ಶಿವಮೊಗ್ಗ, ಇಂದು ಮಧ್ಯಾಹ್ನ 1:30 ಗಂಟೆಗೆ ಹೊಸನಗರ ತಾಲೂಕಿನ ಬೇಹಳ್ಳಿ (ಅಬ್ಬಿ), ನಿವಾಸಿ ದಿವಂಗತ ಶ್ರೀ ಶಣ್ಮುಖಪ್ಪ ಬಿ.ಎಂ.ಅವರ ಧರ್ಮಪತ್ನಿ 90 ವರ್ಷದ ಶ್ರೀಮತಿ ಭದ್ರಮ್ಮ ಅವರು ನಿಧನರಾಗಿದ್ದಾರೆ.
ಶ್ರೀಮತಿ ಭದ್ರಮ್ಮನವರು ಶಿವಮೊಗ್ಗ ನಗರದ ಪ್ರಖ್ಯಾತ ದಂತ ವೈದ್ಯರಾದ ಸುರೇಶ್ ಬಿ ಎಸ್, ಹೊಸನಗರ ಮಾಜಿ ತಾಪಂ ಅಧ್ಯಕ್ಷ ದಿ. ಅಬ್ಬಿ ಮಲ್ಲೇಶಪ್ಪ, ಕಾಂಗ್ರೆಸ್ ಮುಖಂಡರಾದ ಅಬ್ಬಿ ಈಶ್ವರ್, ಪುತ್ರಿಯರಾದ ವಜ್ರ, ರತ್ನ ಉಮಾ ಅಳಿಯಂದಿರಾದ ಚಿಕ್ಕ ಬಣತಿಯ ಯುವರಾಜ್, ಹೆಗ್ಗೋಡು ಪುಟ್ಟರಾಜು, ಈಸೂರು ಪ್ರಸನ್ನ ಕುಮಾರ್ ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ.
ಅವರ ಅಗಲಿಕೆಯಿಂದ ಕುಟುಂಬದವರಿಗೆ, ಬಂಧುಮಿತ್ರರಿಗೆ ಹಾಗೂ ಸಮಸ್ತ ಗ್ರಾಮಸ್ಥರಿಗೆ ಅಪಾರ ದುಃಖವುಂಟಾಗಿದೆ. ದಿವಂಗತ ಆತ್ಮಕ್ಕೆ ಶಾಂತಿ ದೊರೆಯಲಿ, ಶೋಕ ತಪ್ತ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ.
ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಹಾಗೂ ಸಂಬಂಧಿತ ಎಲ್ಲಾ ವಿಧಿವಿಧಾನಗಳನ್ನು ದಿನಾಂಕ 04-01-2026 ಮಧ್ಯಾಹ್ನ 1:00 ರಿಂದ 2:00 ಗಂಟೆಯೊಳಗೆ ಬೇಹಳ್ಳಿ (ಅಬ್ಬಿ), ಹೊಸನಗರ ತಾಲ್ಲೂಕಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ



