ಇಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನೂತನ ಜಿಲ್ಲಾಧಿಕಾರಿ ಯವರನ್ನು ಅಭಿನಂದಿಸಲಾಯಿತು. ನಂತರ ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ದೇವರಾಜ್ ಅರಸ್ ಭವನದ ಉದ್ಘಾಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸುವ ಮುನ್ನ ಸಂಘಟನೆಯು ಈ ಕೆಳಕಂಡ ಮಾಹಿತಿ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದೆ. ಶಿವಮೊಗ್ಗ ನಗರದ, ಬಾಲರಾಜ್ ಅರಸ್ ರಸ್ತೆಯಲ್ಲಿ ಸರ್ವಜ್ಞ ವೃತ್ತ ಇಲ್ಲಿ ನಿರ್ಮಾಣವಾಗುತ್ತಿರುವ ಡಿ.ದೇವರಾಜ ಅರಸ್ ಭವನ ಸಭಾಂಗಣದ ಕಟ್ಟಡ ಕಾಮಗಾರಿ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಾನವಾಗುತ್ತಿದ್ದು ಸರ್ಕಾರದಿಂದ ಈಗಾಗಲೇ 4 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು,
ಕಾಮಗಾರಿಯನ್ನು ಮುಂದುವರೆಸಲು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರಕ್ಕೆ ನಮ್ಮ ಒಕ್ಕೂಟದ ವತಿಯಿಂದ ಅನೇಕ ಮನವಿಗಳನ್ನು ಸಲ್ಲಿಸುತ್ತಾ ಬಂದಿರುತ್ತೇವೆ.
ಇತ್ತೀಚಿಗೆ ಸರ್ಕಾರದ ಆದೇಶ :BCWD/14011/175/2024BCWD-COORD-BCWD : 19-02-2025 ಇಲಾಖೆಯೂ ಡಿ.ದೇವರಾಜ ಅರಸ್ ಭವನ ಮುಂದುವರಿದ ಕಾಮಗಾರಿಗೆ ರೂ 1 ಕೋಟಿ ಹಣವನ್ನು ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.
ಈ ಹಣವನ್ನು ಭವನದ ಮುಂಭಾಗ ನೇ ಮಹಡಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಕಛೇರಿಯನ್ನು ಸ್ಥಳಾಂತರಿಸುವ ಕೆಲಸಗಳನ್ನು ಪ್ರಾರಂಬಿಸಿ ಪೂರ್ಣಗೊಳಿಸಿದ್ದು, ಇದು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿರುತ್ತಕಂತ ಕ್ರಮವಾಗಿರುತ್ತದೆ.
ಇದನ್ನು ತಾವು ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕಾನೂನು ರಿತ್ಯಾ ಕ್ರಮ ಕೈಗೊಳ್ಳಬೇಕೆಂದು ನಾವುಗಳು ಒತ್ತಾಯಿಸುತ್ತೇವೆ ಎಂದು ಸಂಘಟನೆ ಮನವಿ ಮಾಡಿದೆ.

ಈ ಸಂಧರ್ಭದಲ್ಲಿ ವಿ. ರಾಜು ಅಧ್ಯಕ್ಷರು ಡಿ.ಟಿ. ವೆಂಕಟೇಶ್ ಉಪಾಧ್ಯಕ್ಷರು ಎಸ್ . ಬಿ. ಅಶೋಕ್ ಕುಮಾರ್ ಕಾರ್ಯದರ್ಶಿ.ಇಕ್ಕೇರಿ ರಮೇಶ್ ಜಿ. ಎಂ. ವಿಜಯಕುಮಾರ್ ಕೆ. ವಿ. ಅಣ್ಣಪ್ಪ ಪ್ರಭಾಕರ್ ನಿರಂಜನ ಡಿ. ಸಿ.ಹೊನ್ನಪ್ಪ ಪ್ರಸನ್ನ ಉಪಸ್ಥಿತರಿದ್ದರು.



