ಶಿವಮೊಗ್ಗ ನಗರದಲ್ಲಿ ಮುಂದುವರೆದ ಸುಗಮ ಸಂಚಾರ ವ್ಯವಸ್ಥೆ, ನಗರಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು ವರ್ಗಾವಣೆಯಾಗಿ ನಗರಕ್ಕೆ ಬಂದಾಗಿಂದ ಒಂದಿಲ್ಲ ಒಂದು ರೀತಿಯಲ್ಲಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹಲವಾರು ಪ್ರಾಮಾಣಿಕ ಕಾಯಕಲ್ಪ ಮಾಡುತ್ತಾನೆ ಇದ್ದಾರೆ.

ಅದರ ಮುಂದುವರೆದ ಭಾಗವಾಗಿ ಈ ದಿನ ಸೀನಪ್ಪ ಶೆಟ್ಟಿ ಸರ್ಕಲ್ ( ಗೋಪಿ ಸರ್ಕಲ್ ) ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಅಂಬಿಕಾ ಬುಕ್ಸ್ ಸ್ಟೋರ್ ಎದುರು ರಸ್ತೆ ಮಧ್ಯ ಇದ್ದ ಡಿವೈಡರ್ ಯನ್ನು ಮಹಾನಗರ ಪಾಲಿಕೆಯ ಇಂಜಿನಿಯರ್ ಗಳ ಸಹಾಯ ಮುಖೇಣ ತೆರವುಗೊಳಿಸಿ.

ಸಿಮೆಂಟ್ ಕಾಂಕ್ರೀಟ್ ಹಾಕಿಸಿ ಕಸ್ತೂರಿ ಬಾ ಕಾಲೇಜು ಕಡೆಗೆ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಗೋಪಿ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಜಂಟಿ ಕರ್ತವ್ಯ ಮೂಲಕ ಅವಕಾಶ ಕಲ್ಪಿಸಿರುತ್ತದೆ.
ಈ ಒಂದು ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



