ಶಿಕಾರಿಪುರ ಆಸ್ಪತ್ರೆಗೆ 20 ಲಕ್ಷದ ಸಿಬಿ ನ್ಯಾಟ್ ಯಂತ್ರ ಕೊಡುಗೆ ನೀಡಿದ ಶಾಹಿ ಎಕ್ಸ್ಪೋರ್ಟ್

ಶಿವಮೊಗ್ಗ

ಶಿವಮೊಗ್ಗ, ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶಿಕಾರಿಪುರ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ಇಪ್ಪತ್ತು ಲಕ್ಷ ರೂ. ಮೌಲ್ಯದ ಸಿ ಬಿ ನ್ಯಾಟ್ ಯಂತ್ರ ಕೊಡುವ ಮೂಲಕ ಸಾರ್ವಜನಿಕ ಸೇವೆಗೆ ಕೊಡುಗೆ ನೀಡಿದೆ.

ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಆರ್ ಯೋಜನೆಯಡಿ ಈ ಕೊಡುಗೆ ನೀಡಲಾಗಿದೆ.ಪ್ರಧಾನ ಮಂತ್ರಿ ಅವರ ಟಿ ಬಿ ಮುಕ್ತ ಭಾರತ ಎಂಬ ಹೆಗ್ಗಳಿಕೆಗೆ ಪೂರಕವಾಗಿ, ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಎಸ್ ಯೋಜನೆ ಅಡಿಯಲ್ಲಿ 20ಲಕ್ಷ ರೂಪಾಯಿ ಮೌಲ್ಯ ದ ಸಿ ಬಿ ನ್ಯಾಟ್ ಯಂತ್ರ ವನ್ನು ಹಸ್ತಾಂತರ ಮಾಡಲಾಯಿತು.

ಈ ಯಂತ್ರವು ಅಲ್ಪವಾವಧಿಯಲ್ಲಿ ನಿರ್ದಿಷ್ಟವಾದ ಫಲಿತಾಂಶದೊಂದಿಗೆ, ಏಕಕಾಲಕ್ಕೆ 4 ಜನರ ಸ್ಯಾಂಪಲ್ ಪರೀಕ್ಷೆ ಮಾಡಬಹುದಾಗಿದೆ. ಕಡಿಮೆ ಸಮಯದಲ್ಲಿ ಪರೀಕ್ಷೆಯ ಮೂಲಕ, ರೋಗದ ಹರಡುವಿಕೆಯನ್ನು ತಡೆಯಬಹುದಾಗಿದೆ.

ಹಸ್ತಾಂತರ ಸಮಾರಂಭ ಉದ್ಘಾಟಿಸಿದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶಾಹೀ ಸೇವಾ ಕಾರ್ಯವನ್ನು ಪ್ರಶಂಸಿಸಿದರು.

ಶಾಹಿಯ ಆಡಳಿತ ವಿಭಾಗದ ಜಿ.ಎಂ. ಲಕ್ಷಣ ಧರ್ಮಟ್ಟಿ, ಮಾನವ ಸಂಪನ್ಮೂಲ ವಿಭಾಗದ ಜಿ.ಎಂ. ಬೀನೇಶ್ ಕುಮಾರ, ಮಾನವ ಸಂಪನ್ಮೂಲ ವಿಭಾಗದ ಎಜಿಎಂ ಪ್ರಶಾಂತ್ ಎಂ ಆರ್. ವಿಭಾಗ, ಹಾಗೂ ಸಿ ಎಸ್ ಆರ್ ತಂಡದ ನಾಗಯ್ಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ಡಿಟಿಓ ನಟರಾಜು, ಎಎಂ. ಓ ಅರುಣ್ ಕುಮಾರ್ ಉಪಸ್ಥಿತರಿದ್ದರು.

Author