ಇಂದು ಸೂರ್ಯ, ಚಂದ್ರರ ಅಪರೂಪದ ಸಂಗಮ ; 2026ರ ಮೊದಲ ಸೂಪರ್‌ಮೂನ್

ದೇಶ

ಉಡುಪಿ, ನಾಳೆ ಸೂರ್ಯ ಸುಮಾರು 30 ಲಕ್ಷ ಕಿ.ಮೀ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣುತ್ತಾನೆ. ಚಂದ್ರನೂ ಕೂಡ ಸುಮಾರು 27 ಸಾವಿರ ಕಿ.ಮೀ ಸಮೀಪಿಸಿ ದೊಡ್ಡದಾಗಿಯೇ ಕಾಣುತ್ತಾನೆ.

ಈ ವಿಸ್ಮಯ ನಡೆಯುವುದು ಒಂದೇ ದಿನ, ಅದೇ ವಿಶೇಷ.2026ನ ಮೊದಲ ಸೂಪರ್​ ಮೂನ್: ಚಂದ್ರ ಭೂಮಿಯಿಂದ ಸಾಮಾನ್ಯಕ್ಕಿಂತ ಕಡಿಮೆ ದೂರ ತಲುಪಿದಾಗ ಅದರ ಗಾತ್ರ ಮತ್ತು ಹೊಳಪು ಹೆಚ್ಚಾಗುತ್ತದೆ. ಅಂತಹ ಚಂದ್ರನನ್ನು “ಸೂಪರ್‌ಮೂನ್” ಎನ್ನುವರು.

ಜ.3ರಂದು ಹುಣ್ಣಿಮೆ ಹಾಗೂ ಸೂಪರ್ ಮೂನ್ ಕೂಡಾ ಘಟಿಸಲಿದೆ. ಇದು ಈ ವರ್ಷದ ಮೊದಲ ಸೂಪರ್​ ಮೂನ್​. ಸೂಪರ್​ ಮೂನ್​ನಿಂದಾಗಿ ಹುಣ್ಣಿಮೆಯ ಚಂದ್ರ ಭೂಮಿಗೆ ಸುಮಾರು 27,000 ಕಿ.ಮೀ ಸಮೀಪ ಬಂದು 14 ಅಂಶ ದೊಡ್ಡದಾಗಿ, ಸುಮಾರು 30 ಅಂಶ ಹೆಚ್ಚಿನ ಹುಣ್ಣಿಮೆಯ ಬೆಳಕಿನಿಂದ ಬೆಳಗಲಿದ್ದಾನೆ.

ಹಾಗೆಯೇ, ಸೂರ್ಯನಲ್ಲೂ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜ.3ರಂದು ಸಮೀಪ ದೂರ (ಪೆರಿಜಿಗೆ) ಭೂಮಿ ಬಂದು, ಸರಾಸರಿ ದೂರ 15 ಕೋಟಿ ಕಿ.ಮೀಕ್ಕಿಂತ 14 ಕೋಟಿ 70 ಲಕ್ಷ ಕಿ.ಮೀಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಯ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಉಳಿದ ದಿನಕ್ಕಿಂತ ಈ ದಿನ ದೊಡ್ಡದಾಗಿ ಕಾಣುತ್ತದೆ.

“ಈ ವರ್ಷ ಭೂಮಿ ಜ.3ರಂದು ಪೆರಿಜಿಗೆ ಹಾಗೂ ಜುಲೈ 6ರಂದು ಅಪೊಜಿಗೆ ಬರಲಿದೆ. ಸೂರ್ಯನ ಸುತ್ತ ತಿರುಗುವ ಭೂಮಿ ಹಾಗೂ ಭೂಮಿಯ ಸುತ್ತ ತಿರುಗುವ ಚಂದ್ರ ಪಥ ವರ್ತುಲವಲ್ಲದೇ ದೀರ್ಘ ವೃತ್ತಾಕಾರವಾಗಿರುವುದೇ ಈ ಎಲ್ಲ ಸುಂದರ ಖಗೋಳ ವಿದ್ಯಾಮಾನಗಳಿಗೆ ಕಾರಣ. ಅದರಲ್ಲೂ ಈ ವರ್ಷ ಜ.3ರಂದು ಹುಣ್ಣಿಮೆ ಬಂದು ಸೂಪರ್ ಮೂನ್ ಆಗಿರುವುದು ವಿಶೇಷ” ಎಂದು ಖಗೋಳಶಾಸ್ತ್ರಜ್ಞ ಉಡುಪಿಯ ಡಾ. ಎ.ಪಿ.ಭಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025ರ ಕೊನೆಯ ಸೂಪರ್‌ಮೂನ್ ಡಿಸೆಂಬರ್ 4ರ ಗುರುವಾರ ಗೋಚರಿಸಿತ್ತು. 2024ರ ಕೊನೆಯ ಸೂಪರ್​ಮೂನ್​ ಅಕ್ಟೋಬರ್ 17ರಂದು ಕಾಣಿಸಿತ್ತು. ಕಳೆದ ವರ್ಷದ ಸೂಪರ್​ಮೂನ್​ ಸಂಭವಿಸಿದ್ದಾಗ ಭೂಮಿ ಮತ್ತು ಚಂದ್ರನ ನಡುವಿನ ಅಂತರವು 3,57,218 ಕಿಲೋಮೀಟರ್‌ಗಳಾಗಿತ್ತು.

ಸುಮಾರು 22 ನಿಮಿಷಗಳ ಕಾಲ ಇದ್ದ ಸೂಪರ್​ಮೂನ್​ ಸಾಮಾನ್ಯಕ್ಕಿಂತ ಶೇ.30ರಷ್ಟು ಪ್ರಕಾಶಮಾನವಾಗಿದ್ದ ಮತ್ತು ಗಾತ್ರದಲ್ಲಿ ಶೇ.14ರಷ್ಟು ದೊಡ್ಡದಾಗಿ ಕಾಣಿಸಿಕೊಂಡಿದ್ದ.

Author