ಶಿವಮೊಗ್ಗ, ನಗರ ಬೆಳದಂತೆ ಟ್ರಾಫಿಕ್ ಕೂಡ ಹೆಚ್ಚಾಗುತ್ತಿದ್ದನ್ನ ಗಮನಸಿದ ನಿರ್ಗಮಿತ ಜಿಲ್ಲಾಧಿಕಾರಿಯಾದ ಗುರುದತ್ ಹೆಗಡೆ ಅವರು ನಗರದೊಳಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೂ ಭಾರಿ ವಾಹನ ಹಾಗೂ ಬೇರೆ ಜಿಲ್ಲೆಗಳಿಗೆ ತೆರಳುವ KSRTC ಮತ್ತು ಖಾಸಗಿ ಬಸ್ ನಗರದೊಳಗೆ ಸಂಚಾರ ಮಾಡದಂತೆ ಆದೇಶ ಸೂಚಿಸಿದ್ದರು.
ಹಾಗೂ ನಗರದ ಕೆಲವು ಭಾಗಗಳನ್ನು ಗುರುತಿಸುವ ಮೂಲಕ ಹೆಚ್ಚಾದ ಟ್ರಾಫಿಕ್ ಇರುವಂತ ಏರಿಯಾಗಳಲ್ಲಿ ಏಕ ಮುಖ ಸಂಚಾರಕ್ಕೆ ಕೂಡ ಅದೇಶಿಸಿದ್ದರು.
ಈ ಹಿನ್ನಲೆಯಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ನಗರದಲ್ಲಿ ಸುಗಮ ಸಂಚಾರಕ್ಕೆ ವಾಹನ ಸವಾರರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ನಗರದ ಆರ್. ಎಂ. ಆರ್ ರಸ್ತೆ, ರಾಘವೇಂದ್ರ ಸ್ವಾಮಿ ಮಠ ರಸ್ತೆ ಹಾಗೂ ನಂಜಪ್ಪ ಆಸ್ಪತ್ರೆ ಮತ್ತು ಮ್ಯಾಕ್ಸ್ ಆಸ್ಪತ್ರೆ ಹಾಗೂ ಸರ್ಜಿ ಆಸ್ಪತ್ರೆ ರಸ್ತೆಯಲ್ಲಿ ಸಾಕಷ್ಟು ವಾಹನ ದಟ್ಟನೆ ಗಮನಿಸುವ ಮೂಲಕ ಬ್ಯಾರಿಕಡ್ ಹಾಕಿ, ದಾರ ಕಟ್ಟುವ ಮೂಲಕ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲ್ಲಿಸಬಾರದು ವಾಹನ ಸವಾರರಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ತಡೆಗಟ್ಟಿದ್ದಾರೆ ಹಾಗೂ ಉಷಾ ನರ್ಸಿಂಗ್ ಹೋಂ ಬಳಿ ಹೊಸದಾಗಿ ಸಿಗ್ನಲ್ ಲೈಟ್ ಅಳವಡಿಸಿ ಕೊಡುವ ಮೂಲಕ ನಾಗರೀಕರಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ನಗರದಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ತಮ್ಮ ಕರ್ತವ್ಯ ಮಾಡುವ ಮೂಲಕ ನಗರದ ಗಾಂಧಿ ಬಜಾರ್ ನಲ್ಲಿ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೀದಿ ಬದಿ ವ್ಯಾಪಾರಸ್ಥರು ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡಬಾರದು ಎಂಬ ಬೋರ್ಡ್ ಕೂಡ ಹಾಕಿದ್ದಾರೆ.
ಟ್ರಾಫಿಕ್ ಪೊಲೀಸ್ ಇಲಾಖೆ ನಗರದಲ್ಲಿ ಸಾಕಷ್ಟು ಬದಲಾವಣೆ ಹಾಗೂ ತಮ್ಮ ವ್ಯಾಪ್ತಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ನೂತನವಾಗಿ ಬಂದಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ನಮ್ಮ ಮಾಧ್ಯಮ ಮುಖೇಣ ನಿಮ್ಮ ಗಮನಕ್ಕೆ ತಿಳಿಯ ಬಯಸುವ ಮಾಹಿತಿ ಏನಂದರೆ, ನಗರದಲ್ಲಿ ಹಿಂದಿನ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಕೊಡಡದಂತೆ ನಗರದಿಂದ ಬೇರೆ ಜಿಲ್ಲೆಗೆ ತೆರಳುವ KSRTC ಹಾಗೂ ಖಾಸಗಿ ಬಸ್ ನವರು ಪ್ರತಿನಿತ್ಯ ನಗರದೊಳಗೆ ಸಂಚಾರ ಮಾಡುತ್ತಿದ್ದಾರೆ ಇದರಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಆಗುತ್ತಿಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಇಲ್ಲದಂತೆ ನಗರದೊಳಗೆ ಸಂಚಾರ ಮಾಡುವ ಮೂಲಕ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಚಿತ್ರದುರ್ಗ ಹಾಗೂ ದಾವಣಗೆರೆ, ಹರಿಹರ, ಕುಕನೂರು, ಹೊಸಪೇಟೆ, ಹುಬ್ಬಳ್ಳಿ, ರಾಯಚೂರು ಇತ್ಯಾದಿ ಬೇರೆ ಜಿಲ್ಲೆಗೆ ತೆರಳುವ KSRTC ಬಸ್ ಗಳಿಗೆ ಲಂಗು, ಲಗಾಮು ಇಲ್ಲದಂತೆ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಕೊಡದಂತೆ ವರ್ತಿಸುತ್ತಿದ್ದಾರೆ,.
ಇದರೊಟ್ಟಿಗೆ ನಮ್ಮ ಮಾಧ್ಯಮ ಮೂಲಕ ಪ್ರತಿನಿತ್ಯ ನಗರದಲ್ಲಿ KSRTC ಮತ್ತು ಖಾಸಗಿ ಬಸ್ ಗಳು ಈ ರೀತಿ ನಗರದೊಳಗೆ ವರ್ಥಿಸುತ್ತಿರುವುದನ್ನ ಸಹ ಟ್ರಾಫಿಕ್ ಪೊಲೀಸ್ ಹಾಗೂ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಮಿಥುನ್ ಕುಮಾರ್ ಅವರ ಗಮನಕ್ಕೆ ಕೂಡ ತರಲಾಗಿತ್ತು.
ಈ ಹಿನ್ನಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಪಶ್ಚಿಮ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಆದಂತಹ ಸ್ವಪ್ನ ಅವರು ಸಹ ಕಾರ್ಯಾಚರಣೆ ಮಾಡುವ ಮೂಲಕ KSRTC ಬಸ್ ಗಳನ್ನು ತಡೆದು ನಗರದೊಳಗೆ ಸಂಚಾರ ಮಾಡುವ ಮೂಲಕ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಎಚ್ಚರಿಕೆ ಕೂಡ ನೀಡಿದ್ದರು.
ಇಷ್ಟೆಲ್ಲಾ ಅದಮೇಲೂ ಕೂಡ KSRTC ಹಾಗೂ ಖಾಸಗಿ ಬಸ್ ಗಳು ನಗರದೊಳಗೆ ಸಂಚಾರ ಮಾಡುವ ಮೂಲಕ ದರ್ಪವನ್ನು ಮೆರೆಯುತ್ತಿದ್ದಾರೆ.
KSRTC ಡಿಸಿ ಯಾಗಿರುವ ನವೀನ್ ಕುಮಾರ್ ಮಾತ್ರ ಎಲ್ಲವು ಗಮನಕ್ಕಿದೆ ಸರಿಪಡಿಸುತ್ತೇವೆ ಎಂದು ಹಾರಿಕೆ ಉತ್ತರ ಪ್ರತಿಸಲ ನೀಡುತ್ತಾರೆ. ಜೊತೆಗೆ ಟ್ರಾಫಿಕ್ ಉಲ್ಲಂಘನೆ ಸಂಬಂಧ KSRTC ಬಸ್ ಗಳ ಮೇಲೆ 1.5 ಲಕ್ಷಕ್ಕು ಅಧಿಕ ಹಣ ಪವತಿಸಬೇಕಿದೆ ಎಂಬ ಮಾಹಿತಿಯಾಗಿದೆ.
ಈ ಸಂಬಂಧ KSRTC DTO ದಿನೇಶ್ ಅವರು ಈ ಹಿಂದೆ ನಾವು ಸರ್ಕಾರಕ್ಕೆ ಪೆನಲ್ಟಿ ಹಣ ಮನ್ನಾ ಮಾಡುವಂತೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದರು.
ಈಗ ಎರಡನೇ ಬಾರಿ ಕೂಡ ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಉಲ್ಲಂಘನೆ ವಿಚಾರದಲ್ಲಿ ಇಲ್ಲಿಯವರೆಗೆ ಕೂಡ ಫೈನ್ ಕಟ್ಟಿಲ್ಲ ಜೊತೆಗೆ ಸರ್ಕಾರದ ಪತ್ರದ ವಿಚಾರ ಬಗ್ಗೆ ಯಾವದೇ ಮಾಹಿತಿ ಒದಗಿಸಿಲ್ಲ.
ಮುಂದುವರೆದು KSRTC ಶಿವಮೊಗ್ಗ-ಭದ್ರಾವತಿ ತೆರಳುವ KSRTC ನಗರ ಸಾರಿಗೆ ಬಸ್ ಗಳು ಏಕಏಕಿ ಶಾಲಾ ಕಾಲೇಜು ಆಫೀಸ್ ಸಮಯದಲ್ಲಿ ಎರಡು ಮೂರು ಬಸ್ ರಶ್ ಆಗುವ ಮೂಲಕ ಬಸ್ ಗಳನ್ನು ಸ್ಟಾಪ್ ಗಳಲ್ಲಿ ನಿಲ್ಲಿಸದೆ ಪ್ರಯಾಣಿಕರು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರು ಎಲ್ಲರಿಗೂ ಅನಾನುಕೂಲವಾಗುವಂತೆ ವರ್ತಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್ ಗಳು ಇಲ್ಲದೆ,
ಈ ಸಂಬಂಧ ಹಲವಾರು ಸುದ್ದಿಗಳು ಈ ಹಿಂದೆ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ.ಹಲವಾರು ಸಮಸ್ಯೆಗಳನ್ನು ಒಳಗೊಂಡಿರುವ KSRTC ಇಲಾಖೆ. ಹಾಗೂ ಇಲ್ಲಿಗೆ ವಲಯ ಅಧಿಕಾರಿಯಾಗಿರುವ ನವೀನ್ ಅವರ ಸಮರ್ಥನೆ ನಿಜಕ್ಕೂ ವಿಷಾದನೀಯವಾಗಿದೆ.
ತಾವೋಬ್ಬ ಅಧಿಕಾರಿಯಾಗಿ ತಮ್ಮ ವ್ಯಾಪ್ತಿಯಲ್ಲಿ ಏನು ಕೆಲಸ ಆಗುತ್ತಿದೆ ಎಂಬ ಎಲ್ಲಾ ಮಾಹಿತಿಯಿದ್ದರು ಸಹ ಸಮರ್ಥನೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ಪ್ರಸ್ತುತ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿರುವ ನಿಖಿಲ್ ಅವರು ಯಾವ ಒಬ್ಬ ವ್ಯಕ್ತಿಯ ಜೀವ ಉಳಿಸುವುದು ನಮ್ಮ ಅತ್ಯಂತ ಜವಾಬ್ದಾರಿ ಮತ್ತು ಅಮೂಲ್ಯ ಕರ್ತವ್ಯ ಅಂತ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸಹ ನಗರದ ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ವಿಶ್ವೇಶ್ವರಯ್ಯ ರಸ್ತೆ ಮುಂಭಾಗ ಬಳಿ ಸಿಗ್ನಲ್ ನಲ್ಲಿ ಬೇರೆ ಜಿಲ್ಲೆಗೆ ತೆರಳುವ KSRTC ಬಸ್ ಗಳು ಬಂದಿದ್ದ ಕಾರಣ ಆಂಬುಲೆನ್ಸ್ ಗೆ ಅಡಚಣೆಯಾಗಿತ್ತು. ಇದೆಲ್ಲ ಸಿಸಿಟಿವಿ ಯಲ್ಲಿ ಸೆರೆಯಾಗಿದೆ ಎಂಬುದು ನಮ್ಮ ವಿವೇಚನೆಯಾಗಿದೆ.
ನಗರದಲ್ಲಿರುವ ಸಿಸಿಟಿವಿಗಳೇ ಸಾಕ್ಷ ಹೇಳುವಾಗ ಮಾಧ್ಯಮ ಮುಖೇಣ್ ಇಂದು ಇಷ್ಟು ಬೇರೆ ಜಿಲ್ಲೆಗಳಿಗೆ ಬಸ್ ಗಳು ನಗರದಿಂದ ತೆರಳಿದೆ ಎಂಬ ಮಾಹಿತಿ ಅವಶ್ಯಕತೆ ಇರುವುದಿಲ್ಲ ಎಂಬುದು ನಮ್ಮ ನಂಬಿಕೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿಕೊಡುವ ಭರವಸೆಯ ಧ್ವನಿಯನ್ನ ನೂತನ ಎಸ್ಪಿ ತಿಳಿಸಿದ್ದಾರೆ.
ಈ ಮೂಲಕವಾದರೂ ನೂತನವಾಗಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಅಧಿಕಾರಿಗಳು ಮುಖ್ಯವಾಗಿ KSRTC ಡಿಸಿ ಆಗಿರುವ ನವೀನ್ ಅಂತಹವರು, ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಕೊಡದೆ ವರ್ತಿಸುವ, ಇಂತಃ KSRTC ಅಧಿಕಾರಿಗಳ ಮೇಲೆ ಏನೆಲ್ಲಾ ಕ್ರಮ ಜರುಗಿಸುವ ಮೂಲಕ ನಗರದಲ್ಲಿ ಏನೆಲ್ಲಾ ಬದಲಾವಣೆ ತರುತ್ತಾರೆ ಎಂಬುದೇ ಪ್ರಸ್ತುತ ಪ್ರಜ್ಞಾವಂತ ನಾಗರೀಕರು ಹಾಗೂ ವಾಹನ ಸವಾರರ ಪ್ರಶ್ನೆಗೆ ಉತ್ತರದ ನಿರೀಕ್ಷೆಯಲ್ಲಿ!
ವಾಹನ ಸವಾರರು ಹೆಲ್ಮೆಟ್ ಇಲ್ಲದೆ, ಮತ್ತೊಂದು ದಾಖಲೆಯಿಲ್ಲದೆ ಇರುವುದನ್ನ ತಪಾಸಣೆ ಮಾಡುವ ಮೂಲಕ ನಾಗರೀಕರಿಗನ್ನ ಪರಿಶೀಲನೆ ಮಾಡುವ ನಮ್ಮ ಟ್ರಾಫಿಕ್ ಪೊಲೀಸ್ ಇಲಾಖೆ ನಗರದೊಳಗೆ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ನೀಡದಂತೆ ಸಂಚಾರ ಮಾಡುತ್ತಿರುವುದನ್ನು ಕೆಲವು ಟ್ರಾಫಿಕ್ ಪೊಲೀಸರು ನೋಡಿಯೂ ನೋಡದಂತೆ ಇರುವುದು ಹಾಗೂ ಕೆಲವು ಟ್ರಾಫಿಕ್ ಪೊಲೀಸರು ನಗರಾದೋಳಗೆ ಬಸ್ ಸಂಚಾರ ಮಾಡುತ್ತ ಬಂದಾಗ ಚಾಲಕ ಹಾಗೂ ನಿರ್ವಹಕರೊಂದಿಗೆ ಮಾತನಾಡುವ ಮೂಲಕ ನಗರದೊಳಗೆ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವುದು ದುರಂತದ ಸಂಗತಿಯಾಗಿದೆ
ಬಸ್ ಗಳು ನಗರದೊಳಗೆ ಓಡಾಡಿತ್ತಿರುವುದಕ್ಕ್ಕೆ ನಗರದೊಳಗೆ ಇರುವ ಸಿಸಿಟಿವಿಗಳೆ ಸಾಕ್ಷಿ ಹೇಳತ್ತದೆ.
ಇನ್ನಾದರೂ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು KSRTC ಮೇಲೆ ಕ್ರಮಕ್ಕೆ ಮುಂದಾಗುತ್ತಾರ? ಅಥವಾ ಯಾವದೋ ಒತ್ತಡಗಳಿಗೆ ಮಣಿಯುತ್ತಾರ ನೋಡಬೇಕಿದೆ!



