ರಾಜ್ಯ ಭೂ-ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ (ರಿ) ವತಿಯಿಂದ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಿತಿ ಮುಖಂಡರು ಈ ಕೆಳಕಂಡ ಮಾಹಿತಿ ತಿಳಿಸಿದರು.1954-55 ರಲ್ಲಿ ಪ್ರಾರಂಭವಾದ ಭೂ ವಿದ್ಯಾದಾನ ಚಳುವಳಿಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಿಗೆ ದಾನವಾಗಿ ಬಂದಂತಹ ಶಾಲಾ ಜಮೀನುಗಳನ್ನು ಕಲೆದ 70 ವರ್ಷಗಳ ಕಾಲ ರೈತರು ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ರವರ ಸರ್ಕಾರ ರೈತರಿಂದ ಈ ಶಾಲಾ ಜಮೀನುಗಳನ್ನ ಸರ್ಕಾರದ ವಶಕ್ಕೆ ಪಡೆಯಲು ಮುಂದಾಗಿರುವುದು ಅವೈಜ್ಞಾನಿಕ ಕ್ರಮಾವಾಗಿದ್ದು, ರಾಜ್ಯದಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಾರಿ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಭೂ ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ (ಅ)ಯು ರಾಜ್ಯ ಸರ್ಕಾರನ್ನ ಎಚ್ಚರಿಸಬಯಸುತ್ತದೆ ಎಂದು ಸಮಿತಿಯ ಕಲ್ಲೂರ್ ಮೇಘರಾಜ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಶಾಲಾ ಜಮೀನುಗಳ ಗೇಣಿದಾರರು, ರೈತ ಮುಖಂಡರು ಹಾಗೂ ಕಂದಾಯ, ಶಿಕ್ಷಣ ಹಾಗೂ ಕಾನೂನು ಅಧಿಕಾರಿಗಳ ಸಭೆ ಕರೆದು ಚರ್ಚಿಸದೆ ಶಾಲಾ ಜಮೀನುಗಳ ಬಗ್ಗೆ ವಿಶೇಷ ಕಾನೂನು ತರಲು ಹೊರಟಿರುವ ಅಂಸಭದ್ದ ಹಾಗೂ ಪರಿಪಕ್ವತೆ ಇಲ್ಲತೆ ನಿರ್ಧಾರವಾಗಿದ್ದು, ಈ ನಿರ್ಧಾರವನ್ನ ನಮ್ಮ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಪ್ರಾರಂಭಿಸಲಾದ ಭೂ-ವಿದ್ಯಾದಾನ ಚಳುವಳಿಯಲ್ಲಿ ಸರ್ಕಾರಿ ಶಾಲೆಗಳಿಗೆ ಉಪಯೋಗಕ್ಕೆ ಬರಲಿ ಎಂಬ ಉದೇಶದಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಜಮೀನುಗಳನ್ನ ಭೂದಾನಿಗಳು ವಿವಿಧ ಸರ್ಕಾರಿ ಶಾಲೆಗಳಿಗೆ ದಾನ ನೀಡಿದ್ದರು. ಶಾಲೆಯಿಂದ ಹಾಗೂ ಗ್ರಾಮದಿಂದ ಹತ್ತಿರವಿದ್ದ ದಾನವಾಗಿ ಬಂದಂತಹ ಶಾಲಾ ಜಮೀನುಗಳನ್ನ ಶಾಲಾಭಿವೃದ್ಧಿ ಸಮಿತಿಯವರು, ಗ್ರಾಮದ ಮುಖಂಡರು ಹಾಗೂ ಶಾಲಾ ಶಿಕ್ಷಕರು ಆಟದ ಮೈದಾನ, ಕಟ್ಟಡ ವಗೈರೆ ಉದ್ದೇಶಕ್ಕೆ ಬಳಸಿಕೊಂಡರು.
ಶಾಲೆಯಿಂದ ಹಾಗೂ ಗ್ರಾಮದಿಂದ ಬಹುದೂರವಿದ್ದ ದಾನ ನೀಡುವಾಗಲೇ ಬರಡಾಗಿದ್ದ ಜಮೀನುಗಳನ್ನ ಶಾಲಾ ಮುಖ್ಯಸ್ಥರು ಆ ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ದಾನ ನೀಡಿದಲಾಗಾಯ್ತು ಗೇಣಿ ಸಾಗುವಳಿಗೆ ನೀಡಿದ್ದರು. ಈ ಶಾಲಾ ಜಮೀನು ಗೇಣಿದಾರರಿಂದ ಅಲ್ಪ ಸ್ವಲ್ಪ ಗೇಣಿ ಬಾಬು ದವಸ ಧಾನ್ಯ ಇಲ್ಲವೆ ಹಣವನ್ನ ವಸೂಲು ಮಾಡುತ್ತಿದ್ದರು. ಹೀಗೆ ರಾಜ್ಯದಲ್ಲಿ ಜಾರಿಗೆ ಬಂದಂತಹ ಶಾಲಾ ಜಮೀನು ಗೇಣಿ ಪದ್ದತಿಯನ್ನ ಯಾವ ಸರ್ಕಾರಗಳು ರದ್ದುಪಡಿಸಿ ಶಾಲಾ ಜಮೀನು ಗೇಣಿದಾರರಿಗೆ ಭೂಒಡೆತನದ ಹಕ್ಕುಪತ್ರ ನೀಡದೇ ಅನ್ಯಾಯ ಮಾಡುತ್ತಾ ಬಂದಿವೆ. ಸಂವಿಧಾನ ಬಾಹಿರವಾಗಿ ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಎಂಬ ಸಮಾಜವಾದಿ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿ ಶಾಲಾ ಜಮೀನುಗಳಲ್ಲಿ ಈಗಲೂ ಗೇಣಿ ಪದ್ಧತಿ ಜೀವಂತವಾಗಿದೆ. ಈ ಎಲ್ಲಾ ಶಾಲಾ ಜಮೀನುಗಳ ಖಾತೆ ಅಂದರೆ ಕಚ್ಚೆ ದಾಖಲೆಗಳು ಈಗಲೂ ಭೂಸುಧಾರಣಾ ಕಾನೂನಿಗೆ ವ್ಯತಿರಿಕ್ತವಾಗಿ ರಾಜಪ್ರಮುಖರ ಹೆಸರಿನಲ್ಲಿ ದಾಖಲಾಗುತ್ತಿವೆ.
ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ನವರು ಉಳುವವನೇ ಹೊಲದೊಡೆಯ ಎಂಬ ಸಮಾಜವಾದಿ ಸಿದ್ಧಾಂತದಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದಲ್ಲಿ ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಅವರ ಪುತ್ರ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದಂತಹ ಮಧುಬಂಗಾರಪ್ಪ ನವರು ಕಳೆದ 6-7 ದಶಕಗಳಿಂದ ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಶಾಲಾ ಜಮೀನು ಗೇಣಿದಾರರನ್ನ ಒಕ್ಕಲೆವರಿ, ಶಾಲಾ ಜಮೀನುಗಳನ್ನು ರೈತರಿಂದ ಸರ್ಕಾರ ವಶಪಡಿಸಿಕೊಳ್ಳಲು ವಿಶೇಷ ಮಸೂದೆಯೊಂದನ್ನ ತರಲು ಮುಂದಾಗಿರುವುದು ವಿಪಾರ್ಯಾಸ ಸಂಗತಿ ಎಂದು ರಾಜ್ಯ ಭೂ-ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿಯ ಅಧ್ಯಕ್ಷ ಕಲ್ಲೂರು ಮೇಘರಾಜ ರವರು ಪತ್ರಿಕಾ ಘೋಷ್ಠಿಯಲ್ಲಿ ಕುಟುಕಿದರು.
ರಾಜ್ಯ ಸರ್ಕಾರ ಶಾಲಾ ಜಮೀನು ಗೇಣಿದಾರರನ್ನ ಒಕ್ಕಲೆಬ್ಬಿಸಲು ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಶೇಷ ಮಸೂದೆಯೊಂದನ್ನ ತರಲು ಹೊರಟಿರುವುದು ಶ್ರೀಮತಿ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಗಳಲ್ಲಿ ಒಂದಾದ ಭೂಸುಧಾರಣಾ ಕಾನೂನಿನ ಸಿದ್ಧಾಂತದ ಸ್ಪಷ್ಟ ಉಲ್ಲಂಘನೆಯಾಗಲಿದೆ.ಶ್ರೀ ಮಧುಬಂಗಾರಪ್ಪ ನವರ ಈ ಎಡಬಿಡಂಗಿ ನಿರ್ಧಾರಕ್ಕೆ ಸಮಾಜವಾದಿ ಹಿನ್ನೆಲೆಯ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ಹಾಗೂ ಕಾಂಗ್ರೆಸ್‌ನ ಕಟ್ಟಾಳು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದಂತಹ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ. ಶಿವಕುಮಾರ್ ರವರ ನೇತೃತ್ವದ ಸರ್ಕಾರ ಸೈ ಎಂದರೆ ರಾಜ್ಯದ ಶಾಲಾ ಜಮೀನು ಗೇಣಿದಾರರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠವನ್ನ ಕಲಿಸಬೇಕಾಗಿತು ಎಂದು ಸಮಿತಿಯು ಎಚ್ಚರಿಸಿದೆ.
ಅಲ್ಲದೆ ಶಿಕ್ಷಣ ಸಚಿವ ಮಧುಬಂಗಾರಪ್ಪ ನವರ ವಿರುದ್ಧ ರಾಜ್ಯ ಭೂ ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿಯು ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ನಮ್ಮ ಹೋರಾಟ ಸಮಿತಿಯು ಎಚ್ಚರಿಸ ಬಯಸುತ್ತದೆ.ಸಂಘಟನೆಗೆ ಕರೆ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಸಚಿವರಾದ ಮಧುಬಂಗಾರಪ್ಪ ನವರ ಇತ್ತೀಚಿನ ಹಲವಾರು ಸಂದರ್ಭದ ಹೇಳಿಕೆಗಳು ರಾಜ್ಯದಲ್ಲಿ ನಿರಂತರವಾಗಿ ಶಾಲಾ ಜಮೀನುಗಳನ್ನ ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತ ಕುಟುಂಬಗಳಲ್ಲಿ ಅಭದ್ರತೆಯನ್ನ ಮೂಡಿಸುತ್ತಿದೆ.
ಹೀಗಾಗಿ ರಾಜ್ಯದ ಶಾಲಾ ಜಮೀನು ಗೇಣಿದಾರರ ತುರ್ತಾಗಿ ಸಂಘಟಿತರಾಗುವ ಕಾಲ ಸನ್ನಿಹಿತವಾಗಿದೆ ಹಾಗೂ ಈ ಬಗ್ಗೆ ಕಾನೂನು ಹೋರಾಟ ನಡೆಸುವುದು ಅಗತ್ಯವಾಗಿದೆ. ಆದ್ದರಿಂದ ಎಲ್ಲಾ ಶಾಲಾ ಜಮೀನುಗಳನ್ನ ಗೇಣಿದಾರರು ನನ್ನ ಮೊ. ನಂ. 9482702533 ಗೆ ಮುಂದಿನ ಹೋರಾಟಕ್ಕೆ ಸಂಪರ್ಕಿಸಲು ಕೋರಿದೆ ಎಂದು ತಿಳಿಸಿದ್ದಾರೆ.



