ಶಿವಮೊಗ್ಗ | ತಾಯಿಮಡಿಲು ಅನಾಥಾಶ್ರಮದಿಂದ ಬಡಜನರಿಗಾಗಿ ಉಚಿತ ಅಂಬ್ಯುಲೆನ್ಸ್ ಸೇವೆ

ಶಿವಮೊಗ್ಗ

ಶಿವಮೊಗ್ಗ, ನಗರದ ತಾಯಿಮಡಿಲು ಅನಾಥಾಶ್ರಮ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಗರದೊಳಗಿನ ಬಡಜನರಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುವುದು ಎಂದು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಸಯ್ಯದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ. ಬಡವರಿಗೆ ಮತ್ತು ಅನಾಥರಿಗೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದರಿಂದ ಎಷ್ಟೋ ಬಡವರು ಆಸ್ಪತ್ರೆಗಳಿಗೆ ತೆರಳಲು ಅನುವಾಗುತ್ತದೆ ಎಂದರಲ್ಲದೆ, ಇದರ ಸೇವೆ ಪಡೆಯಲಿಚ್ಛಿಸುವವರು ೯೧೬೪೨೬೮೪೮೮ ಅಥವಾ ೯೯೦೦೬೭೧೨೮೫ ಈ ನಂಬರ್‌ಗೆ ಸಂಪರ್ಕಿಸಬಹುದೆಂದರು.

ಮಣಿಪಾಲ್, ಮಂಗಳೂರು ಮತ್ತು ಬೆಂಗಳೂರಿಗೆ ರೋಗಿಗಳನ್ನು ಕರೆದೊಯ್ಯಲು ಅಥವಾ ಕರೆತರಲು ಸಹಾಯ ಪಡೆಯಬಹುದು. ಇಲ್ಲಿಯೂ ಸಹ ಅತಿ ಕಡಿಮೆ ದರದಲ್ಲಿ ಬಡಜನರಿಗೆ ನೆರವಾಗಲಾಗುತ್ತದೆ ಎಂದರು.

ಹಾಯ್‌ಹೊಳೆ ರಸ್ತೆಯಲ್ಲಿ ಹೊಸೂರ್ ಬಳಿ ಅನಾಥಾಶ್ರಮ ಕಟ್ಟಡ ಕಾಮಗಾರಿ ಜ. ೧9ರಿಂದ ಆರಂಭವಾಗಲಿದೆ. ಇಲ್ಲಿ ಅನಾಥಾಶ್ರಮ ತೆರೆಯಲಾಗುವುದು. ಎಲ್ಲ ವರ್ಗದ ಮತ್ತು ವಯೋಮಾನದ ಅನಾಥರಿಗೆ ಇಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ನಿರ್ದೇಶಕರಾದ ಶಹನ್ವಾಜ್, ಫೈರೋಜ್, ನೀಲಾ, ಪಲ್ಲವಿ ನಾಗರತ್ನಾ ಮೊದಲಾದವರಿದ್ದರು.

Author