ಶಿವಮೊಗ್ಗ ನಗರದಲ್ಲಿ ಆಹಾರ ಸುರಕ್ಷಿತ ಅಂಕಿತ ಅಧಿಕಾರಿ, ಎ ಸಿ ಸತ್ಯನಾರಾಯಣ ಮತ್ತು ಆಹಾರ ಪಡಿತರ ನಿರ್ದೇಶಕ ಅವಿನ್, ತಾಲೂಕ್ ಅರೋಗ್ಯ ಅಧಿಕಾರಿ ಚಂದ್ರಶೇಖರ್ ಹಾಗೂ ಮಹಾನಗರ ಪಾಲಿಕೆ ಅರೋಗ್ಯ ನಿರೀಕ್ಷಕರ ತಂಡ ಸತತವಾಗಿ 4 ದಿನಗಳಿಂದ ಶಿವಮೊಗ್ಗದ ಬೇಕರಿ ಹಾಗೂ ಸಿಹಿ ತಿಂಡಿ ಅಂಗಡಿಗಳ ಮೇಲೆ ನಿರಂತರ ತಪಾಸಣೆ ಕಾರ್ಯಾಚರಣೆಗೆ ಇಳಿದಿದೆ.
ಕೆಲ ದಿನಗಳ ಹಿಂದೆ ನಗರದ ಕೇಕ್ ಮನೆ, ಕೇಕ್ ವರ್ಲ್ಡ್ ಸಿಹಿ ತಿಂಡಿ ಘಟಕಗಳ ಮೇಲೆ ದಾಳಿ ಮಾಡಿತ್ತು ಅದರಂತೆ ಗಾಂಧಿ ಬಜಾರ್ ನಲ್ಲಿ ಸಹ ಕಾರ್ಯಾಚರಣೆ ಮಾಡಿದ್ದರು.

ಇಂದು ಶಿವಮೊಗ್ಗ ನಗರದ ದುರ್ಗಿಗುಡಿ ಅಯ್ಯಂಗಾರ್ ಬೇಕರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅದರಂತೆ ಸಿಹಿ ಹಾಗೂ ಖಾರ ತಿಂದಿಗಳ ಮೇಲೆ ಲೇಬಲ್ ಹಾಕದೆ ಪ್ಯಾಕ್ ಮಾಡದೇ, ಶುಚಿತ್ವ ಉಲ್ಲಂಘನೆ, Manufacturing Date ಹಾಕದೆ, Best Before Use( Expiry Date) ಮಾಹಿತಿ ಇಲ್ಲದೆ ಮಾರಾಟ ಮಾಡುತಿದ್ದ, ತಿಂಡಿ ತಿನಿಸುಗಳನ್ನ ನಾಶ ಮಾಡಲಾಗಿದೆ.
ನಂತರ ಸಂಸ್ಥೆ ಮಾಲೀಕರಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.

ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಬೇಕರ್ಸ್ ಮಾಫಿಯ ಸಂಬಂಧ ಪ್ರಸ್ತುತ ದಾಳಿ ಮುಂದುವರೆದಿದೆ



