ಶಿವಮೊಗ್ಗ | ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನ ಬಂಧಿಸಿ ; ಪೌರ ಕಾರ್ಮಿಕರ ಆಕ್ರೋಶ

ಶಿವಮೊಗ್ಗ

ಶಿವಮೊಗ್ಗ,ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಈ ಕೆಳಕಂಡ ಮಾಹಿತಿ ತಿಳಿಸಿದ್ದಾರೆ

ಶ್ರೀಮತಿ ಅಮೃತಗೌಡ, ಪೌರಾಯುಕ್ತರು, ಶಿಡ್ಲಘಟ್ಟ ನಗರ ಸಭೆ ರವರಿಗೆ ರಾಜೀವ್ ಗೌಡ ಎಂಬ ವ್ಯಕ್ತಿಯು ದಿನಾಂಕ: 14-01-2026 ರಂದು ಕಾನೂನು ಬಾಹಿರವಾಗಿ ಅಳವಡಿಸಿದ ಫ್ಲೆಕ್ಸ್ ಅನ್ನು ತೆರವುಗೊಳಿಸಿರುವ ಮೇರೆಗೆ ಪೌರಯುಕ್ತರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಸರ್ಕಾರಿ ಕೆಲಸ ಮಾಡಲು ಅಡಚಣೆ ಉಂಟುಮಾಡಿರುವ ಮೇರೆಗೆ ಪೌರಾಯುಕ್ತರಾದ ಶ್ರೀಮತಿ ಅಮೃತಗೌಡ ರವರ ದೂರಿನ ಆಧಾರದ ಮೇರೆಗೆ ಶಿಡ್ಲಘಟ್ಟ ಪೋಲಿಸ್ ಠಾಣೆಯಲ್ಲಿ ರಾಜೀವ್‌ ಗೌಡ ರವರ ವಿರುದ್ಧ ಬಿ.ಎನ್.ಎಸ್. ಕಾಯ್ದೆ ಸೆಕ್ಷನ್ 79-ಮಹಿಳೆ ಘನತೆಗೆ ಧಕ್ಕೆ ತರುವಂತಹ ಘಟನೆ, 132-ಸರ್ಕಾರ ಕೆಲಸಕ್ಕೆ ಅಡ್ಡಿ, 352-ಶಾಂತಿ ಭಂಗಕ್ಕೆ ಪ್ರಚೋದನೆ ಮತ್ತು ಬೆದರಿಕೆ 194- ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು ಅಪರಾಧ, 54- ಗಲಭೆಗೆ ಕುಮ್ಮಕ್ಕು ನೀಡುವುದು, ಇದರಡಿಯಲ್ಲಿ ಎಫ್.ಐ.ಆ‌ರ್.ದಾಖಲಿಸಲಾಗಿರುತ್ತದೆ.

ರಾಜೀವ್ ಗೌಡ ಎಂಬ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದು ನಾಗರೀಕ ಸಮಾಜವು ತಲೆ ತಗ್ಗಿಸುವಂತೆ ಮಾಡಿದೆ. ಸರ್ಕಾರಿ ಅಧಿಕಾರಿಗಳಿಗೆ ಇಂಥ ಪರಿಸ್ಥಿತಿ ಬಂದೊದಗಿದರೆ ಸಾಮಾನ್ಯ ಸರ್ಕಾರಿ ನೌಕರರ ಸ್ಥಿತಿ ಏನು? ಎಂದು ಚಿಂತಿಸುವಂತಾಗಿದೆ.

ಇಂತಹ ಕೆಟ್ಟ ವ್ಯಕ್ತಿಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತಿದೆ. ಮಹಿಳೆಯರು ಪ್ರಾಮಾಣಿಕವಾಗಿ ಮತ್ತು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ.

ಆದ್ದರಿಂದ ರಾಜೀವ್ ಗೌಡ ಎಂಬ ವ್ಯಕ್ತಿಯ ವಿರುದ್ಧ ಎಫ್.ಐ.ಆ‌ರ್. ದಾಖಲಾಗಿರುವುದರಿಂದ ಕೂಡಲೇ ಸದರಿ ವ್ಯಕ್ತಿಯನ್ನು ಬಂಧಿಸಲು ಈ ಮೂಲಕ ಕೋರಲಾಗಿದೆ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ, ಸ್ಥಳೀಯ ಸಂಸ್ಥೆಗಳಲ್ಲಿ ಪ್ರೇಕ್ಸ್ ಹಾಕುವ ವಿಚಾರ ಹಾಗೂ ತೆರವುಗೊಳಿಸುವ ವಿಚಾರದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಪೌರಕಾರ್ಮಿಕರಿಂದ ಹಿಡಿದು ಆಯುಕ್ತರವರೆಗೂ ಸಹ ನಿಂದನೆಗಳು, ಬೆದರಿಕೆಗಳು, ಆವಾಚ್ಯ ಶಬ್ದಗಳಿಂದ ಸರ್ಕಾರಿ ಕೆಲಸ ಮಾಡುವಲ್ಲಿ ನೌಕರರಿಗೆ ಪದೇ ಪದೇ ಅವಮಾನ ಮಾಡಲಾಗುತ್ತಿದೆ.

ಇಂತ ಘಟನೆಗಳು ಮರುಕಳಿಸದಂತೆ ಕರ್ನಾಟಕ ರಾಜ್ಯಾದ್ಯಂತ ಪ್ರೇಕ್ಸ್ ಹಾಕುವುದನ್ನು ನಿಷೇದಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಆದ್ದರಿಂದ ಈ ತಕ್ಷಣವೇ ರಾಜೀವ್‌ಗೌಡ ಎಂಬ ವ್ಯಕ್ತಿಯನ್ನು ಬಂಧಿಸಲು ಈ ಮೂಲಕ ಮತ್ತೊಮ್ಮೆ ಕೋರಲಾಗಿದೆ ಹಾಗೂ ಶ್ರೀಮತಿ ಅಮೃತಗೌಡ, ಮಾನ್ಯ ಪೌರಾಯುಕ್ತರು ರವರಿಗೆ ಸೇವಾವಧಿಯುದ್ದಕ್ಕೂ ಸೂಕ್ತವಾದ ರಕ್ಷಣೆ/ಭದ್ರತೆ ನೀಡಬೇಕೇಂದು ಈ ಮೂಲಕ ಕೋರಲಾಗಿದೆ ಎಂದು ಸಂಘದ ಪರವಾಗಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Author