ಮಾಯಣ್ಣ ಗೌಡರೇ …! ಪಾಲಿಕೆ ವ್ಯಾಪ್ತಿಯಲ್ಲಿ ಪವಾಡ ..!!…?!

ಶಿವಮೊಗ್ಗ

ಶಿವಮೊಗ್ಗ,ಮಹಾನಗರ ಪಾಲಿಕೆ ಮ್ಯಾಜಿಕ್ ಮಾಡ್ತಾ ಇದೆ…! ಮಹಾನಗರ ಪಾಲಿಕೆಯ ಮ್ಯಾಜಿಕ್ ಗೆ ಚರಂಡಿ, ಯುಜಿಡಿಗಳೇ ಮಂಗಮಾಯ…!!.

ನಗರದ ಹೃದಯ ಭಾಗದಲ್ಲಿ ಇರುವ ಪ್ರತಿಷ್ಠಿತ ಬಡಾವಣೆಗಳಲ್ಲಿ ಸರಿಯಾದ ರಸ್ತೆ ಎಂಬುವುದು ಇಲ್ಲವೇ ಇಲ್ಲ…!! ಚರಂಡಿಯನ್ನು ಕೇಳೋದೇ ಬೇಡ..?! ಯುಜಿಡಿ ಇಲ್ಲದೆ ಮನೆಗಳವ್ರು ಪರದಾಟ ಪಡುತ್ತಿದ್ದಾರೆ.

ಇಂಥದೊಂದು ಪವಾಡ ನಡೆದಿರುವುದು ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಎದುರಿನಲ್ಲಿಯೇ ಎಂದರೆ ಆಶ್ಚರ್ಯವಾಗದೇ ಇರಲಾರದು ಅಲ್ಲವೇ..!?.

ಹೌದು ನಂಜಪ್ಪ ಆಸ್ಪತ್ರೆ ಎದುರು ಭಾಗದಲ್ಲಿಯೇ ಬಾಲಾಜಿ ಕ್ಯಾಂಟೀನ್ ಇದೆ. ಈ ಕ್ಯಾಂಟೀನ್ ಹಿಂಭಾಗದಲ್ಲಿ ಏನಿಲ್ಲ ಬಂದರೂ ಹತ್ತಾರು ಮನೆಗಳಿದ್ದು ಕಳೆದ 40 – 50 ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೆ ಈ ಮನೆಗಳಿಗೆ ಹೋಗಲು ಇರುವ ರಸ್ತೆಯು ತುಂಬಾ ಕಿರಿದಾಗಿದೆ ಹಾಗೂ ಇಲ್ಲಿ ಚರಂಡಿ ಮತ್ತು ಯುಜಿಡಿ ವ್ಯವಸ್ಥೆಯೆ ಇಲ್ಲ ಹೌದು ನಗರದ ಹೃದಯ ಭಾಗದಲ್ಲಿರುವ ಈ ಭಾಗದಲ್ಲಿ ಇಂತಹ ಅವ್ಯವಸ್ಥೆ ಇದೆ. ಮೊದಲೇ ಇಂತಹ ಅವ್ಯವಸ್ಥೆಯಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಯಾವುದೇ ವಿಷಯದ ಬಗ್ಗೆ ದೂರು ಅರ್ಜಿ ಸಲ್ಲಿಸಿದರು ಸಮಸ್ಯೆಗಳು ಪರಿಹಾರ ಸಿಗದ ಹಾಗೆ ಉಳಿದಿದೆ.‌

ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಯಾವುದೇ ಪರವಾನಗಿ ಪಡೆಯದೆ ಸೆಟ್ ಬ್ಯಾಕ್ ನಿಯಮ ಉಲ್ಲಂಘನೆ ಮಾಡಿ ಕಿರಿದಾದ ಓಣಿಗೆ ಮನೆಯ ಆರ್‌ಸಿಸಿ ಬರುವಂತೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಂಜಪ್ಪ ಆಸ್ಪತ್ರೆ ಎದುರುಗಡೆ ವಾರ್ಡ್ ನಂ 4 ಬಾಲಾಜಿ ಹೋಟೆಲ್ ಹಿಂಭಾಗ ಅಚ್ಯತರಾವ್ ಲೇ ಔಟ್ 2 ನೇ ಕ್ರಾಸ್ ಓಣಿಯಲ್ಲಿ ಹೊಸದಾಗಿ ವಾಸದ ಮನೆ ಕಟ್ಟುತ್ತಿರುವ ವಿಮಲಾಬಾಯಿ ಮತ್ತವರ ಮಕ್ಕಳು ತಮ್ಮ ಜಾಗದಲ್ಲಿ ಮನೆ ಕಟ್ಟುತ್ತಿದ್ದು ಓಣಿಯ ಅಗಲ 12 ಅಡಿ ಇದ್ದು ಹೊಸದಾಗಿ ಓಣಿಯಲ್ಲಿ ಮನೆ ಕಟ್ಟುವಾಗ ರಸ್ತೆಯಿಂದ ಸೆಟ್ ಬ್ಯಾಕ್ ಬಿಟ್ಟು ಹಿಂದಕ್ಕೆ ಮನೆ ಕಟ್ಟುವ ನಿಯಮ ಇದ್ದರೂ ಇದನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಾಧಿಕಾರಗಳ ಅಧಿಕೃತ ಪರವಾನಗಿಗಳನ್ನು ಪಡೆಯದೆ ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕೆಂದು ಮಹಾನಗರ ಪಾಲಿಕೆಗೆ ಸ್ಥಳೀಯರು ದೂರು ನೀಡಿದ್ದಾರೆ.

ಆದರೆ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಸಾರ್ವಜನಿಕರ ದೂರು ದುಮ್ಮಾನ ಗಳಿಗೆ ಪಾಲಿಕೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಪ್ರಸ್ತುತ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ಮಾತ್ರ ನಾನು ಅತ್ಯಂತ ಪ್ರಾಮಾಣಿಕ ದಕ್ಷ ಅಧಿಕಾರಿ ಮುಲಾಜಿಲ್ಲದೆ ತಪ್ಪಾಗಿದ್ದಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳುವುದು ಸರ್ವೆ ಸಾಮಾನ್ಯವಾಗಿದೆ.

ಈ ವಾರ್ಡ್ ಗೆ ಸಂಬಂಧಪಟ್ಟ ಇಂಜಿನಿಯರ್ ಗಳು ಹಾಗೂ ಹೆಲ್ತ್ ಇನ್ಸ್ಪೆಕ್ಟರ್ ಅವರುಗಳ ಅಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದಾರಾ? ಎಂಬುದು ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರ ಪ್ರಶ್ನೆಯಾಗಿದೆ?. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪರವಾನಿಗಳು ಪಡೆಯದೆ ಬೇಕಾಬಿಟ್ಟಿ ಕಟ್ಟಡಗಳ ನಿರ್ಮಾಣವಾಗುತ್ತಿದ್ದರು ಯಾಕೆ ಗಮನಹರಿಸುತ್ತಿಲ್ಲ ಅಷ್ಟೊಂದು ಬೇಜವಾಬ್ದಾರಿ ಯಾಕೆ?. ಅಥವಾ ಅಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕಠಿಣ ಕಾನೂನು ಕ್ರಮಕ್ಕೆ ಮುಂದಾಗುತ್ತಾರಾ? ಪಾಲಿಕೆ ಆಯುಕ್ತರು ಪ್ರಾಮಾಣಿಕತೆಯಿಂದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗುತ್ತಾರಾ? . ಮನೆ ನಿರ್ಮಾಣದ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಕಟ್ಟಡದ ಮಾಲೀಕರ ಅಕ್ರಮಗಳಿಗೆ ಕಡಿವಾಣ ಹಾಕುತ್ತಾರಾ? ಅಥವಾ ಯಥಾ ಪ್ರಕಾರ ಹೇಳಿಕೆ ಕೊಟ್ಟು ಸುಮ್ಮನಾಗುತ್ತಾರಾ ಕಾದು ನೋಡಬೇಕಿದೆ.

Author