ಶಿವಮೊಗ್ಗ | ಬೀದಿ ಬದಿ ಅನಧಿಕೃತ,ನಿಷ್ಕ್ರಿಯ, ಗಾಡಿಗಳು,ಮಾರಾಟ ಪರಿಕರಗಳನ್ನು ವಶಪಡಿಸಿಕೊಳ್ಳಲು ಪಾಲಿಕೆ ಕ್ರಮ

ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ರಸ್ತೆ, ಫುಟ್ ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರದ ಕೈಗಾಡಿಗಳು ನಿಷ್ಕ್ರಿಯ, ಅನುಪಯುಕ್ತ, ಕಬ್ಬಿನ ಹಾಲಿನ ಗಾಡಿ, ಐಸ್ ಕ್ರೀಂ ಗಾಡಿ ಇತ್ಯಾದಿ ಮಾರಾಟ ಪರಿಕರಗಳು, ತಾತ್ಕಾಲಿಕ ಶಡ್‌ಗಳು ಇತ್ಯಾದಿಯನ್ನು ಅನಧಿಕೃತವಾಗಿ ಬಿಟ್ಟಿರುವುದು ಕಂಡು ಬಂದಿದ್ದು, ಅದನ್ನು ತೆರವುಗೊಳಿಸಲು ಪಾಲಿಕೆ ಕ್ರಮಕೈಗೊಳ್ಳಲು ತೀರ್ಮಾನಿಸಿದೆ.

ಈ ಸಾರ್ವಜನಿಕ ಪ್ರಕಟಣೆಯ 15 ದಿನದ ಒಳಗೆ ಸಂಬಂಧಿಸಿದವರು ಕೂಡಲೇ ತಮ್ಮ ತಮ್ಮ ಅನುಪಯುಕ್ತ, ನಿಷ್ಕ್ರಿಯ ಅಥವಾ ವ್ಯಾಪಾರ ಮುಗಿದ ನಂತರ ಅಲ್ಲೇ ಬಿಟ್ಟಿರುವ ಗಾಡಿ ಅನುಪಯುಕ್ತ ವಸ್ತು ಇತ್ಯಾದಿ ತೆರವುಗೊಳಿಸುವುದು.

ತಪ್ಪಿದಲ್ಲಿ ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಪಾಲಿಕೆ ವತಿಯಿಂದ ಈ ಸಾಮಗ್ರಿಗಳನ್ನು ವಶಪಡಿಸಿಕೊಂಡು ” ಸ್ಕ್ರಾಪ್ ” ಮಾಡುವುದಲ್ಲದೇ ಸಂಬಂಧಿಸಿದವರ ಮೇಲೆ ದಂಡ ಹಾಗೂ ಕಾನೂನು ಕ್ರಮವಿಡಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Author