ಶಿವಮೊಗ್ಗ ನಗರದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತ ಪ್ರತಿನಿತ್ಯ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಮಾಡುತ್ತ, ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಸಮಿತಿ ಸದಸ್ಯರಾದ ಅರ್ಚನ ನಿರಂಜನ್ ಅವರು ಇಂದು ಹೂಗುಚ್ಚ ನೀಡುವ ಮೂಲಕ ಅಭಿನಂದನೆ ಸಲ್ಲಿಸಿ ತಮ್ಮಿಂದ ಮತ್ತಷ್ಟು ಉತ್ತಮ ಕಾರ್ಯಗಳು ನಗರದಲ್ಲಿ ನಡೆಯಲಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿ ಎಂದು ಅರ್ಚನ ಅವರು ಅಭಿನಂದಿಸಿದರು.
ನಂತರ ಮಾತನಾಡಿದ ಅರ್ಚನ ನಿರಂಜನ್ ಅವರು ಶಿವಮೊಗ್ಗ ನಗರದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್‌ಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಬೇಕೆಂದು ಇಂದು ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ಮನವಿ ಸಲ್ಲಿಸುವ ಮುಖಾಂತರ ಈ ಕೆಳಗಿನ ಮಾಹಿತಿ ಒದಗಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪ್ರತಿನಿತ್ಯ ಸಂಚಾರ ಮಾಡುವ ಖಾಸಗಿ ಸಿಟಿ ಬಸ್‌ಗಳಲ್ಲಿ ಸಭ್ಯಸ್ತ ಹೆಣ್ಣು ಮಕ್ಕಳು ಮತ್ತು ಮಹಿಳಾ ಪ್ರಯಾಣಿಕರು ಪ್ರಯಾಣಿಸುವುದು ಕಷ್ಟಕರವಾಗಿದೆ ಎಂಬ ದೂರುಗಳು ನಗರದಲ್ಲಿ ಕೇಳಿ ಬರುತ್ತಿದೆ.

ಈ ಸಂಬಂಧ ಶಿವಮೊಗ್ಗ ಸಂಚಾರಿ ವೃತ್ತ ನಿರೀಕ್ಷಕರಾದ ದೇವರಾಜ್ ಟಿ.ವಿ. ಗಮನಕ್ಕೆ ಮಾಹಿತಿ ತಿಳಿಯಬಯಸುವುದು ಏನೆಂದರೆ, ನಗರದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರತಿನಿತ್ಯ ಬಸ್‌ಗಳಲ್ಲಿ ಕೆಟ್ಟ ಕೆಟ್ಟ ಅಸಭ್ಯ ಹಾಡುಗಳನ್ನು ಹಾಕುವುದು.
ಮಹಿಳಾ ಪ್ರಯಾಣಿಕರೊಂದಿಗೆ ಕೆಲವು ಚಾಲಕ ಹಾಗೂ ನಿರ್ವಾಹಕರು ಅಸಭ್ಯ ವರ್ತಿಸುವುದು, ಮೊಬೈಲ್ ನಂಬರ್ ಕೊಡುವಂತೆ ಪೀಡಿಸುವುದು ಹಾಗೂ ಚಿಲ್ಲರೆ ನೀಡದೆ ಸತಾಯಿಸುವುದು ಹಾಗೂ ಬಸ್ ರಶ್ ಇದ್ದ ವೇಳೆಯಲ್ಲಿ ಮಹಿಳಾ ಪ್ರಯಾಣಿಕರನ್ನು ಅಸಭ್ಯವಾಗಿ ಮುಟ್ಟುವುದು ಈ ರೀತಿಯ ಘಟನೆಗಳು ಪ್ರತಿನಿತ್ಯ ನಡೆಯುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ.
ಇದರಿಂದ ತಮ್ಮ ಕರ್ತವ್ಯಗಳಿಗೆ ಪ್ರಯಾಣಿಸುವ ಮಹಿಳೆಯರಿಗೆ. ಹೆಣ್ಣು ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಸಂಬಂಧ ಠಾಣೆಗಳಿಗೆ ದೂರು ನೀಡಲು ಸಭ್ಯಸ್ತ ಮಹಿಳೆಯರು ಹಾಗೂ ಹೆಣ್ಣಮಕ್ಕಳು ಹಿಂಜರಿಯುತ್ತಿದ್ದಾರೆ.
ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಸುರಕ್ಷತೆ ದೃಷ್ಟಿಯಿಂದ ತಾವುಗಳು ನಗರದಲ್ಲಿ ಮಹಿಳಾ ಪ್ರಯಾಣಿಕರು ನೆಮ್ಮದಿಯಾಗಿ ಪ್ರಯಾಣಿಸಲು ಖಾಸಗಿ ಬಸ್‌ಗಳ ಮೇಲೆ ಸೂಕ್ತ ಕ್ರಮ ಜರುಗಿಸುವ ಮೂಲಕ ನಗರದಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.
ಖಾಸಗಿ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕ ಎಂಬುವವರ ಬಳಿ ನಿರ್ವಾಹಕ ಲೈಸನ್ಸ್ ಪಡೆದುಕೊಂಡು ಅರ್ಹತೆ ಮಾನದಂಡಗಳನ್ನು ಹೊಂದಿರುವಂತವರಿಗೆ ಮಾತ್ರ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸಲು ಆದ್ಯತೆ ನೀಡಬೇಕು.
ಈ ರೀತಿ ಆದಲ್ಲಿ ಪ್ರಯಾಣಿಕರಿಗೆ ನೇರವಾಗಿ ಕಿರುಕುಳ ನೀಡುವವರನ್ನ ಶಿಕ್ಷೆಗೆ ಒಳಪಡಿಸಬಹುದಾಗಿದೆ. ನಗರದಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಬಸ್‌ಗಳಲ್ಲಿ ಕಡ್ಡಾಯವಾಗಿ ಪೊಲೀಸ್ ಸಹಾಯವಾಣಿ ನಂಬರ್ ಹಾಕುವ ಮೂಲಕ ಮಹಿಳಾ ಪ್ರಯಾಣಿಕರು ನೇರವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸುವ ಮೂಲಕ ತಮಗೆ ಆಗುವ ಕಿರುಕುಳ ತಡೆಗಟ್ಟಲು ವ್ಯವಸ್ಥೆ ಒದಗಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು ಶೀಘ್ರದಲ್ಲಿ ಕ್ರಮ ಜರುಗಿಸುವ ಮೂಲಕ ಮಹಿಳಾ ಪ್ರಯಾಣಿಕರು ಸುರಕ್ಷತೆಯಿಂದ ನೆಮ್ಮದಿಯಿಂದ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.



