಪಟ ಕನ್ನಡತಿ ಕನ್ನಡದಲ್ಲಿ ಹೇಳುವುದನ್ನ ಬೇಗ ಗ್ರಹಿಸುತ್ತಾಳೆ. ಸೂಕ್ಷ್ಮವಾಗಿ ಸ್ಪಂದಿಸುತ್ತಾಳೆ.ಬ್ರೌನಿ ಗೆ ಇಂಗ್ಲಿಷ್ ಅಂದರೆ ಅಲೆರ್ಜಿ ಕನ್ನಡದಲ್ಲಿ ಹೇಳಿ ತಕ್ಷಣವೇ ಸ್ಪಂದಿಸುತ್ತಾಳೆ.

ಚಾರ್ಲಿ ಸಿನಿಮಾದ ಚಾರ್ಲಿಯಷ್ಟೇ ಭಾವನಾತ್ಮಕ ಜೀವಿ ಆಗಿದ್ದಾಳೆ.ಹೌದು ಯಾಕಪ್ಪ ಈಗ ಈ ವಿಶೇಷವಾಗಿ ಬ್ರೌನಿ ವಿಷಯ ತಿಳಿಸಿದ್ದು ಅಂದರೆ ನಾವು ಸುದ್ದಿ ಸಂಬಂಧ ಬಾಪೂಜಿ ನಗರ ತೆರಳಿದ್ದಾಗ ಬ್ರೌನಿ ವಾಕಿಂಗ್ ಗೆ ಬಂದಿದ್ದಳು ಹಾಗೆಯೇ ಮಾತನಾಡುತ್ತ ಇದ್ದಾಗ ಬ್ರೌನಿಯ ಕುತೂಹಲಕಾರಿ ವಿಶೇಷ ವಿಷಯ ತಿಳಿಯಿತು ಹಾಗೂ ಇದನ್ನು ನಿಮಗೆಲ್ಲರಿಗೂ ತಿಳಿಸಬೇಕು ಎನಿಸಿತು.

ಈ ಬ್ರೌನಿಯನ್ನ ಸಾಕಿರುವುದು ಯಾರು ಅಂತೀರಾ? ನಮ್ಮ ಶಿವಮೊಗ್ಗ ಜಿಲ್ಲೆಯ ಶಿಕ್ಷಣ ಸಚಿವರು ಮತ್ತು ಉಸ್ತುವಾರಿ ಸಚಿವರಾಗಿರುವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕರಾಗಿರುವ ಮಧು ಅವರೇ ಈ ಬ್ರೌನಿಯನ್ನು ಸಾಕಿ ಪೋಶಿಸುತ್ತಿರುವುದು.ಕುಟುಂಬ ಸಹ ಬ್ರೌನಿಯ ಸೂಚನೆಗಳನ್ನು ಗ್ರಹಿಸುತ್ತಾರೆ ಬ್ರೌನಿ ಸಹ ಕುಟುಂಬದ ಭಾಗವಾಗಿ ಬಿಟ್ಟಿದ್ದಾಳೆ. ಮನುಷ್ಯನಿಗೂ ಪ್ರಾಣಿಗಳಿಗೂ ಯಾವದಾದ್ರು ರೂಪದಲ್ಲಿ ಅವಿನಾವ ಭಾವ ಸಂಬಂಧ ಇದ್ದೆ ಇರತ್ತೆ ಅನ್ನುವುದಕ್ಕೆ ಬ್ರೌನಿಯ ಕಥೆ ಕೇಳಿ ನಮಗೂ ಹಾಗೆ ಅನಿಸಿತು.

ನಿಮಗೂ ಬ್ರೌನಿ ನೋಡುವ ಕುತೂಹಲವಿದಿಯೇ? ಹಾಗಾದರೆ ಶಿವಮೊಗ್ಗದ ಬಾಪೂಜಿ ನಗರದ ಟ್ಯಾಂಕ್ ಮೊಹಲ್ಲಾ 8 ನೇ ತಿರುವಿನಲ್ಲಿರು ಬ್ರೌನಿ ಮನೆಗೆ ನೀವು ಸಹ ಬಂದು ಅವಳನ್ನ ನೋಡಬಹುದಾಗಿದೆ!

Author