ಶಿವಮೊಗ್ಗ, ಶಿಡ್ಲಘಟ್ಟದ ನಗರಸಭೆಯ ಪೌರಾಯುಕ್ತ ಅಮೃತ ಗೌಡ ಅವರ ಮೇಲೆ ಕಾಂಗ್ರೆಸ್ ನಾಯಕ ಅವಾಚ್ಯ ಫೋನ್ ಮೂಲಕ ನಿಂದಿಸಿರುವುದನ್ನು ಬಿಜೆಪಿ ರಾಜ್ಯ ಮಹಿಳಾ ಅಧ್ಯಕ್ಷೆ ಮಂಜುಳಾ ಖಂಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮುಂದುವರೆದ ಗೂಂಡಾ ಸಂಸ್ಕೃತಿ ಸರ್ಕಾರಿ ನೌಕರರಿಗೆ ಒಂದು ರೀತಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಕಷ್ಟವಾಗಿದೆ ಎಂದು ತಿಳಿಸಿದರು.
ರಾಜ್ಯ ಮಹಿಳಾ ಆಯೋಗ ಅಧ್ಯಕ್ಷರು ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಶೀಟ್ಲಘಟ್ಟ ವಿಚಾರದಲ್ಲಿ ಕಾಂಗ್ರೆಸ್ ನಾಯಕನ ಮೇಲೆ FIR ಆದರೂ ಕೂಡ ಅವರನ್ನು ಬಂಧಿಸುವಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕನ ಬಂಧನ ಆಗದೆ ಇದ್ದರೆ ರಾಜ್ಯಾದ್ಯಂತ ತೀವ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.



