ಶಿವಮೊಗ್ಗ | ನೂತನ ಎಸ್ಪಿಗೆ, ಕರವೇ ಸ್ವಾಭಿಮಾನಿ ಬಣದಿಂದ ಶುಭಾಶಯ ಹಾಗೂ ಮನವಿ

ಶಿವಮೊಗ್ಗ

ಶಿವಮೊಗ್ಗ, ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ನಿಖಿಲ್. ಬಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಶುಭಾಶಯ ಕೋರಲಾಯಿತು.

ಶಿವಮೊಗ್ಗ ಜಿಲ್ಲೆ ಸೊರಬ. ನಗರ ಹಾಗೂ ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಬಹಿಷ್ಕಾರ ಪದ್ಧತಿಯ ವಿಚಾರವಾಗಿ ಮಾಹಿತಿಯನ್ನು ತಿಳಿಸಲಾಯಿತು ಈ ಹಳ್ಳಿಗಳಲ್ಲಿ ಪ್ರತ್ಯೇಕ ಸಂವಿಧಾನದ ವ್ಯವಸ್ಥೆ ಇದೆ ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗ ತಿಳಿಸಿದರು.

ಈ ಹಂತದಲ್ಲಿ ಬಹಿಷ್ಕಾರ ಪದ್ಧತಿಯ ವಿಚಾರವಾಗಿ ಮನವಿಯನ್ನು ಸಹ ಸಲ್ಲಿಸುವ ಸಲ್ಲಿಸಲಾಯಿತು ಸೂಕ್ತವಾಗಿ ಸ್ಪಂದಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು ಹಂತ ಹಂತವಾಗಿ ಸರಿಪಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಖಜಾಂಚಿ ಗಣೇಶ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ನೂರಲ್ಲ, ಜಿಲ್ಲಾ ಯುವ ಘಟಕ ಸದನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಾಧ್ಯಮ ಸಲಹೆಗಾರ ಅನಿಲ್ ಕುಮಾರ್ ಪದಾಧಿಕಾರಿಗಳಾದ ಸತೀಶ್ ಆನ್ಸರ್ ಮುಂತಾದ ಕಾರ್ಯಕರ್ತರು ಹಾಜರಿದ್ದರು.

Author