ಶಿವಮೊಗ್ಗದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ರಾಜಕಾಲುವೆ ಒತ್ತುವರಿ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಸಮಿತಿ ಸದಸ್ಯರಾದ ಅರ್ಚನ ನಿರಂಜನ್ ಅವರು ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಈ ಮೇಲ್ಕಂಡ ವಿಚಾರ ಸಂಬಂಧ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಏನಿದೆ..!
ಶಿವಮೊಗ್ಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸಾಕಷ್ಟು ಹೆಸರು ಮಾಡಿದ್ದೂ ಸಾಕಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ.ಈ ಸಂಸ್ಥೆಯ ಶಾಲೆಯಾದ ಕಸ್ತೂರಿಬ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಕಮಲಾ ನೆಹರು ಪದವಿ ಕಾಲೇಜು ಮಧ್ಯದಲ್ಲಿ ಹಾದು ಹೋಗಿರುವ ರಾಜ ಕಾಲುವೆಯನ್ನ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಒತ್ತುವರಿ ಮಾಡಿರುತ್ತೆ. ಇದು ಕಾನೂನು ರೀತಿಯ ಅಪರಾಧವಾಗಿರತ್ತೆ.
ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರಿಗೆ ತಿಳಿಯ ಬಯಸುವುದು ಏನಂದರ ನಗರದಲ್ಲಿ ಮಹಾನಗರ ಪಾಲಿಕೆ ಪಕ್ಕದಲ್ಲಿ ಈ ರೀತಿಯ ರಾಜಕಾಲುವೆ ಒತ್ತುವರಿ ಆಗಿದ್ದರು ಸಹ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಕ್ರಮ ಜರುಗಿಸಿರುವುದಿಲ್ಲ ಹಾಗೂ ರಾಜಕಾಲುವೆ ತೆರವುಗೋಳಿಸಿಲ್ಲ ಹಾಗೂ ಅಲ್ಲಿ ಇರುವಂತ ಕಾಂಸೆರ್ವೆನ್ಸಿ ಸಹ ಒತ್ತುವರಿ ಮಾಡುವ ಮೂಲಕ ಸಂಸ್ಥೆಯು ಕಟ್ಟಡ ನಿರ್ಮಾಣ ಮಾಡಿರೋದು ಮಾಹಿತಿಯಾಗಿದೆ.
ಈ ರೀತಿಯ ಕಾನೂನು ಉಲ್ಲಂಘನೆ ಮಾಡಿರುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿರುದ್ಧ ಈ ಕೂಡಲೇ ಕ್ರಮ ಜರುಗಿಸಬೇಕು ಹಾಗೂ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಮುಖೇಣ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕೆಂದು ಇಂದು ಮಹಾನಗರ ಪಾಲಿಕೆ ಆಯುಕ್ತರದ ಮಾಯಣ್ಣ ಗೌಡರಿಗೆ ಅರ್ಚನ ನಿರಂಜನ್ ಮನವಿ ಸಲ್ಲಿಸಿರುತ್ತಾರೆ.
ಮನವಿಗೆ ಸ್ಪಂದಿಸಿದ ಮಾಯಣ್ಣ ಗೌಡರು ಪಾಲಿಕೆ ಅಧಿಕಾರಿಯಾದ ಜ್ಯೋತಿ ಅವರು ಇದರ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ ನಂತರ ನಾನು ಸಹ ಪರಿಶೀಲಿಸಿ ಶೀಘ್ರದಲ್ಲಿ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.



